ಕಾಶ್ಮೀರ: ನಿನ್ನೆ ( ಏಪ್ರಿಲ್ 22 ) ಭಾರತೀಯರ ಪಾಲಿಗೆ ಕಪ್ಪು ದಿನವಾಗಿ ಮಾರ್ಪಟ್ಟಿದೆ. ಜಮ್ಮು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಉಗ್ರರು ಅಟ್ಟಹಾಸ ಮೆರೆದಿದ್ದು ಮನಬಂದಂತೆ ಪ್ರವಾಸಿಗರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ.
ಬೇಸಿಗೆ ನಿಮಿತ್ತ ದೇಶದ ವಿವಿಧ ಭಾಗಗಳಿಂದ ಪ್ರವಾಸಕ್ಕೆಂದು ಆಗಮಿಸಿದ್ದ ಜನರು ಉಗ್ರರ ಗುಂಡೇಟಿಗೆ ಬಲಿಯಾಗಿದ್ದಾರೆ.
ಇನ್ನು ಈ ದಾಳಿಯಲ್ಲಿ ರಾಜ್ಯದ ಮೂವರು ಬಲಿಯಾಗಿದ್ದು, ಶಿವಮೊಗ್ಗದ ಉದ್ಯಮಿ ಮಂಜುನಾಥ್ ಹಾಗೂ ಹಾವೇರಿಯ ಭರತ್ ಭೂಷಣ್ ಎಂದು ತಿಳಿದುಬಂದಿದೆ.
ತಮ್ಮ ಕುಟುಂಬದ ಸದಸ್ಯರನ್ನು ತಮ್ಮ ಕಣ್ಣೆದುರೇ ಕಳೆದುಕೊಂಡವರ ಸಂಕಟ ಹೇಳತೀರಲಾಗಿದ್ದು, ಘಟನೆಯಲ್ಲಿ ಕೆಲವರು ಗಾಯಕ್ಕೊಳಗಾಗಿದ್ದಾರೆ. ಸದ್ಯ ಸ್ಥಳಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಆಗಮಿಸಿ ತುರ್ತು ಸಭೆ ನಡೆಸಿದ್ದಾರೆ.
पहलगाम में हुए आतंकी हमले में 16 लोगों की मौत की सूची जारी कर दी गई है। 10 घायल के भी नाम…#PahalgamAttack #Pahalgam #JammuKashmir #TerriostAttack #PahalgamTerroristAttack pic.twitter.com/0U1AydepwS
— Sumit Kumar (@skphotography68) April 22, 2025
ಘಟನೆಯಲ್ಲಿ ಒಟ್ಟು 16 ಮಂದಿ ಮೃತಪಟ್ಟಿದ್ದು, 10 ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕೃತ ಮಾಹಿತಿ ಹೊರಬಿದ್ದಿದೆ. ಮೃತಪಟ್ಟವರು ಯಾರು, ಯಾವ ಊರಿನವರು ಎಂಬ ಮಾಹಿತಿಯನ್ನು ಮುಂದಿನ ಟ್ವೀಟ್‌ನಲ್ಲಿ ಕಾಣಬಹುದಾಗಿದೆ.
ಬಂಗಾರ ಇನ್ನು ಬಲು ದುಬಾರಿ! 1 ಲಕ್ಷ ರೂ. ಗಡಿ ದಾಟಿದ ಚಿನ್ನದ ದರ, ಬೆಲೆ ಇಳಿಕೆಯಾಗುತ್ತಾ?


