ಕೋಲಾರ: ಪ್ರಿಯಕರನ ನಂಬಿ ಗಂಡನನ್ನು ಬಿಟ್ಟು ಬಂದಿದ್ದ ಮಹಿಳೆಯನ್ನು ಗರ್ಭಿಣಿ ಮಾಡಿ, ಈಗ ಪರಾರಿಯಾಗಿರುವುದು ಕೋಲಾರದಲ್ಲಿ ನಡೆದಿದೆ. ಮಹಿಳೆ ನ್ಯಾಯಕ್ಕಾಗಿ ಅಂಬೇಡ್ಕರ್ ಫೋಟೋ ಹಿಡಿದು, ಯುವಕನ ಮನೆ ಮುಂದೆ ಪ್ರತಿಭಟನೆ ನಡೆಸಿದ್ದಾಳೆ.
ಶ್ರೀನಿವಾಸಪುರ ಪಟ್ಟಣದ ಸುಭಾಶ್ ನಗರದ ಯುವಕ ವಂಚಿಸಿದ್ದಾನೆ ಎಂದು ಆರ್.ತಿಮ್ಮಸಂದ್ರ ಗ್ರಾಮದ ಮಹಿಳೆಯೊಬ್ಬಳು ಆರೋಪಿಸಿದ್ದಾಳೆ. ಬೆಂಗಳೂರಿನಲ್ಲಿ ಪತಿ ಜೊತೆಗೆ ವಾಸವಿದ್ದಾಗ, ಗಂಡನ ಸ್ನೇಹಿತನ ಪರಿಚಯವಾಗಿತ್ತು. ಬಳಿಕ ಇಬ್ಬರ ನಡುವೆ ಸಂಬಂಧ ಬೆಳೆದು, ಗಂಡನ ಬಿಟ್ಟು ಬಂದಿದ್ದಳು. ಈಗ ಮಹಿಳೆ 5 ತಿಂಗಳ ಗರ್ಭಿಣಿಯಾಗಿದ್ದು, ಮದುವೆಗೆ ನಿರಾಕರಿಸಿದ್ದಾನೆ ಎಂದು ಮಹಿಳೆ ಹೇಳಿಕೊಂಡಿದ್ದಾಳೆ.
ಗಂಡನನ್ನು ಬಿಟ್ಟು ಆತನ ಸ್ನೇಹಿತನ ಲವ್ ಬಲೆಗೆ ಬಿದ್ದಿದ್ದ ವಿವಾಹಿತ ಮಹಿಳೆ ಇದೀಗ ಬೀದಿ ಪಾಲಾಗಿದ್ದಾಳೆ. ಅತ್ತ ಗಂಡನನ್ನು ಬಿಟ್ಟು ಬಂದಿದ್ದ ಮಹಿಳೆಗೆ ಪ್ರಿಯಕರ ಸಹ ಕೈಕೊಟ್ಟಿದ್ದಾನೆ. ಇದರಿಂದ ಮಹಿಳೆ ಕಂಗಾಲಾಗಿದ್ದು, ಪ್ರತಿಭಟನೆ ಹಾದಿ ಹಿಡಿದಿದ್ದಾಳೆ. ಶ್ರೀನಿವಾಸಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಸರ್ಕಾರದ ನಿರ್ದೇಶನವಿದ್ದರೂ ವಿದ್ಯುತ್ ಸಂಪರ್ಕ ಕೊಡಲು ನಿರಾಕರಣೆ: ಬೆಸ್ಕಾಂ ಎಇಇ ವರ್ಗಾವಣೆಗೆ ಗುತ್ತಿಗೆದಾರರ ಪಟ್ಟು


