ಬೆಂಗಳೂರು: ಮೊಟ್ಟೆ ಎಸೆತ ಎಂಬ ಮುನಿರತ್ನನ ಪ್ರಯೋಜಿತ ಪ್ರಹಸನವಾಗಿದೆ ಎಂದು ಕಾಂಗ್ರೆಸ್ ಮುಖಂಡ ಲಗ್ಗೆರೆ ನಾರಾಯಣಸ್ವಾಮಿ ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮತನಾಡಿದ ಅವರು, ಒಕ್ಕಲಿಗ ಹೆಣ್ಣು ಮಕ್ಕಳ ಬಗ್ಗೆ ಕೀಳುಮಟ್ಟದ ಹೇಳಿಕೆ ನೀಡಿ ದಲಿತ ಸಮುದಾಯದ ನಿಂದನೆ ಮಾಡಿರುವ ಪ್ರಕರಣದ ಆಡಿಯೋ ಶಾಸಕ ಮುನಿರತ್ನನದ್ದೆ ಎಂದು ಸಾಬೀತಾಗಿದೆ. ಇದರಿಂದ ಬಂಧನ ಬೀತಿಯ ಜೊತೆಗೆ ಒಕ್ಕಲಿಗ ಸಮುದಾಯದ ಹಾಗೂ ಕ್ಷೇತ್ರದ ಜನರ ಸಂಪೂರ್ಣ ವಿರೋಧ ಕಟ್ಟಿಕೊಂಡಿರುವ ಈತ ತಾನು ಒಳ್ಳೆಯವನು ಎಂದು ಸಾಬೀತು ಪಡಿಸಿಕೊಳ್ಳಲು ಮತ್ತು ಜನರಲ್ಲಿ ಸಿಂಪತಿ ಕ್ರಿಯೇಟ್ ಮಾಡುವ ಉದ್ದೇಶದಿಂದ ತನ್ನ ಮೇಲೆಯೇ ಮೊಟ್ಟೆ ಹಾಕಿಕೊಡ್ಡಿದ್ದಾನೆ ಎಂದರು.
ವಿರೋಧಿಗಳ ಮೇಲೆ ಸುಳ್ಳು ದೂರು ದಾಖಲಿಸಿ, ಏಡ್ಸ್ ಟ್ರಾಪ್ ಮೂಲಕ ತನ್ನ ವಿರೋಧಿ ಜನಪ್ರತಿನಿಧಿಗಳ ಜೀವನ ಬೀದಿಗೆ ತಳ್ಳಿದ್ದ ಮುನಿರತ್ನ ತನ್ನವರಿಂದಲೇ ಮೊಟ್ಟೆ ಹಾಕಿಸಿಕೊಳ್ಳುವ ಮೂಲಕ ಮತ್ತೊಂದು ನಾಟಕ ಆರಂಭಿಸಿದ್ದಾನೆ ಎಂದು ಆರೋಪಿಸಿದರು
ಮೊಟ್ಟೆ ಮುನಿರತ್ನನ ತಲೆ ಮೇಲೆ ಬೀಳುವ ಮುನ್ನವೇ ಆ್ಯಸಿಡ್ ದಾಳಿ.. ಆ್ಯಸಿಡ್ ದಾಳಿ.. ಎಂದು ಜೋರಾಗಿ ಕೂಗಿದ್ದಾರೆ. ಇದರ ಜತೆಗೆ ದಲಿತ ಯುವಕನ ಕಾರನ್ನು ಪುಟಿಗಟ್ಟಿ ಶಾಸಕನ ಕಾರು ಎಂದು ಹೇಳಿಕೊಂಡಿದ್ದಾರೆ. ಇದು ಶಾಸಕ ಹಾಗೂ ಆತನ ತಂಡದ ಪ್ರಹಸಕ್ಕೆ ಕೈಗನ್ನಡಿ. ಇದರ ಜತೆಗೆ ಹಲವು ಜನರ ಮೇಲೆ ಸುಳ್ಳು ಪ್ರಕರಣದ ದಾಖಲಿಸಲಾಗಿದೆ ಎಂದು ವಿವರಿಸಿದ್ದಾರೆ.
ಬೆಂಗಳೂರು: ಬಿಡದಿ ಸ್ಥಾವರದಲ್ಲಿ ವಿದ್ಯುತ್ ಉತ್ಪಾದನೆ ಹೆಚ್ಚಿಸಲು ಇಂಧನ ಇಲಾಖೆ ಉತ್ಸುಕ


