BBMP
Loading ...

KLSCEA

ದೇವನಹಳ್ಳಿ : ಯಾವುದೇ ಒಸಿ (ಸರ್ಕಾರ ಸ್ವಾಧಿನಾನುಭವ ಪತ್ರ), ಸಿಸಿ (ಮುಕ್ತಾಯ ಪತ್ರ) ಇಲ್ಲದೆ 500 ಚದರ ಅಡಿ ಇರುವ ಕಟ್ಟಡಗಳಿಗೆ ವಿದ್ಯುತ್​ ಸಂಪರ್ಕ ಕೊಡಬಹುದೆಂದು ಸರ್ಕಾರದ ನಿರ್ದೇಶನವಿದ್ದರೂ ದೇವನಹಳ್ಳಿ ಎಇಇ ಪಾಲನೆ ಮಾಡುತ್ತಿಲ್ಲ. ಇದರಿಂದ ಸಾರ್ವಜನಿಕರಿಗೆ ಹಾಗೂ ಗುತ್ತಿಗೆದಾರರಿಗೆ ತೊಂದರೆಯಾಗುತ್ತಿದ್ದು, ಅವರನ್ನು ತಕ್ಷಣ ವರ್ಗಾವಣೆ ಮಾಡಬೇಕು ಎಂದು ರಾಜ್ಯ ಅನುಮತಿ ಪಡೆದ ಎಸ್ಸಿ/ಎಸ್ಟಿ ಗುತ್ತಿಗೆದಾರರ ಸಂದ ರಾಜ್ಯಾಧ್ಯ ಡಿ.ಸುಧಾಕರ್​ ಒತ್ತಾಯಿಸಿದರು.

ಪಟ್ಟಣದ ಪ್ರವಾಸಿಮಂದಿರದಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಏ.4ಕ್ಕೂ ಮೊದಲೇ ನೋಂದಣೆಯಾಗಿರುವ ವಿದ್ಯುತ್​ ಸಂಪರ್ಕದ ಅರ್ಜಿಗಳನ್ನು ವಿಲೇ ಮಾಡಬೇಕು. ಒಪ್ಪಂದದ ಆಧಾರದ ಮೇಲೆ ವಿದ್ಯುತ್​ ಸಂಪರ್ಕ ನೀಡುವುದಾಗಿ ಹೇಳಿದ್ದಾರೆ. ಆದರೆ ಆ ನಿಯಮಗಳ ಪಾಲನೆ ಮಾಡುತ್ತಿಲ್ಲ. ಕೇಳಿದರೆ ಹೊಸದಾಗಿ ಒಸಿ, ಸಿಸಿ ತಂದುಕೊಡಿ ಎನ್ನುತ್ತಾರೆ. ಕಂದಾಯ ಇಲಾಖೆಗೆ ಸಂಬಂಧಿಸಿದಂತೆ ಕಾನೂನು ಬಾಹಿರವಾಗಿ ಕಟ್ಟಡಗಳು ಕಟ್ಟಿದರೆ ಬೆಸ್ಕಾಂ ಇಲಾಖೆಗೆ ಏನು ಸಮಸ್ಯೆ?. ನಾವು ವಿದ್ಯುತ್​ ಸಂಪರ್ಕಕ್ಕಾಗಿ ಅರ್ಜಿ ಸಲ್ಲಿಸಿದ್ದೇವೆ. ಠೇವಣೆ ಹಣ ಸಹ ಕಟ್ಟಿದ್ದೇವೆ. ಗ್ರಾಹಕರು ಗುತ್ತಿಗೆದಾರರ ಮೇಲೆ ಸಾಕಷ್ಟು ಒತ್ತಡ ಹೇರುತ್ತಿದ್ದಾರೆ. ಈ ಸಮಸ್ಯೆಗಳನ್ನು ತ್ವರಿತವಾಗಿ ಬಗೆಹರಿಸಬೇಕು ಎಂದರು.

ಕಚೇರಿಯಲ್ಲಿ ಸಿಗೋದಿಲ್ಲ : ದೇವನಹಳ್ಳಿ ಬೆಸ್ಕಾಂ ಎಇಇ 3 ಗಂಟೆ ನಂತರ ಸಾರ್ವಜನಿಕರ ಸಂಪರ್ಕಕ್ಕೆ ಲಭ್ಯವಿರುವುದಾಗಿ ಕಚೇರಿಯಲ್ಲಿ ನಾಮಫಲಕ ಅಳವಡಿಸಿದ್ದಾರೆ. ಆದರೆ ಅವರು ಕಚೇರಿಯಲ್ಲಿ ಲಭ್ಯವಿರುವುದಿಲ್ಲ. ಸಾರ್ವಜನಿಕರು ಸಮಸ್ಯೆಗಳಿಗಾಗಿ ಅಲೆದಾಡಬೇಕಿದೆ. ವಿದ್ಯುತ್​ ಅಪಘಾತಗಳ ಬಗ್ಗೆ ಸಾರ್ವಜನಿಕರಾಗಲಿ ಗುತ್ತಿಗೆದಾರರಾಗಲಿ ಕರೆ ಮಾಡಿದರೆ ಎಇಇ ಸ್ವೀಕರಿಸುವುದಿಲ್ಲ ಎಂದು ಡಿ.ಸುಧಾಕರ್​ ಆರೋಪಿಸಿದರು.

ನಡೆಯದ ಕುಂದುಕೊರತೆ ಸಭೆ : ಪ್ರತಿ ತಿಂಗಳು ಸಾರ್ವಜನಿಕರ ಕುಂದುಕೊರತೆ ಸಭೆ ಮಾಡಬೇಕು. ಮಾಧ್ಯಮಗಳಲ್ಲಿ ಪ್ರಕಟಣೆ ನೀಡಿ ಕುಂದುಕೊರತೆ ಸಭೆಗೆ ಸಾರ್ವಜನಿಕರನ್ನು ಆಹ್ವಾನಿಸಬೇಕು. ಸಭೆ ನಡೆಸದೆ ಕಚೇರಿಯಲ್ಲಿ ಯಾರನ್ನಾದರು ಕೂರಿಸಿ ೋಟೋ ತೆಗೆದು ಕುಂದುಕೊರತೆ ಸಭೆ ನಡೆಸಿದ್ದೇವೆ ಎಂದು ಮೇಲಧಿಕಾರಿಗಳಿಗೆ ಕಳುಹಿಸುತ್ತಿದ್ದಾರೆ. ಈ ರೀತಿಯಾದರೆ ಸಾರ್ವಜನಿಕರು ಸಮಸ್ಯೆ ಬಗೆಹರಿಸಿಕೊಳ್ಳುವುದಾದರೂ ಹೇಗೆ ಎಂಬ ಪ್ರಶ್ನೆ ಮೂಡುತ್ತಿದೆ ಎಂದು ಗುತ್ತಿಗೆದಾರರು ತಿಳಿಸಿದರು.

ಗುತ್ತಿಗೆದಾರರು ಹೇಳುವ ಸಮಸ್ಯೆ ದೇವನಹಳ್ಳಿ ಮಾತ್ರವಲ್ಲ ಇಡೀ ರಾಜ್ಯದಲ್ಲಿದೆ. ಅದು ನಮ್ಮ ಕೈಯಲ್ಲಿ ಇಲ್ಲ. ನಾನು ಇಲ್ಲಿಂದ ವರ್ಗಾವಣೆ ಆದ ಮಾತ್ರಕ್ಕೆ ಸಮಸ್ಯೆ ಬಗೆಹರಿಯುವುದಿಲ್ಲ. ಯಾರೆ ಬಂದರೂ ಅವರು ಸರ್ಕಾರ ಹೇಳಿದಂತೆ ಕೇಳಬೇಕು. ನಾನು ಸಚಿವರ ಬೆಂಬಲವಿದೆ ಎಂದು ಹೇಳಿಕೊಂಡಿಲ್ಲ. ಸರ್ಕಾರದ ನಿಯಮದಂತೆ ನಡೆಯುತ್ತೇನೆ ಎಂದಿದ್ದೇನೆ. ನಾನು ಬಂದಾಗಿನಿಂದ 268 ರೈತರಿಗೆ ಪಂಪ್​ ಸೆಟ್​ಗಳಿಗೆ ಒಂದು ರೂಪಾಯಿ ಪಡೆಯದೆ ಟಿಸಿ ಹಾಕಿಸಿಕೊಟ್ಟಿದ್ದೇನೆ. ಕೆಲ ಗುತ್ತಿಗೆದಾರರು ಅಕ್ರಮವಾಗಿ ಕೆಲಸ ಮಾಡಿಸಿಕೊಳ್ಳಲು ಬಂದಿದ್ದು, ನಾನು ನಿರಾಕರಿಸಿದ್ದಕ್ಕೆ ನನ್ನ ಮೇಲೆ ಸಲ್ಲದ ಆಪಾದನೆ ಮಾಡುತ್ತಿದ್ದಾರೆ ಎಂದು ಬೆಸ್ಕಾಂ ಎಇಇ ಲಕ್ಷ್ಮೀಕಾಂತ್​ ಹೇಳಿದರು.

ಸ್ಮಾರ್ಟ್ ಮೀಟರ್: ನಮ್ಮ ಪಕ್ಕದ ರಾಜ್ಯದಲ್ಲಿ 900 ರೂಪಾಯಿ, ಇಲ್ಯಾಕೆ 10 ಸಾವಿರ: ಸರ್ಕಾರಕ್ಕೆ ಕೋರ್ಟ್ ಪ್ರಶ್ನೆ

Leave a Reply

Your email address will not be published. Required fields are marked *