BBMP
Loading ...

BBMP Lokayukta

ಬೆಂಗಳೂರು: ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಲಂಚ ಸ್ವೀಕಾರ ಮಾಡುತ್ತಿದ್ದ ಆರೋಪದ ಮೇರೆಗೆ ಬಿಬಿಎಂಪಿಯ ಇಬ್ಬರು ಅಧಿಕಾರಿಗಳು ಸೇರಿ ಮೂವರು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.

ಟೆಂಬರ್‌ ಬಿಲ್‌ ಅನ್ನು ಪಾಸ್‌ ಮಾಡಲು ಸರ್ಕಾರಿ ಅಧಿಕಾರಿ ಬಳಿಯೇ 45 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟ ಕಸ ನಿರ್ವಹಣಾ ಘಟಕ ಕಾರ್ಯನಿರ್ವಾಹಕ ಎಂಜಿನಿಯರ್‌ ಸಣ್ಣ ಪರಶುರಾಮ್‌ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಬಿಬಿಎಂಪಿಯ ಡಿಎಸ್‌ಪಿ ವಿಭಾಗದ ಮೇಲ್ವಿಚಾರಕ ಲಕ್ಷ್ಮೀ ನಾರಾಯಣ ನೀಡಿದ ದೂರಿನ ಮೇರೆಗೆ ಲಂಚದ ಹಣದ ಸಮೇತ ಸಣ್ಣ ಪರಶುರಾಮ್‌ ನನ್ನು ಬಂಧಿಸಲಾಗಿದೆ.

ಕಸ ನಿರ್ವಹಣೆ/ವಿಲೇವಾರಿ ವಿಚಾರಕ್ಕೆ ಸಂಬಂಧಿಸಿದಂತೆ 52.80 ಲಕ್ಷ ರೂ. ಮೌಲ್ಯದ ಟೆಂಡರ್‌ ಬಿಲ್‌ ಅನುಮೋದನೆಗಾಗಿ ದೂರುದಾರರು, ಆರೋಪಿತ ಅಧಿಕಾರಿಗೆ ಮನವಿ ಮಾಡಿದ್ದರು. ಆದರೆ, ಅಧಿಕಾರಿ 45 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈ ಕುರಿತು ದೂರುದಾರರು, ಲೋಕಾಯುಕ್ತಕ್ಕೆ ದೂರು ನೀಡಿದ್ದು ಆರೋಪಿ ಸೋಮವಾರ ತಮ್ಮ ಮನೆಯಲ್ಲೇ ಹಣ ಸ್ವೀಕರಿಸುವಾಗ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.

ಮತ್ತೂಂದು ಪ್ರಕರಣದಲ್ಲಿ ರಸ್ತೆ ಕಾಮಗಾರಿಗೆ ಸಂಬಂಧಿಸಿದಂತೆ ಅನುಮತಿ ಕೋರಿ ಸಲ್ಲಿಸಿದ್ದ ಅರ್ಜಿ ವಿಲೇವಾರಿಗೆ 50 ಸಾವಿರ ರೂ. ಲಂಚ ಸ್ವೀಕರಿಸುತ್ತಿದ್ದ ಬೇಗೂರು ಉಪವಿಭಾಗದ ಸಹಾಯಕ ಕಾರ್ಯಾನಿರ್ವಾಹಕ ಎಂಜಿನಿಯರ್‌ ನೀಲಕಂಠಯ್ಯ ಮತ್ತು ಗುತ್ತಿಗೆದಾರ ರಕ್ಷಿತ್‌ ಯಾದವ್‌ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.

ಡಾ. ಜಿ ಪರಮೇಶ್ವರ್ ನಿವಾಸದ ಪಕ್ಕದಲ್ಲಿ ಗನ್​ ಹಿಡಿದು ನಿವೃತ್ತ ಪೊಲೀಸ್ ಅಧಿಕಾರಿ ರಂಪಾಟ : ಬೆಚ್ಚಿಬಿದ್ದ ದಾರಿಹೋಕರು!

Leave a Reply

Your email address will not be published. Required fields are marked *