BBMP
Loading ...

ಆಹಾರ ಪದಾರ್ಥಗಳ ಕಲಬೆರಕೆ ಮತ್ತು ನಕಲಿ ಆಹಾರಗಳ ಮಾರಾಟ ಎಗ್ಗಿಲ್ಲದೆ ನಡೆಯುತ್ತಿದೆ. ಹೌದು ಈ ಹಿಂದೆ ಪ್ಲಾಸ್ಟಿಕ್ ಮೊಟ್ಟೆ, ಪ್ಲಾಸ್ಟಿಕ್ ಅಕ್ಕಿ, ನಕಲಿ ಪನೀರ್, ನಕಲಿ ಅಡುಗೆ ಎಣ್ಣೆ, ನಕಲಿ ದವಸ ಧಾನ್ಯಗಳ ಹಾವಳಿ ಹೆಚ್ಚಾಗಿತ್ತು. ಇದೀಗ ಬೆಳ್ಳುಳ್ಳಿಯ ಸರದಿ.

ಬೆಳ್ಳುಳ್ಳಿ ಬೆಲೆ ಗಗನಕ್ಕೇರುತ್ತಿದ್ದಂತೆ, ವ್ಯಾಪಾರಿಗಳು ಅಮಾಯಕ ನಾಗರಿಕರನ್ನು ವಂಚಿಸಿ ನಕಲಿ ಬೆಳ್ಳುಳ್ಳಿ ಮಾರಾಟ ಮಾಡಲು ಪ್ರಾರಂಭಿಸಿದ್ದಾರೆ. ಮಾರುಕಟ್ಟೆಗಳಲ್ಲಂತೂ ಈ ನಕಲಿ ಬೆಳ್ಳುಳ್ಳಿ ಹಾವಳಿ ತೀರಾ ಹೆಚ್ಚಾಗುತ್ತಿದೆ. ಮಹಾರಾಷ್ಟ್ರದ ಅಕೋಲಾ ಜಿಲ್ಲೆಯಲ್ಲಿ ಸಿಮೆಂಟ್‌ನಿಂದ ಮಾಡಿದ ನಕಲಿ ಬೆಳ್ಳುಳ್ಳಿಯನ್ನು ಮಾರಾಟ ಮಾಡುವುದು ಪತ್ತೆಯಾಗಿದೆ.

ಈ ಕುರಿತ ಪೋಸ್ಟ್ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, “ದೇಶಾದ್ಯಂತ ಬೆಳ್ಳುಳ್ಳಿ ಬೆಲೆ ಗಗನಕ್ಕೇರಿದ್ದು, ಈ ಮಧ್ಯೆ ಮಹಾರಾಷ್ಟ್ರದ ಅಕೋಲಾದಲ್ಲಿ ಕೆಲ ವ್ಯಾಪಾರಿಗಳು ಸಿಮೆಂಟ್‌ನಿಂದ ತಯಾರಿಸಿದ ನಕಲಿ ಬೆಳ್ಳುಳ್ಳಿಯನ್ನು ಮಾರಾಟ ಮಾಡಿ ನಾಗರಿಕರನ್ನು ವಂಚಿಸುತ್ತಿರುವ ಆಘಾತಕಾರಿ ಪ್ರಕರಣವೊಂದು ಬೆಳಕಿಗೆ ಬಂದಿದೆ” ಎಂಬ ಶೀರ್ಷಿಕೆಯನ್ನು ಬರೆದುಕೊಳ್ಳಲಾಗಿದೆ. ವೈರಲ್ ವಿಡಿಯೋದಲ್ಲಿ ಥೇಟ್ ಬೆಳ್ಳುಳ್ಳಿಯಂತೆ ಇರುವ ಸಿಮೆಂಟ್ ನಿಂದ ಮಾಡಿದ ನಕಲಿ ಬೆಳ್ಳುಳ್ಳಿಯನ್ನು ಕಾಣಬಹುದು.

ನಾಳೆ ಸೇರಿ ಐದು ದಿನ ನಮ್ಮ ಮೆಟ್ರೋ ಹಸಿರು ಮಾರ್ಗದಲ್ಲಿ ರೈಲು ಸಂಚಾರ ಸ್ಥಗಿತ

Leave a Reply

Your email address will not be published. Required fields are marked *