BBMP
Loading ...

ಬೆಂಗಳೂರು: ಕಳೆದೊಂದು ತಿಂಗಳಿನಿಂದ ರಾಜ್ಯ ರಾಜಕಾರಣದಲ್ಲಿ ಭಾರೀ ಸದ್ದು ಮಾಡ್ತಿರುವ ಸಿಎಂ ಸಿದ್ದರಾಮಯ್ಯ ವಿರುದ್ಧದ ಮೂಡಾ ಕೇಸ್ ಇಂದು ಪ್ರತಿಭಟನೆಯ ಸಮರ ನಡೆಯಿತು. ರಾಜ್ಯಪಾಲರು ಹಾಗೂ ಬಿಜೆಪಿ ವಿರುದ್ಧ ಸರ್ಕಾರ ಪ್ರತಿಭಟನೆ ಮಾಡಿದ್ರೆ, ಸರ್ಕಾರದ ವಿರುದ್ಧ ಬಿಜೆಪಿ- ಜೆಡಿಎಸ್ ಮೈತ್ರಿ ನಾಯಕರು ಹೋರಾಟ ಮಾಡಿದ್ರು. ರಾಜ್ಯಪಾಲರ ಪ್ರಾಸಿಕ್ಯೂಷನ್ ವಾರ್ ರಾಜಕೀಯವಾಗಿ ಸಂಚಲನ ಸೃಷ್ಟಿಸ್ತಿದ್ದು ಟಾಕ್ ವಾರ್ ಗೆ ವೇದಿಕೆಯಾಗ್ತಿದೆ….

ಕಳೆದೊಂದು ತಿಂಗಳಿನಿಂದ ಸದ್ದು ಮಾಡ್ತಿದ್ದ ಸಿಎಂ ಸಿದ್ದರಾಮಯ್ಯ ವಿರುದ್ಧದ ಮೂಡಾ ಕೇಸ್ ಪಾಲಿಟಿಕ್ಸ್ . ಮೊನ್ನೆ ಶನಿವಾರ ರಾಜ್ಯಪಾಲರು ಪ್ರಾಸಿಕ್ಯೂಷನ್ ಗೆ ಅನುಮತಿ ಕೊಟ್ಮೇಲೆ ಬೇರೆಯದ್ದೇ ದಿಕ್ಕು ಪಡೆದಿದೆ ಆಡಳಿತ ವಿಪಕ್ಷಗಳ ಮಧ್ಯೆ ಟಾಕ್ ವಾರ್ ಗೆ ವೇದಿಕೆಯಾಗಿದೆ. ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ನಾಯಕರು ಇಂದು ಒಬ್ಬರ ಮೇಲೊಬ್ಬರು ಪ್ರತಿಭಟನೆ ನಡೆಸಿದ್ರು. ಫ್ರೀಡಂ ಪಾರ್ಕ್ ನಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ಕೈ ನಾಯಕರು ರಾಜ್ಯಪಾಲರು ಹಾಗೂ ಬಿಜೆಪಿ ವಿರುದ್ಧ ಪ್ರತಿಭಟನೆ ಮಾಡಿದ್ರೆ. ವಿಧಾನಸೌಧದಲ್ಲಿ ಸರ್ಕಾರದ ವಿರುದ್ಧ ಬಿಜೆಪಿ- ಜೆಡಿಎಸ್ ಮೈತ್ರಿ ನಾಯಕರು ವಿಪಕ್ಷ ನಾಯಕ ಅಶೋಕ್ ನೇತೃತ್ವದಲ್ಲಿ ಹೋರಾಟ ನಡೆಸಿದ್ರು….

ಕಾಂಗ್ರೆಸ್ ಪ್ರತಿಭಟನೆಯಲ್ಲಿ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್ ಬಿಜೆಪಿ- ಜೆಡಿಎಸ್ ವಿರುದ್ಧ ಆಕ್ರೋಶ ಹೊರಹಾಕಿದ್ರು ಜನತಾ ದಳದ ಅಗ್ರಗಣ್ಯ ನಾಯಕ, ನವರಂಗಿ ನಕಲಿ ಸ್ವಾಮಿ. ಬರೀ ಬುರುಡೇ ಬಿಟ್ಟುಕೊಂಡು ಇರುವ ನವರಂಗಿ ನಕಲಿ ಸ್ವಾಮಿವಿರುದ್ದ ಲೋಕಾಯುಕ್ತ ವರದಿ ಇದ್ರೂ ಯಾಕೆ ನವರಂಗಿ ನಕಲಿ ಸ್ವಾಮಿ ಗೆ ಪ್ರಾಸಿಕ್ಯುಷನ್ ಕೊಡಲಿಲ್ಲ. 10 ವರ್ಷ ಈ ಸರ್ಕಾರ ಬಲಿಷ್ಟವಾಗಿರುತ್ತದೆ, ಈ ಸರ್ಕಾರವನ್ನು ಹತ್ತು ಜನ್ಮ ಎತ್ತಿ ಬಂದರೂ ಬೀಳಿಸಲು ಸಾಧ್ಯವಿಲ್ಲ ಮಂತ್ರದಿಂದ ಮಾವಿನಕಾಯಿ ಉದುರಲ್ಲ. ಸಿಎಂ ರಾಜೀನಾಮೆ ಕೊಡುವ ಪ್ರಶ್ನೆ ಬರುವುದಿಲ್ಲ ಈ ಸರ್ಕಾರವನ್ನು ಉಳಿಸಿಕೊಳ್ತೇವೆ, ನ್ಯಾಯಾಲಯದ ಮೇಲೆ ನಂಬಿಕೆ ಇದೆ ಪ್ರಾಸಿಕ್ಯುಷನ್ ಧಿಕ್ಕರಿಸಿ ನಮಗೆ ನ್ಯಾಯ ಸಿಗುವ ನಂಬಿಕೆ‌ ಇದೆ ಎಂದ್ರು ಡಿಕೆಶಿ…..

ಇತ್ತ ಸಿಎಂ ಸಿದ್ದರಾಮಯ್ಯ ಸಹ ಬಿಜೆಪಿ ಹಾಗೂ ರಾಜ್ಯಪಾಲರ ವಿರುದ್ಧ ಕಿಡಿ ಕಾರಿದ್ರು ನಾನು ಯಾವುದೇ ತಪ್ಪು ಮಾಡಿಲ್ಲ ಮಾಡೋದು ಇಲ್ಲ. ರಾಜಭವನವನ್ನ ಬಿಜೆಪಿ, ಜೆಡಿಎಸ್ ಕೇಂದ್ರದವರು ಬಳಸಿಕೊಂಡು ಷಡ್ಯಂತ್ರ ಮಾಡ್ತಿದ್ದಾರೆ, ರಾಜಕೀಯ ದುರುದ್ದೇಶದಿಂದ ಮಸಿ ಬಳಿಯೋ ಕೆಲಸ ಮಾಡ್ತಿದ್ದಾರೆ. ರಾಜಕೀಯ ದುರುದ್ದೇಶದಿಂದ ಬಿಜೆಪಿ ಪ್ರತಿಭಟನೆ ಮಾಡ್ತಿದೆ, ಕಾನೂನಾತ್ಮಕವಾಗಿಯೂ ನಾವು ಹೋರಾಟ ಮಾಡ್ತಿವಿ ಎಂದು ಗುಡುಗಿದ್ರು ಸಿಎಂ…

ಕಾಂಗ್ರೆಸ್ ಪ್ರತಿಭಟನೆಗೆ ಟಕ್ಕರ್ ಕೊಡಲು ಮೈತ್ರಿ ನಾಯಕರು ವಿಧಾನಸೌಧದ ಗಾಂಧಿ ಪ್ರತಿಮೆ ಎದುರು ಪ್ರತಿಭಟನೆ ಮಾಡಿದ್ರು. ಈ ವೇಳೆ ಮಾತನಾಡಿದ ವಿಪಕ್ಷ ನಾಯಕ ಅಶೋಕ ಸಿದ್ದರಾಮಯ್ಯ ನೇತೃತ್ವದಲ್ಲಿ ಇಷ್ಟೋಂದು ಲೂಟಿ ಆಗ್ತಿದೆ ನೀವೇ ಲೂಟಿ ಮಾಡ್ತಿದ್ದೀರಿ ಅಂತ ಅರ್ಥ. ಡಿಕೆಶಿ ನೀವೇ ಹೋರಾಟ ಮಾಡಿ, ಕಲ್ಲು ಹೊಡೀರಿ ಅಂತ ಹೇಳ್ತಾರೆ, ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆ ಹಾಳಾದ್ರೆ, ನೀವೇ ನೇರ ಹೊಣೆ. ರಾಜ್ಯದಲ್ಲಿ ತಕ್ಷಣದಿಂದ ರಾಷ್ಟ್ರಪತಿ ಆಡಳಿತ ಬರಲಿ ಅಂತ ಆಗ್ರಹಿಸಿದ್ರು ಅಶೋಕ. ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ‌ ಸಿಎಂ ವಿರುದ್ಧ ಆಕ್ರೋಶ ಹೊರಹಾಕಿದ್ರು ನಮ್ಮ ಹೋರಾಟ ತಾರ್ಕಿಕ ಅಂತ್ಯಕೆ ಬಂದಿದೆ. ಸಿಎಂ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡೋದು ಬಿಟ್ಟು ಬೆಂಬಲಿಗರು ಹಾಗೂ ಹೈಕಮಾಂಡ್ ಜೊತೆ ಸೇರಿ ಗೂಂಡಾಗಿರಿ ಮಾಡಲು ಹೊರಟಿದ್ದಾರೆ. ರಾಜ್ಯಪಾಲರ ಮೇಲೆ ದಬ್ಬಾಳಿಕೆ ಮಾಡೋದು ಬಿಟ್ಟು ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡಿ.ತಮ್ಮ ಬೆಂಬಲಕ್ಕೆ ಸಚಿವರು, ಶಾಸಕರು ನಿಲ್ತಾರೆ ಅನ್ನೋ ಬಂಡತನ ಬಿಡಿ ಅಂತ ಕಿಡಿಕಾರಿದ್ರು ವಿಜಯೇಂದ್ರ‌….

ಒಟ್ನಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧದ ಪ್ರಾಸಿಕ್ಯೂಷನ್ ವಾರ್ ರಾಜಕೀಯವಾಗಿ ದೊಡ್ಡ ವಾಕ್ಸಮರಕ್ಕೆ ವೇದಿಕೆಯಾಗಿದೆ. ಒಬ್ಬರ ಮೇಲೊಬ್ಬರು ಆಡಳಿತ, ವಿಪಕ್ಷದ ನಾಯಕರು ಆಕ್ರೋಶ ಹೊರಹಾಕ್ತಿದ್ದಾರೆ. ಸಿಎಂ ರಾಜೀನಾಮೆ ಗೆ ಮೈತ್ರಿ ನಾಯಕರು ಪಟ್ಟು ಹಿಡಿದಿದ್ರೆ, ಕಾಂಗ್ರೆಸ್ ನಾಯಕರು ಸಿದ್ದರಾಮಯ್ಯ ರಾಜೀನಾಮೆ ಕೊಡಲ್ಲ ಸರ್ಕಾರ ಬೀಳಲ್ಲ ಅನ್ನೋ ಆತ್ಮವಿಶ್ವಾಸದಲ್ಲಿದ್ದಾರೆ.ಸದ್ಯ ಕಾನೂನು ಹೋರಾಟಕ್ಕೆ ವೇದಿಕೆ ಸಜ್ಜಾಗಿದ್ದು ಯಾರು ಗೆಲ್ತಾರೆ ಎಂಬುದನ್ನು ಕಾದುನೋಡಬೇಕಿದೆ.

ಬೆಳ್ಳುಳ್ಳಿ ತೆಗೆದುಕೊಳ್ಳುವ ಮುನ್ನ ಎಚ್ಚರ: ಸಿಮೆಂಟ್‌ನಿಂದ ಮಾಡಿದ ನಕಲಿ ಬೆಳ್ಳುಳ್ಳಿ ಪತ್ತೆ

Leave a Reply

Your email address will not be published. Required fields are marked *