ಬೆಂಗಳೂರು: ಈಗ ಇರುವ ಬಿಬಿಎಂಪಿ ವ್ಯಾಪ್ತಿಯೇ ಗ್ರೇಟರ್ ಬೆಂಗಳೂರಿಗೂ ಇರಲಿದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಸಂಬಂಧ ವಿಧಾನಸೌಧದಲ್ಲಿ ಸಭೆ ನಡೆಸಿ ಮಾತನಾಡಿದ ಅವರು, ಗ್ರೇಟರ್ ಬೆಂಗಳೂರು ಯಾವ ರೀತಿ ವಿಭಜನೆ ಆಗಬೇಕು ಎಂದು ಫೈನಲ್ ರಿಪೋರ್ಟ್ ಕೊಟ್ಟಿದ್ದಾರೆ. ವಿಪಕ್ಷ ನಾಯಕರ ಜೊತೆಯೂ ನಾನು ಮಾತನಾಡಬೇಕಿತ್ತು. ಆದರೆ ಆ ದಿನ ಅವರು ಇರಲಿಲ್ಲ. ರಿಪೋರ್ಟ್ ಕೊಟ್ಟಿರುವವರು ವಿಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಇದೆಲ್ಲವೂ ಆದ ಮೇಲೆ ಇದನ್ನು ಕ್ಯಾಬಿನೆಟ್‌ಗೆ ತೆಗೆದುಕೊಂಡು ಹೋಗ್ತೀನಿ. ಈಗ ಇರುವ ಬಿಬಿಎಂಪಿ ವ್ಯಾಪ್ತಿಯೇ ಗ್ರೇಟರ್ ಬೆಂಗಳೂರಿಗೂ ಇರಲಿದೆ. ಮುಂದೆ ಹೊಸ ವ್ಯಾಪ್ತಿಯನ್ನು ಸೇರಿಸುವ ನಿರ್ಧಾರ ಮಾಡ್ತೀವಿ ಎಂದರು.
ಈಗ ಎಲ್ಲವನ್ನೂ ಸಮಾನವಾಗಿ ವಿಂಗಡಿಸಲಾಗಿದೆ. ಹೊಸ ವ್ಯಾಪ್ತಿ ಸೇರಿಸುವ ಬಗ್ಗೆ ಮುಂದೆ ನೋಡೋಣ. ಈ ರಿಪೋರ್ಟ್ ಮುಂದಿನ ಕ್ಯಾಬಿನೆಟ್‌ನಲ್ಲಿ ತಂದು ಎಲೆಕ್ಷನ್ ಮಾಡುವ ಬಗ್ಗೆ ತೀರ್ಮಾನ ಮಾಡ್ತೀವಿ. ಮುಂದೆ ಹೊಸ ವ್ಯಾಪ್ತಿಯನ್ನು ಸೇರಿಸಬೇಕಾಗುತ್ತದೆ. ಸದ್ಯಕ್ಕೆ ಹೊಸ ವ್ಯಾಪ್ತಿ ಸೇರಿಸುವುದಿಲ್ಲ ಎಂದು ತಿಳಿಸಿದರು.
ಪ್ರಿಯಕರನ ನಂಬಿ ಗಂಡನ ಬಿಟ್ಟು ಬಂದ ಮಹಿಳೆ: ಗರ್ಭಿಣಿ ಮಾಡಿ ಪರಾರಿಯಾದ ಯುವಕ!


