BBMP
Loading ...

HY Meti

ಕೂಡಲಸಂಗಮ: ಗ್ರಾಹಕರಿಗೆ ತೊಂದರೆಯಾಗದಂತೆ ಉತ್ತಮ ಕಾರ್ಯ ಮಾಡುತ್ತಿರುವ ಅನುಮತಿ ಪಡೆದ ವಿದ್ಯುತ್‌ ಗುತ್ತಿಗೆದಾರರ ಕಾರ್ಯ ಶ್ಲಾಘನೀಯ ಎಂದು ಶಾಸಕ ಎಚ್. ವೈ.ಮೇಟಿ ಹೇಳಿದರು.

ಕೂಡಲಸಂಗಮ ಸಭಾಭವನದಲ್ಲಿ ಶನಿವಾರ ನಡೆದ ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದ ರಾಜ್ಯಮಟ್ಟದ ಕ್ರೀಡಾಕೂಟ ಸಮಾರೋಪ ಸಮಾರಂಭ ಉದ್ಘಾಟಿಸಿ ಮಾತನಾಡಿ, ಮೈಸೂರು, ಬೆಳಗಾವಿಯಲ್ಲಿ ಕ್ರೀಡಾಕೂಟ ನಡೆಸಿ ಕೂಡಲಸಂಗಮದಲ್ಲಿ ಸಮಾರೋಪ ಸಮಾರಂಭ ಹಮ್ಮಿಕೊಂಡಿರುವುದು ಮಹತ್ವದಾಗಿದೆ ಎಂದರು.

ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಸಿ.ರಮೇಶ ಮಾತನಾಡಿ, 102 ವರ್ಷದಿಂದ ಜನರ ಸೇವೆ ಮಾಡುತ್ತಿರುವ ನಮ್ಮ ಸಂಘ ಪ್ರತಿ ವರ್ಷ ಕ್ರೀಡಾಕೂಟ, ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳುತ್ತ ಬಂದಿದೆ. ಸಾಮಾಜಿಕ ಕಾರ್ಯಗಳನ್ನು ನಿರಂತರ ಮಾಡಿದೆ ಎಂದರು.

ಸಾನ್ನಿಧ್ಯವನ್ನು ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ವಹಿಸಿ ಮಾತನಾಡಿ, ಅನುಮತಿ ಪಡೆದ ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದ ರಾಜ್ಯಮಟ್ಟದ ಕ್ರೀಡಾಕೂಟ ಸಮಾರೋಪ ಸಮಾರಂಭವನ್ನು ಶಾಸಕ ಎಚ್‌ವೈ.ಮೇಟಿ ಉದ್ಘಾಟಿಸಿದರು.

ವಿದ್ಯುತ್ ಗುತ್ತಿಗೆದಾರರು ಹಣಕ್ಕಾಗಿ ಕೆಲಸಮಾಡುತ್ತಿಲ್ಲ. ಜನರಿಗಾಗಿ ಕೆಲಸ ಮಾಡುತ್ತಿದ್ದಾರೆ. ವರ್ಷಾನುಗಟ್ಟಲೇ ಹಣ ತೊಡಗಿಸಿ ಸರ್ಕಾರ ನೀಡಿದಾಗ ಪಡೆಯುವ ಇವರ ಸೇವೆ ಸ್ಮರಣೀಯ. ಈ ಸಂಘದ ಎಲ್ಲ ಬೇಡಿಕೆಗಳನ್ನು ಸರ್ಕಾರ ಈಡೇರಿಸುವ ಕಾರ್ಯ ಮಾಡಬೇಕು ಎಂದರು.

ಅಧ್ಯಕ್ಷತೆಯನ್ನು ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದ ಬಾಗಲಕೋಟೆ ಜಿಲ್ಲಾ ಘಟಕದ ಅಧ್ಯಕ್ಷ ಮಹೇಶಚಂದ್ರ ತೇಲಿ ವಹಿಸಿದರು. ಸಮಾರಂಭದಲ್ಲಿ ಗುಳೇದಗುಡ್ಡ ಹೊಳೆಹುಚ್ಚೇಶ್ವರ ಶಿಕ್ಷಣ ಹಾಗೂ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ಅಧ್ಯಕ್ಷ ಹೊಳೆಬಸು ಶೆಟ್ಟರ, ಮುಖಂಡರಾದ ಶ್ಯಾಮ ಸುಂದರ, ಎಂ.ಎನ್. ಉಮೇಶ, ಉರ್ಬನ್ ಪಿಂಟೊ, ಎಸ್. ವಿ.ಚಂದ್ರಬಾಬು ಇದ್ದರು.

ಸಮಾರಂಭದಲ್ಲಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದಿಂದ ಪಿಎಚ್.ಡಿ ಪದವಿ ಪಡೆದ ಶ್ರೀದೇವಿ ಕರ್ಜಗಿ, ನ್ಯಾಷನಲ್ ಲೇವಲ್ ಸ್ಪೂಡೆಂಟ್ಸ್ ಟೆಕ್ನಿಕಲ್ ಚಾಂಪಿಯನ್‌ಶಿಪ್ 2024ರ ಜ್ಯೂನಿಯರ್ ರೋಬೊ ರೇಸ್‌ನಲ್ಲಿ ದ್ವಿತೀಯ ಪದಕ ಪಡೆದ ನಮಿತಾ ಕಂಠಿ, ಅಂತರರಾಷ್ಟ್ರೀಯ ಭರತನಾಟ್ಯ ನೃತ್ಯಗಾರ್ತಿ ವರ್ಷಿಣಿ ಅಗಸರ ಅವರನ್ನು ಸನ್ಮಾನಿಸಿದರು.

ಸಮಾರಂಭದ ನಂತರ ಸಂಗೀತ ನಿರ್ದೇಶಕ ಅರ್ಜುನ ಜನ್ಯಾ ತಂಡದವರಿಂದ ಅನುಶ್ರೀನಿರೂಪಣೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನಡೆದವು.

ನಟ ದರ್ಶನ್ ಜಾಮೀನು ರದ್ದು ಮಾಡಬೇಕು: ಗೃಹ ಸಚಿವ ಡಾ.ಜಿ.ಪರಮೇಶ್ವರ್ ಸ್ಪೋಟಕ ಹೇಳಿಕೆ!

Leave a Reply

Your email address will not be published. Required fields are marked *