BBMP
Loading ...

GBA

Greater Bengaluru News9 : ಜಿಬಿಎ ಚುನಾವಣೆ ನಡೆಸಲು 3 ತಿಂಗಳ ಕಾಲಾವಕಾಶ ಕೇಳಿದ್ದ ರಾಜ್ಯ ಸಕಾ೯ರಕ್ಕೆ 2 ತಿಂಗಳ ರಿಲೀಫ್ ಸಿಕ್ಕಿದೆ. ಆಗಸ್ಟ್ 31 ರೊಳಗೆ ಎಲೆಕ್ಷನ್ ನಡೆಸಲು ಸುಪ್ರೀಂಕೋಟ್೯ ಆದೇಶ ನೀಡಿದೆ. ಜೊತೆಗೆ ಕಾಲಾವಕಾಶ ಕೇಳಿ ಮತ್ತೆ ಅಜಿ೯ ಸಲ್ಲಿಸದಂತೆ ಸುಪ್ರೀಂಕೋಟ್೯ ತಾಕೀತು ಮಾಡಿದೆ. ಪ್ರಸ್ತುತ ಇರುವ ಮತದಾರರ ಪಟ್ಟಿಯಲ್ಲೇ ಜಿಬಿಎ ಚುನಾವಣೆ ನಡೆಯಲಿದೆ. ರಾಜ್ಯ ಸಕಾ೯ರಕ್ಕೆ ಚುನಾವಣೆಗೆ ತಯಾರಿ ಮಾಡಿಕೊಳ್ಳಲು ಸಮಯಾವಕಾಶ ಸಿಕ್ಕಂತಾಗಿದೆ.

ಬೆಂಗಳೂರು ಮಹಾನಗರದ ಬಹುದಿನಗಳಿಂದ ಬಾಕಿ ಉಳಿದಿರುವ ಪಾಲಿಕೆ ಚುನಾವಣೆಗಳನ್ನು, ಜೂನ್ 30 ರೊಳಗೆ ಚುನಾವಣೆ ನಡೆಸಬೇಕೆಂಬ ಗಡುವನ್ನು ಸೆಪ್ಟೆಂಬರ್ 30 ರವರೆಗೆ ವಿಸ್ತರಿಸುವಂತೆ ಕೋರಿ ಕರ್ನಾಟಕ ರಾಜ್ಯ ಸರ್ಕಾರ ಮತ್ತು ರಾಜ್ಯ ಚುನಾವಣಾ ಆಯೋಗ ಸುಪ್ರೀಂ ಕೋರ್ಟ್‌ಗೆ ಮಧ್ಯಂತರ ಅರ್ಜಿಗಳನ್ನು ಸಲ್ಲಿಸಿತ್ತು.

ರಾಜ್ಯದಲ್ಲಿ ಸದ್ಯ ರಾಷ್ಟ್ರೀಯ ಜನಗಣತಿ ಮತ್ತು ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ಪ್ರಕ್ರಿಯೆಗಳು ಏಕಕಾಲದಲ್ಲಿ ನಡೆಯುತ್ತಿರುವುದರಿಂದ, ಚುನಾವಣೆ ನಡೆಸಲು ಅಗತ್ಯವಿರುವ ಮಾನವ ಸಂಪನ್ಮೂಲ ಹಾಗೂ ಅಧಿಕಾರಿಗಳ ಕೊರತೆ ಎದುರಾಗಿದೆ ಎಂದು ಗ್ರೇಟರ್ ಬೆಂಗಳೂರು ಅಥಾರಿಟಿ ಮತ್ತು ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿವೆ. ಜೂನ್ 30 ರ ಗಡುವಿನೊಳಗೆ ಚುನಾವಣೆ ನಡೆಸಲು ಆರಂಭದಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದ್ದರೂ, ಈ ಪ್ರಮುಖ ಪ್ರಕ್ರಿಯೆಗಳು ಒಟ್ಟಿಗೆ ಎದುರಾಗಿರುವುದರಿಂದ ಕಾಲಾವಕಾಶ ಕೋರಿರುವ ಸರ್ಕಾರದ ಈ ಮನವಿ ನ್ಯಾಯಸಮ್ಮತವಾಗಿದೆ ಎಂದು ಚುನಾವಣಾ ಆಯೋಗವು ತನ್ನ ಪ್ರತ್ಯೇಕ ಅರ್ಜಿಯಲ್ಲಿ ಉಲ್ಲೇಖಿಸಿದೆ.

ರಾಜ್ಯ ಸರ್ಕಾರದ ಪರ ವಕೀಲರಾದ ಸಂಚಿತ್ ಗರ್ಗ್ ಅವರು ಸುಪ್ರೀಂ ಕೋರ್ಟ್‌ನ ರಿಜಿಸ್ಟ್ರಾರ್ ಅವರಿಗೆ ಪತ್ರ ಬರೆದು, ಈ ಮಧ್ಯಂತರ ಅರ್ಜಿಯ ತುರ್ತು ವಿಚಾರಣೆಗೆ ವಿನಂತಿಸಿದ್ದಾರೆ. ನ್ಯಾಯಾಲಯ ವಿಧಿಸಿರುವ ಜೂನ್ ಗಡುವು ಮುಗಿಯುವ ಮುನ್ನವೇ ಈ ವಿಷಯ ಇತ್ಯರ್ಥವಾಗದಿದ್ದರೆ ಮತ್ತು ನಿಗದಿತ ಜುಲೈ 20 ರ ವಿಚಾರಣೆಯವರೆಗೆ ಕಾಯ್ದರೆ, ತಾಂತ್ರಿಕ ಹಾಗೂ ಕಾನೂನಾತ್ಮಕ ತೊಡಕುಗಳು ಎದುರಾಗಲಿವೆ ಎಂದು ಅವರು ವಾದಿಸಿದ್ದಾರೆ. ಬೆಂಗಳೂರಿನಲ್ಲಿ ಸೆಪ್ಟೆಂಬರ್ 2020 ರಿಂದಲೂ ಸ್ಥಳೀಯ ಸಂಸ್ಥೆಯ ಚುನಾವಣೆಗಳು ನಡೆಯದೆ ಬಾಕಿ ಉಳಿದಿವೆ. ಇಂದು ವಿಚಾರಣೆ ನಡೆಸಿದ ಸುಪ್ರೀಂಕೋಟ್೯ ಆಗಸ್ಟ್ 31 ರೊಳಗೆ ಎಲೆಕ್ಷನ್ ನಡೆಸಲು ಕಾಲಾವಕಾಶ ನೀಡಿದೆ.

Leave a Reply

Your email address will not be published. Required fields are marked *