BBMP
Loading ...

Young Man

ಬೆಂಗಳೂರು: ಬೆಂಗಳೂರು: ರಾಜ್ಯದ ಹಲವೆಡೆ ಮಳೆ ಅಬ್ಬರಿಸಿದ್ದು, ಹಲವೆಡೆ ಭಾರೀ ಅವಾಂತರವನ್ನೇ ಮಾಡಿದೆ. ದಕ್ಷಿಣ ಕನ್ನಡ , ಉಡುಪಿ, ಕೊಡಗು, ಉತ್ತರ ಕನ್ನಡ ಸೇರಿ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುತ್ತಿದೆ. ಆದರೆ ಬೆಂಗಳೂರಿನಲ್ಲಿ ಮಳೆರಾಯ ಸ್ವಲ್ಪ ಬಿಡುವು ತೆಗೆದುಕೊಂಡಿದ್ದು, ಮರದ ಕೊಂಬೆ ಬಿದ್ದು ಯುವಕನೋರ್ವನ ಪರಿಸ್ಥಿತಿ ಗಂಭೀರವಾಗಿದೆ.

ಬೆಂಗಳೂರಿನ ಬನಶಂಕರಿ ಬ್ರಹ್ಮ ಚೈತನ್ಯ ಮಂದಿರದ ಬಳಿ ಭಾನುವಾರ ಒಣಗಿದ ಮರದ ಕೊಂಬೆ ಬಿದ್ದು ದ್ವಿಚಕ್ರ ವಾಹನ ಸವಾರನೊಬ್ಬ ಗಂಭೀರವಾಗಿ ಗಾಯಗೊಂಡ ಘಟನೆ ಬೆಳಕಿಗೆ ಬಂದಿದೆ. ಗಾಯಗೊಂಡ ಯುವಕನನ್ನು ಸ್ಥಳೀಯರು ತಕ್ಷಣ ಪ್ರಶಾಂತ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ವರದಿಗಳ ಪ್ರಕಾರ, ಯುವಕ ಜಯನಗರದ ಅಪೋಲೋ ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾನೆ ವರದಿಯಾಗಿದೆ.

ಗಾಯಗೊಂಡ ಯುವಕ ಶ್ರೀನಗರದ ನಿವಾಸಿಯಾಗಿದ್ದು, ಈತನ ಹೆಸರು ಅಕ್ಷಯ್ ಎಂದು ಗುರುತಿಸಲಾಗಿದೆ. ಹನುಮಂತನಗರ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದ್ದು, ಪೊಲೀಸ್ ಠಾಣೆಯಿಂದ ತನಿಖೆ ಆರಂಭವಾಗಿದೆ. ವರದಿಗಳ ಪ್ರಕಾರ, ಅಕ್ಷಯ್‌ನನ್ನು ಜಯನಗರದ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆತನ ಸ್ಥಿತಿ ಚಿಂತಾಜನಕವಾಗಿದೆ ಎನ್ನಲಾಗಿದೆ. ತಲೆಗೆ ಗಂಭೀರವಾಗಿ ಗಾಯವಾಗಿದೆ ಎನ್ನಲಾಗಿದೆ.

ಅಕ್ಷಯ್‌ನ ಚಿಕಿತ್ಸೆಗೆ ಈಗಾಗಲೇ ಕುಟುಂಬವು 1.5 ಲಕ್ಷ ರೂಪಾಯಿಗಳನ್ನು ಆಸ್ಪತ್ರೆಗೆ ಕಟ್ಟಿದೆ. ಆದರೆ, ಇನ್ನೂ ಸುಮಾರು ಒಂದು ಲಕ್ಷ ರೂಪಾಯಿಗಳನ್ನು ಕಟ್ಟಲು ಕುಟುಂಬಸ್ಥರು ಆರ್ಥಿಕವಾಗಿ ಪರದಾಡುತ್ತಿದ್ದಾರೆ ಎನ್ನಲಾಗಿದೆ. ಚಿಕಿತ್ಸೆಯನ್ನು ಮುಂದುವರಿಸಲು ಸಾಕಷ್ಟು ತೊಂದರೆಯನ್ನು ಎದುರಿಸುತ್ತಿರುವ ಕುಟುಂಬ, ಆರ್ಥಿಕ ನೆರವಿಗಾಗಿ ಕಾಯುತ್ತಿದೆ.

ಈ ಘಟನೆಗೆ ಬಿಬಿಎಂಪಿಯ ನಿರ್ಲಕ್ಷ್ಯವೇ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಘಟನೆ ನಡೆದ ಬಳಿಕ ಯಾವುದೇ ಬಿಬಿಎಂಪಿ ಅಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿರಲಿಲ್ಲ. ಭಾನುವಾರ ರಜೆಯ ಮಜದಲ್ಲಿದ್ದ ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೊನೆಗೆ, ಬಿಬಿಎಂಪಿ ಅರಣ್ಯಾಧಿಕಾರಿ ರಂಗನಾಥ್ ಸ್ವಾಮಿ ಜಯನಗರದ ಆಸ್ಪತ್ರೆಗೆ ಭೇಟಿ ನೀಡಿ, ಅಕ್ಷಯ್‌ನ ಆರೋಗ್ಯವನ್ನು ವಿಚಾರಿಸಿದ್ದಾರೆ.

ಅಕ್ಷಯ್‌ನ ತಂದೆಯ ಹುಟ್ಟುಹಬ್ಬದ ಸಂಭ್ರಮದ ದಿನವೇ ಈ ದುರ್ಘಟನೆ ಸಂಭವಿಸಿರೋದು ಶೋಚನೀಯ. ತಂದೆಯ ಹುಟ್ಟುಹಬ್ಬಕ್ಕಾಗಿ ಮಟನ್ ತರಲು ಮನೆಯಿಂದ ಹೊರಟಿದ್ದ ಅಕ್ಷಯ್‌ನ ಮೇಲೆ ಮರದ ಕೊಂಬೆ ಬಿದ್ದು, ಈ ದುರಂತ ಸಂಭವಿಸಿದೆ. ಇದೀಗ ಈ ದುರ್ಘಟನೆಯಿಂದಾಗಿ ಸಂಭ್ರಮದಲ್ಲಿದ್ದ ಕುಟುಂಬ ಕಣ್ಣೀರು ಹಾಕುತ್ತಿದೆ.

ಚಾಕ್ಲೆಟ್ ಪ್ರೀಯರೇ ಹುಷಾರ್: ಕೋಲಾರದಲ್ಲಿ ಚಾಕಲೇಟ್​​ನಲ್ಲಿ ಮನುಷ್ಯನ ಹಲ್ಲು ಪತ್ತೆ!

Leave a Reply

Your email address will not be published. Required fields are marked *