BBMP
Loading ...

KERC

Greater Bengaluru News9 : ರಾಜ್ಯದಲ್ಲಿ ವಿದ್ಯುತ್ ವಿತರಣಾ ವಲಯವನ್ನು ಖಾಸಗೀಕರಣಗೊಳಿಸುವ ಸರ್ಕಾರದ ಪ್ರಸ್ತಾವನೆ ಅಥವಾ ನಿರ್ಧಾರದ ವಿರುದ್ಧ ಸಾರ್ವಜನಿಕರು ಹಾಗೂ ಗ್ರಾಹಕರಿಂದ ಅಭೂತಪೂರ್ವ ಮತ್ತು ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಆ ಬೆನ್ನಲ್ಲೇ ಟಾಟಾ ಪವರ್ ತನ್ನ ಪ್ರಸ್ತಾವನೆ ಅರ್ಜಿಯನ್ನೇ ಹಿಂಪಡೆದಿತ್ತು. ಇದೆಲ್ಲದರ ನಡುವೆ ವಿದ್ಯುತ್ ವಿತರಣೆ ಖಾಸಗೀಕರಣ ವಿರೋಧಿಸಿ ಕರ್ನಾಟಕ ರಾಜ್ಯ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗಕ್ಕೆ (KERC) ಬರೋಬ್ಬರಿ 20 ಲಕ್ಷಕ್ಕೂ ಅಧಿಕ ಆಕ್ಷೇಪಣಾ ಅರ್ಜಿಗಳು ಸಲ್ಲಿಕೆಯಾಗಿದ್ದವು ಎಂಬುದು ಮಾತ್ರ ಅಚ್ಚರಿಯ ಸತ್ಯ. ಆ ಮೂಲಕ ಇತಿಹಾಸದಲ್ಲೇ ಹೊಸ ದಾಖಲೆ ಸೃಷ್ಟಿಯಾಗಿದೆ.

ಲಾರಿ, ಟ್ರಕ್‌ಗಳಲ್ಲಿ ತಂದು ಅರ್ಜಿ ಡಿಲಿವರಿ!
ಸಾಮಾನ್ಯವಾಗಿ ಸಾರ್ವಜನಿಕ ಆಕ್ಷೇಪಣೆಗಳು ಸಣ್ಣ ಪ್ರಮಾಣದಲ್ಲಿ ಸಲ್ಲಿಕೆಯಾಗುತ್ತವೆ. ಆದರೆ, ಈ ಬಾರಿ ಖಾಸಗೀಕರಣದ ವಿರುದ್ಧ ಸಾರ್ವಜನಿಕ ವಲಯ ಹಾಗೂ ಸಂಘಟನೆಗಳಿಂದ ಬಂದಿರುವ ಪ್ರತಿರೋಧದ ತೀವ್ರತೆ ಎಷ್ಟಿತ್ತೆಂದರೆ, ರಾಜ್ಯ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗಕ್ಕೆ (ಕೆಇಆರ್‌ಸಿ) ಸಲ್ಲಿಕೆಯಾಗಿರುವ ಅರ್ಜಿಗಳ ಒಟ್ಟು ಮೊತ್ತವು ಒಂದು ಇಡೀ ಲಾರಿ ತುಂಬುವಷ್ಟಿದೆ! ಅಂಚೆ ಇಲಾಖೆಯು ಇಷ್ಟೂ ಬೃಹತ್ ಪ್ರಮಾಣದ ಅರ್ಜಿಗಳನ್ನು ವಿಶೇಷವಾಗಿ ಟ್ರಕ್ ಒಂದರಲ್ಲಿ ಸಂಪೂರ್ಣವಾಗಿ ತುಂಬಿಸಿಕೊಂಡು ಬಂದು ಕೆಇಆರ್‌ಸಿ ಕಚೇರಿಗೆ ಡೆಲಿವರಿ ಮಾಡಿದೆ.

ರಾಜ್ಯದ ವಿದ್ಯುತ್ ವಲಯ ಅಥವಾ ಇಲಾಖೆಯ ಸುದೀರ್ಘ ಇತಿಹಾಸದಲ್ಲೇ ಇಷ್ಟೊಂದು ಬೃಹತ್ ಪ್ರಮಾಣದಲ್ಲಿ, ಅಂದರೆ 20 ಲಕ್ಷಕ್ಕೂ ಮಿಗಿಲಾಗಿ ಸಾರ್ವಜನಿಕ ಆಕ್ಷೇಪಣೆಗಳು ಒಂದೇ ವಿಷಯದ ಪರವಾಗಿ ಸಲ್ಲಿಕೆಯಾಗಿರುವುದು ಇದೇ ಮೊಟ್ಟಮೊದಲ ಬಾರಿಯಾಗಿದೆ. ವಿದ್ಯುತ್ ವಿತರಣೆಯನ್ನು ಖಾಸಗಿ ಕಂಪನಿಗಳ ಕೈಗೆ ಒಪ್ಪಿಸಿದರೆ ಗ್ರಾಹಕರಿಗೆ ದರ ಏರಿಕೆಯ ಬಿಸಿ ತಟ್ಟಬಹುದು ಹಾಗೂ ಉಚಿತ ಅಥವಾ ಸಬ್ಸಿಡಿ ವಿದ್ಯುತ್ ವ್ಯವಸ್ಥೆಗೆ ಧಕ್ಕೆಯಾಗಬಹುದು ಎಂಬ ಆತಂಕದ ಹಿನ್ನೆಲೆಯಲ್ಲಿ ಗ್ರಾಹಕರು ಇಷ್ಟೊಂದು ದೊಡ್ಡ ಮಟ್ಟದಲ್ಲಿ ಸಹಿ ಸಂಗ್ರಹಿಸಿ ಹಾಗೂ ವೈಯಕ್ತಿಕವಾಗಿ ಆಕ್ಷೇಪಣಾ ಪತ್ರಗಳನ್ನು ರವಾನಿಸಿದ್ದಾಗಿ ತಿಳಿದು ಬಂದಿದೆ..

ಸದ್ಯ ಕೆಇಆರ್‌ಸಿ ಕಚೇರಿಯಲ್ಲಿ ಕಟಾವಾಗಿ ಬಂದಿರುವ ಸಾವಿರಾರು ಕಂತೆಗಳ ಅರ್ಜಿಗಳ ರಾಶಿಯೇ ಬಿದ್ದಿದೆ. ಇಷ್ಟು ಪ್ರಮಾಣದಲ್ಲಿ ರಾಜ್ಯದಲ್ಲಿ ವಿದ್ಯುತ್ ವಿತರಣೆಯ ಖಾಸಗೀಕರಣವನ್ನು ಅರ್ಜಿಗಳ ಮೂಲಕ ಸಾರ್ವಜನಿಕರು ಆಕ್ಷೇಪಿಸಿದ್ದಾರೆ. ಹೀಗಾಗಿಯೇ ಸ್ವತಹ ಟಾಟಾ ಪವರ್ ತನ್ನ ಪ್ರಸ್ತಾವನೆಯನ್ನು ಹಿಂಪಡೆಯುವ ಮೂಲಕ, ವಿದ್ಯುತ್ ಖಾಸಗೀಕರಣಕ್ಕೆ ಬ್ರೇಕ್ ಬಿದ್ದಂತೆ ಆಗಿದೆ.

Leave a Reply

Your email address will not be published. Required fields are marked *