BBMP
Loading ...

ಇನ್ನು ಮುಂದೆ ಬೇಕರಿ ಮತ್ತು ಕಾಂಡಿಮೆಂಟ್ಸ್‌ ಗಳಲ್ಲಿ ಸಿಗರೇಟ್, ಗುಟ್ಕಾ ಮತ್ತು ತಂಬಾಕು ಮಾರಾಟ ಮಾಡಲು ಬೃಹತ್ ಬೆಂಗಳೂರು ಮಹಾ ನಗರ ಪಾಲಿಕೆ ಬ್ರೇಕ್ ಹಾಕಾಲು ಮುಂದಾಗಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಎಲ್ಲೇ ಸಿಗರೆಟ್, ಗುಟ್ಕಾ ಮತ್ತು ತಂಬಾಕು ಮಾರಾಟ ಮಾಡಬೇಕು ಎಂದರೆ ಲೈಸೆನ್ಸ್ ಪಡೆಯುವುದು ಕಡ್ಡಾಯ ಎಂಬ ನಿಯಮವನ್ನು ಜಾರಿಗೆ ತರಲು ಹೊರಟಿದೆ. ಒಂದು ವೇಳೆ ಈ ನಿಯಮ ಉಲ್ಲಂಘಿಸಿ ಯಾರಾದರೂ ಬೇಕರಿ ಮತ್ತು ಕಾಂಡಿಮೆಂಟ್ಸ್‌ ಗಳಲ್ಲಿ ಸಿಗರೆಟ್, ಗುಟ್ಕಾ ಮತ್ತು ತಂಬಾಕು ಮಾರಾಟ ಮಾಡಿದರೆ ಭಾರೀ ದಂಡ ತೆತ್ತಬೇಕಾಗುತ್ತದೆಯಂತೆ.

ವಾಸ್ತವವಾಗಿ ಬೇಕರಿ ಮತ್ತು ಕಾಂಡಿಮೆಂಟ್ಸ್‌ ಗಳಲ್ಲಿ ಸಿಗರೇಟ್, ಗುಟ್ಕಾ ಮತ್ತು ತಂಬಾಕು ಮಾರಾಟ ಮಾಡಲು ಬಿಬಿಎಂಪಿ (BBMP) ಅಥವಾ ಇನ್ನಾವುದೇ ಸರ್ಕಾರಿ ಸಾಮ್ಯದ ಸಂಸ್ಥೆ ಪರವಾನಗಿ ನೀಡಿರುವುದಿಲ್ಲ. ಆದರೂ ಬೆಂಗಳೂರಿನಲ್ಲಿ ಈಗ ಬೇಕರಿ ಮತ್ತು ಕಾಂಡಿಮೆಂಟ್ಸ್‌ ಗಳಲ್ಲಿ ಕೂಡ ಸಿಗರೆಟ್, ಗುಟ್ಕಾ ಮತ್ತು ತಂಬಾಕು ಮಾರಾಟ ಮಾಡಲಾಗುತ್ತಿದೆ. ಈ ಅಕ್ರಮ ತಡೆಯಬೇಕು ಎಂದು ಪಣತೊಟ್ಟಿರುವ ಬಿಬಿಎಂಪಿ ಎಲ್ಲೇ ಸಿಗರೇಟ್ (Cigarette), ಗುಟ್ಕಾ ಮತ್ತು ತಂಬಾಕು ಮಾರಾಟ ಮಾಡಬೇಕು ಎಂದರೆ ಲೈಸೆನ್ಸ್ ಪಡೆಯುವುದು ಕಡ್ಡಾಯ (License is Mandatory) ಎಂಬ ನಿಯಮವನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ಮುಂದಾಗಿದ್ದು ಅದಕ್ಕಾಗಿ ಅಗತ್ಯ ತಯಾರಿ ಮಾಡಿಕೊಳ್ಳುತ್ತಿದೆ.

ಮುಂದಿನ ತಿಂಗಳೇ ಬೆಂಗಳೂರು ನಗರದಲ್ಲಿ ಈ ಹೊಸ ನಿಯಮ ಅಧಿಕೃತವಾಗಿ ಜಾರಿಗೆ ಬರಲಿದೆ. ನಿಯಮ ಬಂದ ಬಳಿಕವೂ ಬೇಕರಿ ಮತ್ತು ಕಾಂಡಿಮೆಂಟ್ಸ್‌ ಗಳಲ್ಲಿ ಅನಧಿಕೃವಾಗಿ ಸಿಗರೇಟ್, ಗುಟ್ಕಾ ಮತ್ತು ತಂಬಾಕು ಮಾರಾಟ ಮಾಡಿದರೆ ಅಂಥವರಿಗೆ ಬೀಳುತ್ತೆ 5000 ರೂಪಾಯಿ ದಂಡ. ಮೊದಲ ಬಾರಿಗೆ 5000 ರೂಪಾಯಿ ದಂಡ, ಪುನರಾವರ್ತನೆ ಮಾಡಿದರೆ ದಿನಕ್ಕೆ 100 ರೂಪಾಯಿಗಳಂತೆ ದಂಡ ವಿಧಿಸಲಾಗುವುದು. ಜೊತೆಗೆ ಉದ್ದಿಮೆ ಪರವಾನಗಿಯನ್ನು ರದ್ದುಪಡಿಸಲು ಹೊಸ ನಿಯಮದಲ್ಲಿ ಅವಕಾಶ ನೀಡಲಾಗಿದೆ.

ಅನಧಿಕೃವಾಗಿ ಸಿಗರೇಟ್, ಗುಟ್ಕಾ ಮತ್ತು ತಂಬಾಕು ಮಾರಾಟ (Tobacco sales) ಮಾಡಿ ಅದರಿಂದ ₹ 5000 ದಂಡ ಕಟ್ಟುವುದನ್ನು ತಪ್ಪಿಸಿಕೊಳ್ಳಲು ಪರವಾನಗಿ ಪಡೆಯಬೇಕಾಗುತ್ತದೆ. ಸಿಗರೇಟ್, ಗುಟ್ಕಾ ಮತ್ತು ತಂಬಾಕು ಮಾರಾಟ ಮಾಡುವುದಕ್ಕೆ ಪರವಾನಗಿ ಪಡೆಯಲು ರಾಜ್ಯ ಸರ್ಕಾರದ 2022ರ ಆದೇಶದಂತೆ ಮಾರಟಗಾರರು 500 ರೂಪಾಯಿಗಳನ್ನು ಭರಿಸಬೇಕಾಗುತ್ತದೆ. ಸೆಪ್ಟೆಂಬ‌ರ್ ಮೊದಲ ವಾರದಲ್ಲಿ ಆನ್ ಲೈನ್ ನಲ್ಲಿ ಅರ್ಜಿ ದಾಖಲಿಸ ಬಹುದು. ಬಿಬಿಎಂಪಿ ಅಧಿಸೂಚನೆ ಹೊರಡಿಸುವ ಮೂಲಕ ಪರವಾನಗಿ ಪಡೆಯುವುದಕ್ಕೆ ಸೂಚನೆ ನೀಡಲಿದೆ. ಪರವಾನಗಿ ಪಡೆಯುವುದಕ್ಕೆ ವ್ಯಾಪಾರಿಗಳಿಗೆ 1 ತಿಂಗಳ ಕಾಲಾವಕಾಶ ಇರಲಿದೆ. ಅರ್ಜಿ ಸಲ್ಲಿಸಿದ ವ್ಯಾಪಾರಿ ಮಳಿಗೆಗಳಿಗೆ ಬಿಬಿಎಂಪಿ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ ನಂತರ ಪರವಾನಗಿ ನೀಡಲಿದ್ದಾರೆ.

ಆಡಳಿತ vs ವಿಪಕ್ಷಗಳ ಪ್ರತಿಭಟನೆ ವಾರ್: ಸದ್ಯ ಕಾನೂನು ಹೋರಾಟದಲ್ಲಿ ಗೆಲ್ಲೋರು ಯಾರು?

Leave a Reply

Your email address will not be published. Required fields are marked *