ಬಾಗಲಕೋಟೆ: ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದ ಬಾಗಲಕೋಟೆ ಜಿಲ್ಲಾ ಸಮಿತಿಯ ಸಹಯೋಗದಲ್ಲಿ ಇದೇ ಶನಿವಾರ (ನ.23)ದಂದು ಹಮ್ಮಿಕೊಳ್ಳಲಾಗಿದ್ದ ರಾಜ್ಯ ಮಟ್ಟದ ಕ್ರೀಡಾಕೂಟ ಯಶಸ್ವಿಯಾಗಿ ನಡೆಯಿತು.
ಗುತ್ತಿಗೆದಾರರ ಸಂಘದ ಗೌರವಾನ್ವಿತ ರಾಜ್ಯಾಧ್ಯಕ್ಷರಾದ ಶ್ರೀ ರಮೇಶ್ ಅವರ ಅಧ್ಯಕ್ಷತೆಯಲ್ಲಿ, ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ HV ಚಂದ್ರಬಾಬು ರವರ ನೇತೃತ್ವದಲ್ಲಿ, ಬಾಗಲಕೋಟೆ ಜಿಲ್ಲಾ ಸಮಿತಿಯ ಸಹಯೋಗದಲ್ಲಿ, ಕೇಂದ್ರ ಸಮಿತಿ ಪದಾಧಿಕಾರಿಗಳು ಮತ್ತು ಕೇಂದ್ರ ಕಾರ್ಯಕಾರಿ ಸಮಿತಿ ಸದಸ್ಯರುಗಳ ಸಮ್ಮುಖದಲ್ಲಿ ದಿನಾಂಕ 24/11/2024ರ ಭಾನುವಾರದಂದು ಬಸವಣ್ಣನವರ ಪವಿತ್ರ ಐಕ್ಯ ಸ್ಥಳವಾದ ಕೂಡಲಸಂಗಮದ ಬಸವ ಮಂಟಪದಲ್ಲಿ ನಡೆದ 2022-2023 ಮತ್ತು 2023-2024ನೇ ಸಾಲಿನ ರಾಜ್ಯ ಮಟ್ಟದ ಸರ್ವ ಸದಸ್ಯರ ಸಭೆಯು ಬಹಳ ಅಚ್ಚುಕಟ್ಟಾಗಿ ಹಾಗೂ ಯಶಸ್ವಿಯಾಗಿ ನಡೆಯಿತು.

ಈ ಸರ್ವ ಸದಸ್ಯರ ಸಭೆಯಲ್ಲಿ ರಾಜ್ಯ ಉಪಾಧ್ಯಕ್ಷರುಗಳಾದ ಶ್ರೀ ಉಮೇಶ್ ಶೆಣೈ, ಶ್ರೀ ಉರ್ಬನ್ ಪಿಂಟೋ, ರಾಜ್ಯ ಕಾರ್ಯಧ್ಯಕ್ಷರಾದ ಶ್ರೀ ಶ್ಯಾಮ್ ಸುಂದರ್, ರಾಜ್ಯ ಸಹ ಕಾರ್ಯದರ್ಶಿಗಳಾದ ಶ್ರೀ ಅನ್ವರ್ ಮಿಯ್ಯಾ, ರಾಜ್ಯ ಕೋಶಧ್ಯಕ್ಷರಾದ ಶ್ರೀ K. ಚಂದ್ರಬಾಬು ರವರು, ರಾಜ್ಯ ಸಂಘಟನಾ ಕಾರ್ಯದರ್ಶಿ ಶ್ರೀ ಶಿವಾನಂದ ಬಾಳಪ್ಪ, ಕಛೇರಿ ಆಡಳಿತಧಿಕಾರಿ ಶ್ರೀ IB ಶಿವರಾಜ್ ಹಾಗೂ ಹೋರಾಟ ಸಮಿತಿ ಚೇರ್ಮನ್ ವೈ,ಎಚ್, ಆನಂದ್ ಭಾಗವಹಿಸಿದರು.
ಕೇಂದ್ರ ಕಾರ್ಯಕಾರಿ ಸಮಿತಿ ಸದಸ್ಯರುಗಳು, ವಿವಿಧ ಸಮಿತಿ ಛೇರ್ಮನ್ಗಳು ಉಪಸ್ಥಿತರಿದ್ದರು. ಸರ್ವ ಸದಸ್ಯರ ಸಭೆಯ ವ್ಯವಸ್ಥೆ ಮೇಲುಸ್ತುವಾರಿ ವಹಿಸಿಕೊಂಡು ಅಚ್ಚುಕಟ್ಟಾಗಿ ನಡೆಸಿ ಕೊಟ್ಟ ಎಂಸಿ ಮಹೇಶ್, ಎಲ್ ಪರಿಟ್ ಹಾಗೂ ಬಾಗಲಕೋಟ ಜಿಲ್ಲಾ ಸಮಿತಿ ಅಧ್ಯಕ್ಷರಾದ ಮಹೇಶ್ ಚಂದ್ರ ತೇಲಿ, ಮಹಾಂತೇಶ್ ಕರ್ಜಗಿ ಹಾಗೂ ಪದಾಧಿಕಾರಿಗಳಿಗೂ ಹಾಗೂ ಎಲ್ಲಾ ಜಿಲ್ಲಾ ಸಮಿತಿ, ತಾಲೂಕು ಸಮಿತಿ ಪದಾಧಿಕಾರಿಗಳು ಮತ್ತು ಈ ಸಭೆಯಲ್ಲಿ ಭಾಗವಹಿಸಿದ ರಾಜ್ಯದ ಎಲ್ಲಾ ಗೌರವಾನ್ವಿತ ಗುತ್ತಿಗೆದಾರ ಹೃತ್ಪೂರ್ವಕ ಅಭಿನಂದನೆಗಳು.

ರಾಜ್ಯದಲ್ಲಿ ವಿದ್ಯುತ್ ಗುತ್ತಿಗೆದಾರರ ಕಾರ್ಯ ಶ್ಲಾಘನೀಯ: ಶಾಸಕ ಎಚ್. ವೈ.ಮೇಟಿ ಶ್ಲಾಘನೆ


