BBMP
Loading ...

Hasanamba

Greater Bengaluru News9 : ದಕ್ಷಿಣ ಭಾರತದ ಅತ್ಯಂತ ಪವಿತ್ರ ಶಕ್ತಿ ಪೀಠಗಳಲ್ಲಿ ಕರ್ನಾಟಕ ರಾಜ್ಯದ ಹಾಸನದಲ್ಲಿರುವ ಹಾಸನಾಂಬ ದೇವಾಲಯವು ಒಂದಾಗಿದೆ. ಆಕೆಯನ್ನು ಭಕ್ತರು ಸಪ್ತ ಮಾತೃಕೆ, ಅಂಬಾ ದೇವಿ, ಮಹಾದೇವಿ ಎಂಬ ಹೆಸರಿನಿಂದಲೂ ಕರೆದು ಆರಾಧಿಸುತ್ತಾರೆ. ವರ್ಷಕ್ಕೊಮ್ಮೆ ಮಾತ್ರ ತೆರೆದು ದರ್ಶನ ಭಾಗ್ಯ ಕರುಣಿಸುವ ಈ ದೇವತೆಯ ಆಶೀರ್ವಾದ ಪಡೆಯಲು ಕೇವಲ ರಾಜ್ಯದ ಜನರು ಮಾತ್ರವಲ್ಲದೆ, ದೇಶದ ಅನೇಕ ಮೂಲಗಳಿಂದಲೂ ಭಕ್ತರು ಬರುತ್ತಾರೆ.

ಈ ದೇವಿಯ ಆಲಯವನ್ನು 12 ನೇ ಶತಮಾನದಲ್ಲಿ ಕೃಷ್ಣಪ್ಪ ನಾಯಕ ಮತ್ತು ಸಂಜೀವ ನಾಯಕರಿಂದ ನಿರ್ಮಿಸಲ್ಪಟ್ಟಿದೆ ಎಂದು ಹೇಳಲಾಗುತ್ತದೆ. ಈ ದೇವಾಲಯವು ವಾಸ್ತುಶಿಲ್ಪ ಮತ್ತು ಆಧ್ಯಾತ್ಮಿಕವಾಗಿ ಮಹತ್ವದ್ದಾಗಿದೆ, ಪ್ರತಿವರ್ಷ ಲಕ್ಷಾಂತರ ಭಕ್ತರನ್ನು ಆಕರ್ಷಿಸುತ್ತದೆ. ಅಂದಹಾಗೆ ಈ ತಾಯಿಯ ಆಲಯವು ಅಕ್ಟೋಬರ್‌ 9 ರಂದು (ಗುರುವಾರ) ಅಂದರೆ ಇಂದು ತೆರೆಯಲಾಗುತ್ತದೆ ಹಾಗೂ ಅಕ್ಟೋಬರ್‌ 23, ದೀಪಾವಳಿ ಹಬ್ಬದವರೆವಿಗೂ ತೆರೆದಿಡಲಾಗುತ್ತದೆ. ದರ್ಶನ ಸಮಯ ಹಾಗೂ ಟಿಕೆಟ್‌ ಬೆಲೆ ತಿಳಿದುಕೊಳ್ಳಿ..

ದೀಪಾವಳಿ ಹಬ್ಬದ ಸಮಯದಲ್ಲಿ ಮಾತ್ರ ತೆರೆಯುವ ವಿಶೇಷ ದೇವಾಲಯ
ವರ್ಷಕ್ಕೊಮ್ಮೆ ಮಾತ್ರ ತೆರೆಯುವ ಬೆರಳಣಿಕೆಯಷ್ಟೇ ಆಲಯಗಳಲ್ಲಿ ಈ ಹಾಸನಾಂಬ ಆಲಯವು ಒಂದಾಗಿದೆ. ಅಕ್ಟೋಬರ್‌ 9 ರಂದು ಗರ್ಭಗುಡಿಯನ್ನು ತೆರೆಯಲಾಗುತ್ತದೆ ಹಾಗೂ ದೀಪಾವಳಿ ಹಬ್ಬದಂದು ಅಕ್ಟೋಬರ್‌ 23 ರಂದು ಮತ್ತೆ ಮುಚ್ಚಲಾಗುತ್ತದೆ. ಸಾರ್ವಜನಿಕ ದರ್ಶನಕ್ಕಾಗಿ ನಿರ್ದಿಷ್ಟ ಸಮಯವನ್ನು ಜಿಲ್ಲಾಡಳಿತವು ಘೋಷಿಸಿದೆ. ಸಪ್ತ ಮಾತೃಕೆಯನ್ನು ದರ್ಶನ ಮಾಡಲು ನಿಮಗೆ 2 ರಿಂದ 3 ಗಂಟೆಗಳ ಸಮಯ ಬೇಕಾಗಬಹುದು. ಏಕೆಂದರೆ, ಅತಿ ಕಡಿಮೆ ದಿನಗಳಲ್ಲಿ ಲಕ್ಷಾಂತರ ಭಕ್ತರು ದೇವಿಯ ದರ್ಶನಕ್ಕೆ ಬರುವ ಕಾರಣ ನೀವು ದೀರ್ಘ ಸರತಿ ಸಾಲಿನಲ್ಲಿ ನಿಲ್ಲಬೇಕಾಗುತ್ತದೆ.

ದೇವಿಯ ದರ್ಶನ ಸಮಯ
ದೇವಿಯನ್ನು ದರ್ಶನ ಮಾಡಲು ಆನ್‌ಲೈನ್‌ ಅಥವಾ ಆಫ್‌ಲೈನ್‌ ಟಿಕೆಟ್‌ ಪಡೆಯಬಹುದು. ಇನ್ನು, ಈ ದೇವಾಲಯದ ಪ್ರವೇಶ ಸಮಯ ಹೀಗಿದೆ…

  • ಬೆಳಗಿನ ದರ್ಶನ ಬೆಳಿಗ್ಗೆ 06:00 – ಮಧ್ಯಾಹ್ನ 12:00
  • ಮಧ್ಯಾಹ್ನ ವಿರಾಮ ಮಧ್ಯಾಹ್ನ 12:00 – ಮಧ್ಯಾಹ್ನ 05:00
  • ಸಂಜೆ ದರ್ಶನ ಸಂಜೆ 05:00 – ರಾತ್ರಿ 08:00
  • ಪೂಜಾ ಸಮಯ ಬೆಳಿಗ್ಗೆ 06:00 – ಮಧ್ಯಾಹ್ನ 01:00 PC: hassan district Govt

ಹಾಸನಾಂಬ ದೇವಾಲಯದ ಪೂಜೆ
ನೀವು ಹಾಸನಾಂಬ ದೇವಾಲಯದಲ್ಲಿ ಪೂಜೆ ಮಾಡಿಸಲು ಬಯಸಿದರೆ ಈಗಾಗಲೇ ಹೇಳಿದಂತೆ ದೀರ್ಘವಾದ ಸರತಿ ಸಾಲಿನಲ್ಲಿ ನಿಲ್ಲಬೇಕಾಗುತ್ತದೆ. ಏಕೆಂದರೆ, ದೇವಾಲಯವು ದೀಪಾವಳಿಯ ಸಮಯದಲ್ಲಿ ಮಾತ್ರ ತೆರೆದಿರುವುದರಿಂದ, ಪೂಜಾ ಅರ್ಪಣೆಗಳು ಮತ್ತು ಆಚರಣೆಗಳನ್ನು ಸೀಮಿತಗೊಳಿಸಲಾಗಿದೆ. ಅವುಗಳನ್ನು ಪುರೋಹಿತರು ಮಾತ್ರ ನಿರ್ವಹಿಸುತ್ತಾರೆ. ನೆಮ್ಮದಿಯಾಗಿ ದೇವಿಯ ದರ್ಶನ ಪಡೆದು ದೂರದಿಂದ ಆರತಿಯನ್ನು ತೆಗೆದುಕೊಂಡು ಪ್ರಾರ್ಥನೆ ಸಲ್ಲಿಸುವುದು ಉತ್ತಮ ಎಂದು ನಾವು ನಿಮಗೆ ಸಲಹೆ ನೀಡುತ್ತೇವೆ.

ಹಾಸನಾಂಬ ದೇವಿ ದರ್ಶನಕ್ಕೆ ಪ್ರವೇಶ ಟಿಕೆಟ್‌ ಹೀಗಿದೆ

  • ಉಚಿತ ಪ್ರವೇಶ ಅಂದರೆ ಸಾಮಾನ್ಯ ಸರತಿ ಸಾಲು (ಸುಮಾರು 4–5 ಗಂಟೆಗಳು ಅಥವಾ ಅದಕ್ಕಿಂತ ಹೆಚ್ಚು ಸಮಯ ತೆಗೆದುಕೊಳ್ಳಬಹುದು)
  • ವಿಶೇಷ ಪ್ರವೇಶ ಟಿಕೆಟ್ 300 ರೂಪಾಯಿ ಪ್ರತ್ಯೇಕ ಸರತಿ ಸಾಲು
  • ವಿಐಪಿ ಪ್ರವೇಶ ಟಿಕೆಟ್ 1,000 ರೂಪಾಯಿ

ದೇವಾಲಯವು ತನ್ನ ಬಾಗಿಲನ್ನು ವರ್ಷಕ್ಕೆ ಒಮ್ಮೆ ಮಾತ್ರ ಅದರಲ್ಲೂ ದೀಪಾವಳಿಯಂದು ತೆರೆಯುತ್ತದೆ. ಅಶ್ವಯುಜ ಹುಣ್ಣಿಮೆಯ ದಿನ ಅಥವಾ ಅದರ ಮುಂದಿನ ಗುರುವಾರ, ದೇವಾಲಯವನ್ನು ತೆರೆಯಲಾಗುತ್ತದೆ. ಬಲಿಪಾಡ್ಯಮಿಯ ನಂತರದ ದಿನದಂದು ಪೂಜೆಗಳನ್ನು ನೆರವೇರಿಸಿ ದೇವಿಯ ಬಾಗಿಲನ್ನು ಮುಚ್ಚಲಾಗುತ್ತದೆ.

Leave a Reply

Your email address will not be published. Required fields are marked *