Greater Bengaluru News9 : ದಕ್ಷಿಣ ಭಾರತದ ಅತ್ಯಂತ ಪವಿತ್ರ ಶಕ್ತಿ ಪೀಠಗಳಲ್ಲಿ ಕರ್ನಾಟಕ ರಾಜ್ಯದ ಹಾಸನದಲ್ಲಿರುವ ಹಾಸನಾಂಬ ದೇವಾಲಯವು ಒಂದಾಗಿದೆ. ಆಕೆಯನ್ನು ಭಕ್ತರು ಸಪ್ತ ಮಾತೃಕೆ, ಅಂಬಾ ದೇವಿ, ಮಹಾದೇವಿ ಎಂಬ ಹೆಸರಿನಿಂದಲೂ ಕರೆದು ಆರಾಧಿಸುತ್ತಾರೆ. ವರ್ಷಕ್ಕೊಮ್ಮೆ ಮಾತ್ರ ತೆರೆದು ದರ್ಶನ ಭಾಗ್ಯ ಕರುಣಿಸುವ ಈ ದೇವತೆಯ ಆಶೀರ್ವಾದ ಪಡೆಯಲು ಕೇವಲ ರಾಜ್ಯದ ಜನರು ಮಾತ್ರವಲ್ಲದೆ, ದೇಶದ ಅನೇಕ ಮೂಲಗಳಿಂದಲೂ ಭಕ್ತರು ಬರುತ್ತಾರೆ. ಈ ದೇವಿಯ ಆಲಯವನ್ನು 12 ನೇ ಶತಮಾನದಲ್ಲಿ ಕೃಷ್ಣಪ್ಪ ನಾಯಕ ಮತ್ತು ಸಂಜೀವ ನಾಯಕರಿಂದ ನಿರ್ಮಿಸಲ್ಪಟ್ಟಿದೆ ಎಂದು ಹೇಳಲಾಗುತ್ತದೆ. ಈ ದೇವಾಲಯವು ವಾಸ್ತುಶಿಲ್ಪ ಮತ್ತು ಆಧ್ಯಾತ್ಮಿಕವಾಗಿ ಮಹತ್ವದ್ದಾಗಿದೆ, ಪ್ರತಿವರ್ಷ ಲಕ್ಷಾಂತರ ಭಕ್ತರನ್ನು ಆಕರ್ಷಿಸುತ್ತದೆ. ಅಂದಹಾಗೆ ಈ ತಾಯಿಯ ಆಲಯದ ಬಾಗಿಲು ಇಂದು ತೆರೆದಿದೆ. ಅದರ ನೇರಪ್ರಸಾರವನ್ನು ನೀವಿಲ್ಲಿ ವೀಕ್ಷಣೆ ಮಾಡಬಹುದು.


