ಬೆಣಚಕಲ್ಲು ಗ್ರಾಮದ ಶ್ರೀ ಉದ್ಭವ ಶ್ರೀ ವೆಂಕಟರಮಣ ಸ್ವಾಮಿ ದೇವಸ್ಥಾನದ ಮೂಲತಃ ಅರ್ಚಕರು ಬಿ ಟಿ ಜಂಬೂ ನಾಗರಾಜ್ ಗುರೂಜಿ ರವರು ದಂಪತಿ ಸಮೇತ ಮಥುರಾ ಹಾಗೂ ಗೋವರ್ಧನ ಗಿರಿ ಭೇಟಿ ನೀಡಿದರು.
ಭಗವಾನ್ ಶ್ರೀ ಕೃಷ್ಣ ಹಾಗೂ ಶ್ರೀ ರಾಧೆಯರನ್ನು ದರ್ಶನ ಮಾಡಿ ಹಾಗೂ ಪೂಜಾ ಕೈಂಕರ್ಯದ ಆಚಾರ್ಯರನ್ನು ಸಂಪರ್ಕಿಸಿ ದೇವರ ದಿವ್ಯ ದರ್ಶನ ಪಡೆದು ಉತ್ತರ ಪ್ರದೇಶದ ವೃಂದಾವನದಲ್ಲಿ ಪ್ರೇಮ ಮಂದಿರದ ಪೂಜನೀಯ ಗುರುಗಳಾದ ಶ್ರೀ ಪ್ರೇಮಾನಂದ ಗುರೂಜಿ ರವರನ್ನು ಭೇಟಿ ಮಾಡಿ ಪ್ರವಚನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರ ಆಶೀರ್ವಾದ ಪಡೆದರು.

ರಾಷ್ಟ್ರ ಜನಕ್ಕೆ ರಾಜ್ಯ ಜನಕ್ಕೆ ಒಳಿತಿಗಾಗಿ ಪ್ರಾರ್ಥನೆ ಸಲ್ಲಿಸಿದರು ಮತ್ತು ನೈಮಿಷಾರಣ್ಯದ ಲಲಿತಾ ಮಾತೇ, ಚಕ್ರ ತೀರ್ಥ, ವ್ಯಾಸ ಮುನಿ ಹಾಗೂ ಶೌನಾಕಾದಿ ರವರು ತಪಸ್ಸು ಮಾಡಿದ ಜಾಗವನ್ನು ನೋಡಿ ಅವರ ದರ್ಶನ ಪಡೆದು ಕಣ್ ತುಂಬಿ ಕೊಂಡು ಅಲ್ಲಿರುವ ಆಚಾರ್ಯರಿಗೆ ಗೌರವ ಸಲ್ಲಿಸಿ ಎಲ್ಲರಿಗೂ ಒಳಿತು ಬಯಸಿ ರಾಷ್ಟ್ರ ಜನ ರಾಜ್ಯ ಜನ ಸಮಸ್ತ ಜೀವ ಸಮಸ್ತ ಲೋಕಕ್ಕೆ ಸದಾ ಒಳ್ಳೆಯದು ಬಯಸಿ ಇಂದು ಅಯೋಧ್ಯೆ ಶ್ರೀ ಬಾಲರಾಮನ ದರ್ಶನ ಪಡೆಯಲು ಯಾತ್ರೆ ಕೈಗೊಂಡಿದ್ದಾರೆ.


