ಬೆಂಗಳೂರು: ಗೋವಿಂದರಾಜ ನಗರದ ಕಾಂಗ್ರೆಸ್ ಶಾಸಕ ಪ್ರಿಯಕೃಷ್ಣ ಮತ್ತು ಮಾಜಿ ಮಹಾನಗರ ಪಾಲಿಕೆ ಸದಸ್ಯರಾದ ಉಮಾಶಂಕರ್ ಅವರ ನೇತೃತ್ವದಲ್ಲಿ ಇದೇ ಭಾನುವಾರದಂದು ಕಾರ್ಮಿಕರಿಗೆ ಸಂಬಂಧಿಸಿದ ಸೇವಾ ಸೌಲಭ್ಯ ಕಾರ್ಯಕ್ರಮ ನಡೆಯಲ್ಲಿದ್ದು, ಎಲ್ಲರು ಭಾಗವಹಿಸಿ ಸದುಪಯೋಗಪಡಿಸಿಕೊಳ್ಳಲು ಕೋರಲಾಗಿದೆ.
ಕರ್ನಾಟಕ ಸರ್ಕಾರ ಕಾರ್ಮಿಕ ಇಲಾಖೆಯ ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿಯಿಂದ ಅಂಬೇಡ್ಕರ್ ಕಾರ್ಮಿಕ ಸಹಾಯ ಹಸ್ತ ಯೋಜನೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಅದರ ವಿವರ ಈ ಕೆಳಕಂಡಂತಿದೆ.
ಕರ್ನಾಟಕ ರಾಜ್ಯ ಸರ್ಕಾರವು ಅಸಂಘಟಿತ ದುಡಿಯುತ್ತಿರುವ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಒದಗಿಸುವ ಉದ್ದೇಶದಿಂದ ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿಯ ಮೂಲಕ ಅಂಬೇಡ್ಕರ್ ಕಾರ್ಮಿಕ ಸಹಾಯ ಹಸ್ತ ಯೋಜನೆಯನ್ನು ಅನುಷ್ಠಾನಗೊಳಿಸುತ್ತಿದೆ. ಸದರಿ ಯೋಜನೆಯಡಿ ಈ ಕೆಳಕಂಡ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಅಸಂಘಟಿತ ಕಾರ್ಮಿಕರ ನೋಂದಣಿ ಮತ್ತು ಸ್ಕಾರ್ಟ್ ಕಾರ್ಡ್ ವಿತರಣೆ
ಈ ಯೋಜನೆಯಡಿ 20 ಅಸಂಘಟಿತ ವರ್ಗಗಳಾದ “ಹಮಾಲರು, ಚಿಂದಿ ಆಯುವವರು, ಗೃಹ ಕಾರ್ಮಿಕರು, ಟೈಲರ್‌ಗಳು, ಅಗಸರು, ಅಕ್ಕಸಾಲಿಗರು, ಕಮ್ಮಾರರು, ಕುಂಬಾರರು, ಕ್ಷೌರಿಕರು, ಭಟ್ಟಿ ಕಾರ್ಮಿಕರು, ಸಿನಿ ಕಾರ್ಮಿಕರು, ನೇಕಾರರು, ಬೀದಿ ಬದಿ ವ್ಯಾಪಾರಿಗಳು, ಹೋಟೆಲ್ ಕಾರ್ಮಿಕರು, ಫೋಟೋಗ್ರಾಫರ್ ಗಳು, ಸ್ವತಂತ್ರ ಲೇಖನ ಬರಹಗಾರರು, ಬೀಡಿ ಕಾರ್ಮಿಕರು, ಕಲ್ಯಾಣ ಮಂಟಪ/ಸಭಾ ಭವನ/ಟೆಂಟ್/ಪೆಂಡಾಲ್‌ಗಳ ಕೆಲಸ ನಿರ್ವಹಿಸುವ ಎಲ್ಲಾ ಕಾರ್ಮಿಕರು, ಅಸಂಘಟಿತ ವಿಕಲಚೇತನ ಕಾರ್ಮಿಕರು ಹಾಗೂ ಅಲೆಮಾರಿ ಪಂಗಡದ ಕಾರ್ಮಿಕ”ರನ್ನು ಉಚಿತವಾಗಿ ನೋಂದಾಯಿಸಿ ಸ್ಮಾರ್ಟ್ ಕಾರ್ಡ್ ನೀಡಲಾಗುತ್ತಿದೆ.
ಅರ್ಹತೆಗಳು
* ಈ ಯೋಜನೆಯು ಕರ್ನಾಟಕ ರಾಜ್ಯದ ನಿವಾಸಿಗಳಿಗೆ ಮಾತ್ರ ಅನ್ವಯ.
* ಅರ್ಜಿದಾರರ ವಯೋಮಿತಿ 18 ರಿಂದ 60 ವರ್ಷಗಳು.
* ಆದಾಯ ತೆರಿಗೆ ಪಾವತಿದಾರರಾಗಿರಬಾರದು.
* ಇ.ಎಸ್.ಐ. ಮತ್ತು ಇ.ಪಿ.ಎಫ್. ಸೌಲಭ್ಯ ಹೊಂದಿರಬಾರದು.
ನೋಂದಣಿಗಾಗಿ ಸಲ್ಲಿಸಬೇಕಾದ ದಾಖಲೆಗಳು
* ಪಾಸ್ ಪೋರ್ಟ್ ಅಳತೆಯ ಇತ್ತೀಚಿನ ಭಾವಚಿತ್ರ,
* ವಯಸ್ಸಿನ ಪ್ರಮಾಣ ಪತ್ರ (ಆಧಾರ್ ಕಾರ್ಡ್, ಶಾಲಾ ದಾಖಲೆ, ಜನನ ಪ್ರಮಾಣ ಪತ್ರ, ಚಾಲನಾ ಪರವಾನಿಗೆ, ಪಾಸ್ ಪೋರ್ಟ್, ಚುನಾವಣಾ ಗುರುತಿನ ಚೀಟಿ, ಜನ್ಮ ದಿನಾಂಕ ದಾಖಲಿಸಿದ ಪ್ಯಾನ್ ಕಾರ್ಡ್ ಇವುಗಳಲ್ಲಿ ಯಾವುದಾದರೊಂದು ಪ್ರತಿಯನ್ನು ಅಪ್ ಲೋಡ್ ಮಾಡುವುದು.)
* ಆಧಾರ್ ಕಾರ್ಡ್
* ಪಡಿತರ ಚೀಟಿ
1. ಅಪಘಾತ ಪರಿಹಾರ ಸೌಲಭ್ಯ
* ಅಪಘಾತದಿಂದ ಮರಣ ಹೊಂದಿದಲ್ಲಿ ಅವರ ನಾಮನಿರ್ದೇಶಿತರಿಗೆ ರೂ. 1 ಲಕ್ಷ ಪರಿಹಾರ. ಅಪಘಾತದಿಂದ ಸಂಪೂರ್ಣ / ಭಾಗಶಃ ಶಾಶ್ವತ ದುರ್ಬಲತೆ ಹೊಂದಿದಲ್ಲಿ ರೂ. 1.00 ಲಕ್ಷಗಳವರೆಗೆ ಪರಿಹಾರ (ಶೇಕಡವಾರು ದುರ್ಬಲತೆ ಆಧಾರದ ಮೇಲೆ).
* ಆಸ್ಪತ್ರೆ ವೆಚ್ಚ ಮರುಪಾವತಿ ರೂ. 50,000/- ಗಳವರೆಗೆ (ಅಪಘಾತ ಪ್ರಕರಣಗಳಲ್ಲಿ ಮಾತ್ರ)
2. ಸಹಜ ಮರಣ ಪರಿಹಾರ ಮತ್ತು ಅಂತ್ಯ ಕ್ರಿಯೆ ವೆಚ್ಚ
ನೋಂದಾಯಿತ ಫಲಾನುಭವಿಯು ವಯೋಸಹಜ/ಖಾಯಿಲೆ/ಅಕಾಲಿಕ ಅಥವಾ ಇನ್ನಿತರೆ ಕಾರಣಗಳಿಂದ ಮರಣ ಹೊಂದಿದಲ್ಲಿ ಫಲಾನುಭವಿಯ ಕುಟುಂಬದವರಿಗೆ ಅಂತ್ಯಕ್ರಿಯೆ ವೆಚ್ಚಕ್ಕಾಗಿ ರೂ. 10,000/-ಗಳ ಧನ ಸಹಾಯ.
ಮೇಲ್ಕಂಡ ಯೋಜನೆಯು ದಿನಾಂಕ 29-12-2024ನೇ ಭಾನುವಾರದಂದು ಬೆಳಿಗ್ಗೆ 9-30 ಗಂಟೆಗೆ ಜನಪ್ರಿಯ ಶಾಸಕರಾದ ಸನ್ಮಾನ್ಯ ಶ್ರೀ ಪ್ರಿಯಕೃಷ್ಣ ಅವರ ಅಧ್ಯಕ್ಷತೆಯಲ್ಲಿ ಉದ್ಘಾಟನೆಯಾಗಲಿದೆ. ಅರ್ಹ ಫಲಾನುಭವಿಗಳು ಸೌಲಭ್ಯಗಳನ್ನು ಪಡೆದುಕೊಳ್ಳಲು ಕೋರಲಾಗಿದೆ.
ಕಾರ್ಯಕ್ರಮ ನಡೆಯುವ ಸ್ಥಳ
ಈ ಕಾರ್ಯಕ್ರಮವು ಮಾಜಿ ಮಹಾನಗರ ಪಾಲಿಕೆ ಸದಸ್ಯರಾದ ಶ್ರೀ ಉಮಾಶಂಕರ್ ಡಿ ಅವರ ಕಚೇರಿ ಕಾರ್ಯಾಲದಲ್ಲಿ ನಡೆಯಲಿದೆ. ಕೆ.ಎಚ್.ಬಿ ಕಾಲನಿ ಬೆಸ್ಕಾಂ ಕಚೇರಿ ರಸ್ತೆಯ 24ನೇ ಅಡ್ಡರಸ್ತೆಯಲ್ಲಿ ನಡೆಯಲಿದೆ.
ಮತ್ತೊಂದು ಕಾರ್ಯಕ್ರಮ
ಕರ್ನಾಟಕ ರಾಜ್ಯ ಮೋಟಾರು ಸಾರಿಗೆ ಹಾಗೂ ಇತರೆ ಸಂಬಂಧಿತ ಕಾರ್ಮಿಕರ ಸಾಮಾಜಿಕ ಭದ್ರತೆ ಮತ್ತು ಕ್ಷೇಮಾಭಿವೃದ್ಧಿ ಮಂಡಳಿಯಿಂದ ನೋಂದಣಿ ಮತ್ತು ಸ್ಕಾರ್ಟ್ ಕಾರ್ಡ್ ವಿತರಣೆಯಾಗಲಿದೆ. ಅಸಂಘಟಿತ ವರ್ಗದ ಕಾರ್ಮಿಕರಲ್ಲಿ ಖಾಸಗಿ ವಾಣಿಜ್ಯ ಸಾರಿಗೆ ಹಾಗೂ ಇತರೆ ಸಂಬಂಧಿತ ಕಾರ್ಮಿಕರು ಬಹುಸಂಖ್ಯೆಯಲ್ಲಿದ್ದು, ಅವರಿಗೆ ಸಾಮಾಜಿಕ ಭದ್ರತೆ ಹಾಗೂ ಕಲ್ಯಾಣ ಸೌಲಭ್ಯಗಳನ್ನು ಒದಗಿಸುವ ಉದ್ದೇಶದಿಂದ, ಕರ್ನಾಟಕ ರಾಜ್ಯ ಸರ್ಕಾರವು, “ಕರ್ನಾಟಕ ಮೋಟಾರು ಸಾರಿಗೆ ಮತ್ತು ಇತರೆ ಸಂಬಂಧಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮತ್ತು ಕಲ್ಯಾಣ ಯೋಜನೆ”ಯನ್ನು ರೂಪಿಸಿದ್ದು, ಕರ್ನಾಟಕ ರಾಜ್ಯ ಮೋಟಾರು ಸಾರಿಗೆ ಹಾಗೂ ಇತರೆ ಸಂಬಂಧಿತ ಕಾರ್ಮಿಕರ ಸಾಮಾಜಿಕ ಭದ್ರತೆ ಮತ್ತು ಕ್ಷೇಮಾಭಿವೃದ್ಧಿ ಮಂಡಳಿಯ ಮೂಲಕ ಜಾರಿಗೊಳಿಸಲಾಗುತ್ತಿದೆ.
ಈ ಯೋಜನೆಯಡಿ ಚಾಲಕ, ನಿರ್ವಾಹಕ, ಕ್ಲೀನರ್, ನಿಲ್ದಾಣ ಸಿಬ್ಬಂದಿ, ಮಾರ್ಗ ಪರಿಶೀಲನಾ ಸಿಬ್ಬಂದಿ, ಬುಕಿಂಗ್ ಗುಮಾಸ್ತ, ನಗದು ಗುಮಾಸ್ತ, ಡಿಪೋ ಗುಮಾಸ್ತ, ಸಮಯ ಪಾಲಕ, ಕಾವಲುಗಾರ ಅಥವಾ ಪರಿಚಾರಕ, ಮೋಟಾರು ಗ್ಯಾರೇಜುಗಳಲ್ಲಿ ಟೈರ್ ಜೋಡಿಸುವ ಮತ್ತು ಬೇರ್ಪಡಿಸುವ ಘಟಕಗಳಲ್ಲಿ, ಪಂಚರ್ ದುರಸ್ತಿ ಮಳಿಗೆಗಳಲ್ಲಿ, ವೀಲ್ ಬ್ಯಾಲೆನ್ಸಿಂಗ್ ಮತ್ತು ಅಲೈಸ್ಟೆಂಟ್ ಘಟಕಗಳಲ್ಲಿ, ನೀರಿನಿಂದ ಸ್ವಚ್ಛಗೊಳಿಸುವ ಘಟಕಗಳಲ್ಲಿ ಕೆಲಸ ಮಾಡುವವರು ಮೋಟಾರು ವಾಹನ ಹೊರಕವಚ ನಿರ್ಮಾಣ ಘಟಕಗಳಲ್ಲಿ, ಟಿಂಕರಿಂಗ್, ಎಲೆಕ್ನಿಕಲ್ ಹಾಗೂ ಎಸಿ ಘಟಕ ಇತ್ಯಾದಿ ಸಂಸ್ಥೆಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಸುಮಾರು 40 ಲಕ್ಷ ಕಾರ್ಮಿಕರು ಒಳಗೊಂಡಿದ್ದು, ಯೋಜನೆಯಡಿ ನೋಂದಾಯಿಸಿ ಸ್ಮಾರ್ಟ್ ಕಾರ್ಡ್ ನೀಡಲಾಗುತ್ತಿದೆ.
ಅರ್ಹತೆಗಳು
* ಈ ಯೋಜನೆಯು ಕರ್ನಾಟಕ ರಾಜ್ಯಕ್ಕೆ ಮಾತ್ರ ಅನ್ವಯಿಸುತ್ತದೆ.
* ವಯೋಮಿತಿ 18 ರಿಂದ 60 ವರ್ಷ
* ಆದಾಯ ತೆರಿಗೆ ಪಾವತಿದಾರರಾಗಿರಬಾರದು.
* ಇ.ಎಸ್.ಐ. ಮತ್ತು ಇ.ಪಿ.ಎಫ್, ಸೌಲಭ್ಯ ಹೊಂದಿರಬಾರದು.
* ಯೋಜನೆಯ ಸೌಲಭ್ಯಗಳು ಕರ್ತವ್ಯದಲ್ಲಿರುವಾಗ ಹಾಗೂ ಇಲ್ಲದಿರುವಾಗಲೂ ಸಹ ಲಭ್ಯವಾಗುತ್ತವೆ.
* ಚಾಲಕರು, ಕರ್ನಾಟಕ ರಾಜ್ಯ ಸಾರಿಗೆ ಇಲಾಖೆಯಿಂದ ವಾಣಿಜ್ಯ ವಾಹನ ಚಲಾಯಿಸಲು ಊರ್ಜಿತ ಚಾಲನಾ ಪರವಾನಗಿಯನ್ನು ಹೊಂದಿರುವುದು ಕಡ್ಡಾಯ.
ಷರತ್ತುಗಳು
* ನೋಂದಣಿ ಶುಲ್ಕ (3 ವರ್ಷಗಳ ಅವಧಿ) 50 ರೂ.
* ನವೀಕರಣ ಶುಲ್ಕ (ಮುಂದಿನ 3 ವರ್ಷಗಳವರೆಗೆ) 50 ರೂ.
ಯೋಜನೆಯಡಿ ದೊರಕುವ ಸೌಲಭ್ಯಗಳು
1. ಅಪಘಾತ ಪರಿಹಾರ ಸೌಲಭ್ಯ
* ಅಪಘಾತದಿಂದ ಫಲಾನುಭವಿಗಳು ನಿಧನರಾದಲ್ಲಿ ನಾಮನಿರ್ದೇಶಿತರಿಗೆ ರೂ. 5 ಲಕ್ಷ ಪರಿಹಾರ.
* ಅಪಘಾತದಿಂದ ಶಾಶ್ವತ ದುರ್ಬಲತೆ ಹೊಂದಿದಾಗ, ಫಲಾನುಭವಿಗೆ ದುರ್ಬಲತೆಯ ಪ್ರಮಾಣಕ್ಕನುಗುಣವಾಗಿ ರೂ. 2 ಲಕ್ಷದವರೆಗೆ ಪರಿಹಾರ,
* ಅಪಘಾತದಿಂದ ತಾತ್ಕಾಲಿಕ ದುರ್ಬಲತೆ ಹೊಂದಿದಾಗ –
* ಅಪಘಾತಕ್ಕೊಳಗಾಗಿ ಆಸ್ಪತ್ರೆಯಲ್ಲಿ 15 ದಿನಗಳಿಗಿಂತ ಕಡಿಮೆ ಅವಧಿಗೆ ಒಳರೋಗಿಯಾಗಿ ಚಿಕಿತ್ಸೆ ಪಡೆದಲ್ಲಿ, ಗರಿಷ್ಠ ರೂ. 50,000/- ರವರೆಗೆ ಅಥವಾ ನಿಖರ ಆಸ್ಪತ್ರೆ ವೆಚ್ಚ. ಇವುಗಳಲ್ಲಿ ಯಾವುದು ಕಡಿಮೆಯೋ ಅದು ಹಾಗೂ 15 ದಿನಗಳಿಗಿಂತ ಹೆಚ್ಚು ಅವಧಿಗೆ ಒಳರೋಗಿಯಾಗಿ ಚಿಕಿತ್ಸೆ ಪಡೆದಲ್ಲಿ, ಗರಿಷ್ಠ ರೂ. 1 ಲಕ್ಷದವರೆಗೆ ಅಥವಾ ನಿಖರ ಆಸ್ಪತ್ರೆ ವೆಚ್ಚ, ಇವುಗಳಲ್ಲಿ ಯಾವುದು ಕಡಿಮೆಯೋ ಅದರ ಮರುಪಾವತಿ,
2. ನೈಸರ್ಗಿಕ ಮರಣ ಪರಿಹಾರ ಹಾಗೂ ಅಂತ್ಯಸಂಸ್ಕಾರ ವೆಚ್ಚ
ಸಹಜ ಮರಣ ಹೊಂದಿದ ಫಲಾನುಭವಿಗಳ ಅವಲಂಬಿತರಿಗೆ ಅಂತ್ಯ ಸಂಸ್ಕಾರ ವೆಚ್ಚವೂ ಸೇರಿದಂತೆ ರೂ. 25,000/-ಗಳ ಪರಿಹಾರ
(3) ಶೈಕ್ಷಣಿಕ ಧನಸಹಾಯ
ಬಿ ನೋಂದಾಯಿತ ಫಲಾನುಭವಿಯ ಗರಿಷ್ಠ ಇಬ್ಬರು ಮಕ್ಕಳಿಗೆ-
* 12ನೇ ತರಗತಿ ಅಥವಾ ತತ್ಸಮಾನ ವಾರ್ಷಿಕ ತಲಾ ರೂ. 3,000/-
* ಪದವಿ ಅಥವಾ ತತ್ಸಮಾನ ವಾರ್ಷಿಕ ತಲಾ ರೂ. 5,500/-
* ಇಂಜಿನಿಯರಿಂಗ್ ಹಾಗೂ ವೈದ್ಯಕೀಯ ಶಿಕ್ಷಣ – ವಾರ್ಷಿಕ ತಲಾ ರೂ. 8,000/-
* ಸ್ನಾತಕೋತ್ತರ ಪದವಿ – ವಾರ್ಷಿಕ ತಲಾ ರೂ. 11,000/-
ಅಪಘಾತದಿಂದ ನಿಧನರಾದ / ಸಂಪೂರ್ಣ ಶಾಶ್ವತ ದುರ್ಬಲತೆ ಹೊಂದಿದ ಫಲಾನುಭವಿಯ ಗರಿಷ್ಠ ಇಬ್ಬರು ಮಕ್ಕಳಿಗೆ –
* 1ನೇ ತರಗತಿಯಿಂದ ಪದವಿ ಅಥವಾ ತತ್ಸಮಾನ ವಾರ್ಷಿಕ ತಲಾ ರೂ. 10,000/-
* ಇಂಜಿನಿಯರಿಂಗ್ ಹಾಗೂ ವೈದ್ಯಕೀಯ ಶಿಕ್ಷಣ – ವಾರ್ಷಿಕ ತಲಾ ರೂ. 20,000/-
* ಸ್ನಾತಕೋತ್ತರ ಪದವಿ – ವಾರ್ಷಿಕ ತಲಾ ರೂ. 25,000/-
4. ಹೆರಿಗೆ ಭತ್ಯೆ : ಫಲಾನುಭವಿಯ ಮೊದಲ ಎರಡು ಹೆರಿಗೆಗಳಿಗೆ ಮಾತ್ರ ಸೀಮಿತಗೊಂಡಂತೆ ತಲಾ ರೂ. 10,000/- ಗಳು.
ಕ್ಲೈಮ್ ವಿಧಾನ : ಅರ್ಜಿದಾರ / ಫಲಾನುಭವಿಯು ಅಪಘಾತ ಪರಿಹಾರಕ್ಕಾಗಿ ಅಪಘಾತ ಸಂಭವಿಸಿದ 1 ವರ್ಷದೊಳಗೆ ಹಾಗೂ ಸಹಜ ಮರಣ ಪ್ರಕರಣಗಳಲ್ಲಿ ಮರಣ ದಿನಾಂಕದಿಂದ 6 ತಿಂಗಳ ಅವಧಿಯೊಳಗೆ ಹಾಗೂ ಶೈಕ್ಷಣಿಕ ಧನಸಹಾಯಕ್ಕಾಗಿ ಮಂಡಳಿಯು ಘೋಷಿಸಿದ ಅವಧಿಯಲ್ಲಿ ಸೇವಾ ಸಿಂಧು ಪೋರ್ಟಲ್ ಮೂಲಕ ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸುವುದು.
ಮೇಲ್ದಂಡ ಯೋಜನೆಯು ದಿನಾಂಕ 29-12-2024ನೇ ಭಾನುವಾರದಂದು ಬೆಳಿಗ್ಗೆ 9-30 ಗಂಟೆಗೆ ಜನಪ್ರಿಯ ಶಾಸಕರಾದ ಸನ್ಮಾನ್ಯ ಶ್ರೀ ಪ್ರಿಯಕೃಷ್ಣ ಅವರ ಅಧ್ಯಕ್ಷತೆಯಲ್ಲಿ ಉದ್ಘಾಟನೆಗೊಳ್ಳಲಿದೆ. ಅರ್ಹ ಫಲಾನುಭವಿಗಳಾದ ತಾವುಗಳು ಸದರಿ ಯೋಜನೆಯ ಪ್ರಯೋಜನವನ್ನು ಉಚಿತವಾಗಿ ಪಡೆದುಕೊಳ್ಳಲು ಕೋರುತ್ತೇವೆ.
ಸ್ಥಳ : ಶ್ರೀ ಉಮಾಶಂಕರ್ ಡಿ. ಅವರ ಕಛೇರಿ ಕಾರ್ಯಾಲಯ
ನಂ. 1389/53, 24ನೇ ಅಡ್ಡರಸ್ತೆ, ಕೆ.ಹೆಚ್.ಬಿ. ಕಾಲೋನಿ, ಬೆಸ್ಕಾಂ ಕಛೇರಿ ರಸ್ತೆ, ಬೆಂಗಳೂರು – 560 079.
ಫೋನ್ ನಂಬರ್ : 9243420080, 8884444281, 9353987680, 7760096805




