BBMP
Loading ...

Student

ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ ಅನ್ನೋ ಮಾತಿದೆ. ಈ ಹಿಂದೆ ಗುರು ಎಂದರೆ ಭಯ, ಭಕ್ತಿ ಇತ್ತು. ಆದರೆ, ಇಂದಿನ ಕೆಲವು ವಿದ್ಯಾರ್ಥಿಗಳಲ್ಲಿ ಅದು ಸಂಪೂರ್ಣ ಕಣ್ಮರೆಯಾಗಿದೆ. ಶಿಕ್ಷಕರೊಂದಿಗೆ ಅನುಚಿತವಾಗಿ ವರ್ತಿಸುವ ಮೂಲಕ ಜೀವನದಲ್ಲಿ ಹಾದಿ ತಪ್ಪುತ್ತಿದ್ದಾರೆ. ಇದಕ್ಕೆ ತಾಜಾ ಉದಾಹರಣೆ ಈ ಘಟನೆ.

ಆಂಧ್ರ ಪ್ರದೇಶದ ವಿಜಯನಗರ ಜಿಲ್ಲೆಯ ಇಂಜಿನಿಯರಿಂಗ್ ಕಾಲೇಜಿನಲ್ಲಿ ಅನಿರೀಕ್ಷಿತ ಘಟನೆಯೊಂದು ನಡೆದಿದೆ. ಕಾಲೇಜು ಆವರಣದಲ್ಲಿ ವಿದ್ಯಾರ್ಥಿನಿಯೊಬ್ಬಳು ಫೋನ್‌ನಲ್ಲಿ ಮಾತನಾಡುತ್ತಿದ್ದಾಗ, ಅದನ್ನು ಗಮನಿಸಿದ ಮಹಿಳಾ ಉಪನ್ಯಾಸಕಿಯೊಬ್ಬರು ವಿದ್ಯಾರ್ಥಿನಿಯನ್ನು ತಡೆದು, ಆಕೆಯಿಂದ ಫೋನ್ ಕಸಿದುಕೊಂಡರು. ಇದರಿಂದ ಕೋಪಗೊಂಡ ವಿದ್ಯಾರ್ಥಿನಿ, ಉಪನ್ಯಾಸಕಿ ಜತೆ ಅಲ್ಲಿಯೇ ವಾಗ್ವಾದಕ್ಕೆ ಇಳಿದಳು.

ಫೋನ್​ ಕೊಡುವಂತೆ ಉಪನ್ಯಾಸಕಿಯನ್ನು ಒತ್ತಾಯಿಸಿದ ವಿದ್ಯಾರ್ಥಿನಿ, ಬಾಯಿಗೆ ಬಂದಂತೆ ನಿಂದಿಸಿದಳು. ಯಾವಾಗ ಉಪನ್ಯಾಸಕಿ ಫೋನ್​ ಕೊಡಲು ನಿರಾಕರಿಸಿದರು ತನ್ನ ಕಾಲಿನಲ್ಲಿದ್ದ ಚಪ್ಪಲಿಯೊಂದನ್ನು ಕಳಚಿದ ವಿದ್ಯಾರ್ಥಿನಿ, ಉಪನ್ಯಾಸಕಿಯ ಮೇಲೆ ಹಲ್ಲೆ ಮಾಡಿದಳು. ಈ ವೇಳೆ ಉಪನ್ಯಾಸಕಿ ಕೂಡ ಆಕೆಯ ವಿರುದ್ಧ ಪ್ರತಿದಾಳಿ ನಡೆಸಿದರು.

ಸಹ ವಿದ್ಯಾರ್ಥಿಗಳು ಮತ್ತು ಇನ್ನೊಬ್ಬ ವ್ಯಕ್ತಿ ಮಧ್ಯಪ್ರವೇಶಿಸಿ ಜಗಳವನ್ನು ತಡೆದರು. ಈ ವೇಳೆ ಅಲ್ಲೇ ಇದ್ದ ಮತ್ತೊಬ್ಬ ವಿದ್ಯಾರ್ಥಿ ಈ ಘಟನೆಯನ್ನು ರೆಕಾರ್ಡ್ ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದೆ. ಈ ಬಗ್ಗೆ ಕಾಲೇಜು ಆಡಳಿತ ಮಂಡಳಿ ಇನ್ನೂ ಪ್ರತಿಕ್ರಿಯಿಸಿಲ್ಲ. ಆದರೆ, ನೆಟ್ಟಿಗರು ಮಾತ್ರ ವಿದ್ಯಾರ್ಥಿನಿಯ ನಡೆಯನ್ನು ಟೀಕಿಸುತ್ತಿದ್ದಾರೆ.

ಪಹಲ್ಗಾಮ್‌ ಉಗ್ರರ ದಾಳಿ: ಮೃತಪಟ್ಟವರು ಹಾಗೂ ಗಾಯಗೊಂಡವರ ಪಟ್ಟಿ ಬಿಡುಗಡೆ

Leave a Reply

Your email address will not be published. Required fields are marked *