BBMP
Loading ...

Gold

ಬೆಂಗಳೂರು: ನಿರೀಕ್ಷೆಯಂತೆ ದೇಶದಲ್ಲಿ 10 ಗ್ರಾಂ ಚಿನ್ನದ ಬೆಲೆ ಬರೋಬ್ಬರಿ 1 ಲಕ್ಷ ರೂಪಾಯಿ ಗಡಿ ದಾಟಿದೆ. ಕೆಲವು ದಿನಗಳಿಂದ ಮಾರುಕಟ್ಟೆ ವಿಶ್ಲೇಷಕರು ಹಳದಿ ಲೋಹದ ಬೆಲೆ 1 ಲಕ್ಷ ರೂ. ಗಡಿ ದಾಟಲಿದೆ ಎಂದು ಹೇಳುತ್ತಿದ್ದರು. ಅದರಂತೆ ಬಂಗಾರದ ಬೆಲೆ ಇಂದು (ಏಪ್ರಿಲ್​ 22) ಲಕ್ಷ ರೂ. ಗಡಿ ದಾಟುವ ಮೂಲಕ ಸಾರ್ವಕಾಲಿಕ ಏರಿಕೆ ಕಂಡಿದೆ. ಇಂದು ಬೆಳಗ್ಗೆ 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ 3,000 ರೂ.ಗಳಷ್ಟು ಹೆಚ್ಚಾಗಿ 1,01,350 ರೂ.ಗಳಿಗೆ ತಲುಪಿದೆ. ಈ ಮೂಲಕ ಮಧ್ಯಮ ವರ್ಗದವರಿಗೆ ಚಿನ್ನ ಕೊಳ್ಳುವ ಕನಸು ಇನ್ನು ಮುಂದೆ ಕನಸಾಗೇ ಉಳಿಯಲಿದೆ.

ದೆಹಲಿಯಲ್ಲಿ 22 ಕ್ಯಾರೆಟ್​ನ 10 ಗ್ರಾಂ ಚಿನ್ನದ ಬೆಲೆ 2,750 ರೂ. ಏರಿಕೆಯಾಗಿ 93,050 ರೂ. ತಲುಪಿದ್ದರೆ, 24 ಕ್ಯಾರೆಟ್​ನ 10 ಗ್ರಾಂ ಚಿನ್ನದ ಬೆಲೆ 3,000 ರೂ. ಏರಿಕೆಯಾಗಿ 1,01,500 ರೂ. ತಲುಪಿದೆ. 18 ಕ್ಯಾರೆಟ್​ನ 10 ಗ್ರಾಂ ಚಿನ್ನದ ಬೆಲೆ 2,250 ರೂ. ಏರಿಕೆಯಾಗಿ 76,140 ರೂ. ತಲುಪಿದೆ. ಮುಂಬೈನಲ್ಲಿ 22 ಕ್ಯಾರೆಟ್​ನ 10 ಗ್ರಾಂ ಚಿನ್ನದ ಬೆಲೆ 2,750 ರೂ. ಏರಿಕೆಯಾಗಿ 92,900 ರೂ. ತಲುಪಿದೆ. 24 ಕ್ಯಾರೆಟ್​ನ 10 ಗ್ರಾಂ ಚಿನ್ನದ ಬೆಲೆ 3,000 ರೂ. ಏರಿಕೆಯಾಗಿ 1,01,350 ರೂ. ತಲುಪಿದೆ ಮತ್ತು 18 ಕ್ಯಾರೆಟ್​ನ 10 ಗ್ರಾಂ ಚಿನ್ನದ ಬೆಲೆ 2,250 ರೂ. ಏರಿಕೆಯಾಗಿ 76,010 ರೂ. ತಲುಪಿದೆ.

ಕಷ್ಟದ ಸಮಯದಲ್ಲಿ ಚಿನ್ನ ಸಹಾಯ ಮಾಡುತ್ತದೆ ಎಂಬ ನಂಬಿಕೆ ಇದೆ. ಸಾಮಾನ್ಯ ವ್ಯಕ್ತಿಯಾಗಿರಲಿ ಅಥವಾ ಶ್ರೀಮಂತ ವ್ಯಕ್ತಿಯಾಗಿರಲಿ, ತಮ್ಮ ಕಷ್ಟಪಟ್ಟು ಸಂಪಾದಿಸಿದ ಹಣದಿಂದ ಬಹಳಷ್ಟು ಚಿನ್ನವನ್ನು ಉಳಿಸಿ ಹೂಡಿಕೆಯಾಗಿ ಉಳಿಸುವುದು ಸಂಪ್ರದಾಯವಾಗಿದೆ. ಮನೆಯಲ್ಲಿ ಹೆಣ್ಣು ಮಗು ಇದ್ದರೆ, ಮಗುವಿನ ಭವಿಷ್ಯ, ಮದುವೆಗಾಗಿ ಚಿನ್ನವನ್ನು ಸಂಗ್ರಹಿಸುವುದು ಭಾರತೀಯ ಕುಟುಂಬಗಳಲ್ಲಿ ಮೊದಲ ಆದ್ಯತೆಯಾಗಿದೆ. ಅಷ್ಟೇ ಅಲ್ಲ, ಅದು ಹಬ್ಬವಾಗಲಿ ಅಥವಾ ಆಚರಣೆಯಾಗಲಿ, ಆಭರಣಗಳನ್ನು ಧರಿಸಬೇಕು. ಇದು ನಮ್ಮ ಸ್ಥಾನಮಾನವನ್ನು ತೋರಿಸುವ ಸಾಧನವೂ ಆಗಿದೆ. ತಲೆಮಾರುಗಳಿಂದ ಕುಟುಂಬದ ಭಾಗವಾಗಿರುವ ಈ ಅಮೂಲ್ಯ ಲೋಹವು ಈಗ ಎಲ್ಲೆಡೆ ಜನಪ್ರಿಯವಾಗಿದೆ. ಎಲ್ಲರೂ ನಿರೀಕ್ಷಿಸಿದಂತೆ, ತೆರಿಗೆಗಳು ಸೇರಿದಂತೆ 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ 1 ಲಕ್ಷ ರೂ. ದಾಟಿದೆ. ಹೀಗಾಗಿ ಮಧ್ಯಮ ವರ್ಗದ ಜನರಿಗೆ ಚಿನ್ನ ಇದೀಗ ದುಸ್ವಪ್ನವಾಗಿದೆ.

ಷೇರು ಮಾರುಕಟ್ಟೆಯ ಏರಿಕೆಯ ನಡುವೆಯೂ ಚಿನ್ನದ ಬೆಲೆಗಳ ಮುನ್ಸೂಚನೆಯ ಕುರಿತು ಎಚ್‌ಡಿಎಫ್‌ಸಿ ಸೆಕ್ಯುರಿಟೀಸ್‌ನ ಸರಕು ಮತ್ತು ಕರೆನ್ಸಿ ವಿಭಾಗದ ಮುಖ್ಯಸ್ಥ ಅನುಜ್ ಗುಪ್ತಾ ಪ್ರತಿಕ್ರಿಯಿಸಿದ್ದು, ಚಿನ್ನದ ಬೆಲೆಗಳನ್ನು ಹೆಚ್ಚಿಸುವ ಎಲ್ಲ ಅಂಶಗಳು ಇನ್ನೂ ಪ್ರಭಾವ ಬೀರುತ್ತಿವೆ. ಹೀಗಾಗಿ ಚಿನ್ನದ ಬೆಲೆಯಲ್ಲಿ ಗಮನಾರ್ಹ ಕುಸಿತ ಸದ್ಯಕ್ಕೆ ಅಸಾಧ್ಯವಾಗಿದೆ. ಹಳದಿ ಲೋಹದ ಬೆಲೆಯಲ್ಲಿ ಯಾವುದೇ ಕುಸಿತವನ್ನು ಖರೀದಿಗೆ ಅವಕಾಶವೆಂದು ಪರಿಗಣಿಸಬೇಕು. ಏಕೆಂದರೆ, ಮುಂದೆ ಬೆಲೆ ಇನ್ನಷ್ಟು ಹೆಚ್ಚಾಗಲಿದೆ ಎಂದು ಸಲಹೆ ನೀಡಿದ್ದಾರೆ.

ಕನ್ನಡಿಗನಿಂದ ಹಲ್ಲೆ ಅಂತ ಗೂಬೆ ಕೂರಿಸಿದ್ದ ವಿಂಗ್ ಕಮಾಂಡರ್ ಮುಖವಾಡ ಬಯಲು; ಬೈಕ್ ಸವಾರನ ಮೇಲೆ ತಾನೇ ಹಲ್ಲೆ ಮಾಡಿದ್ದ ವಿಡಿಯೋ ವೈರಲ್​

Leave a Reply

Your email address will not be published. Required fields are marked *