BBMP
Loading ...

ಬೆಂಗಳೂರು: ಮಕ್ಕಳ ಹೆಸರು ನಮೂದಿಸುವಾಗ ಆಗುವ ತಪ್ಪು, ಹೆಸರು ಬದಲಾವಣೆ, ಇನ್ಷಿಲ್ ಬದಲಾವಣೆ, ತಿದ್ದುಪಡಿ ಮತ್ತಿತರ ವಿಷಯಗಳಿಗೆ ಸಂಬಂಧಿಸಿದಂತೆ ಪೋಷಕರು ಅಥವಾ ಪಾಲಕರು ಅನುಭವಿಸುತ್ತಿರುವ ಸಮಸ್ಯೆಗಳಿಗೆ ರಾಜ್ಯ ಹೈಕೋರ್ಟ್ ಪರಿಹಾರೋಪಾಯವನ್ನು ಸೂಚಿಸಿದೆ.

ಜನನ ಮತ್ತು ಮರಣ ನೋಂದಣಿ ಕಾಯ್ದೆ ಅಥವಾ ತಿದ್ದುಪಡಿ ಮಾಡುವವರೆಗೆ ಏನು ಮಾಡಬೇಕು ಎನ್ನುವ ಹಿನ್ನೆಲೆಯಲ್ಲಿ ಕಾರ್ಯವಿಧಾನವನ್ನು ಸೂಚಿಸಿದೆ.

1969ರಲ್ಲಿ ರೂಪಿಸಲಾಗಿರುವ ಜನನ ಮತ್ತು ಮರಣ ನೋಂದಣಿ ಕಾಯ್ದೆಗೆ ತಿದ್ದುಪಡಿ ಮಾಡಿ ಜನನ ನೋಂದಣಿಯಲ್ಲಿ ಹೆಸರು ಬದಲಾವಣೆ ಮತ್ತು ತಿದ್ದುಪಡಿ ಬಗ್ಗೆ ಇರುವ ಸಮಸ್ಯೆಗಳಿಗೆ ಇತಿಶ್ರೀ ಹಾಡುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಸೂಚಿಸಿದೆ. ಇದರಿಂದ ಮಕ್ಕಳ ಹೆಸರು ನಮೂದಿಸುವಾಗ ಆಗುವ ತಪ್ಪು, ಹೆಸರು ಬದಲಾವಣೆ, ಇನ್ಷಿಲ್ ಬದಲಾವಣೆ, ತಿದ್ದುಪಡಿ ಮತ್ತಿತರ ವಿಷಯಗಳಿಗೆ ಸಂಬಂಧಿಸಿದಂತೆ ಪೋಷಕರು ಅಥವಾ ಪಾಲಕರು ಅನುಭವಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ.

ಉಡುಪಿ ಜಿಲ್ಲೆಯ ಅಂಬಲವಾಡಿಯ ಎರಡು ವರ್ಷದ ಮಗು ಅಧ್ರಿತ್ ಭಟ್ ಅವರ ಹೆಸರನ್ನು ಶ್ರೀಜಿತ್ ಭಟ್ ಎಂದು ಬದಲಾವಣೆ ಮಾಡಬೇಕೆಂದು ಮಗುವಿನ ತಾಯಿ ದೀಪಿಕಾ ಭಟ್ ಮನವಿ ಮಾಡಿದ್ದರು. ಆದರೆ ಉಡುಪಿಯ ಜನನ ನೋಂದಣಾಧಿಕಾರಿ ಮನವಿಯನ್ನು ನಿರಾಕರಿಸಿದರು. ನಂತರ ವಿಷಯ ಕೋರ್ಟ್ ಮೆಟ್ಟಿಲೇರಿತು. ಅರ್ಜಿ ಆಲಿಸಿದ ನ್ಯಾ. ಎನ್.ಎಸ್. ಸಂಜಯ್ ಗೌಡ ಅವರ ಹೈಕೋರ್ಟ್ ಪೀಠ ಈ ಬಗ್ಗೆ ಶಾಸಕಾಂಗಕ್ಕೆ ಸೂಚಿಸಿ ಆದೇಶ ಹೊರಡಿಸಿದೆ.

ಮಕ್ಕಳು ಮಾತ್ರವಲ್ಲ, ವಯಸ್ಕರ ಹೆಸರು ತಿದ್ದುಪಡಿ ಮತ್ತು ಬದಲಾವಣೆ ಬಗ್ಗೆ ಕೂಡ ಇದೇ ಪದ್ದತಿಯನ್ನು ಅನುಸರಿಸಬಹುದು. ಸರ್ಕಾರ ಕಾಯಿದೆ ಬದಲಾವಣೆ ಮಾಡುವವರೆಗೆ ಈ ನಿರ್ದೇಶನವನ್ನು ಪಾಲಿಸಿ ಎಂದು ಕೋರ್ಟ್ ತಿಳಿಸಿದೆ. ನಮ್ಮ ದೇಶದಲ್ಲಿ ಕೆಲವರಿಗೆ ಎರಡೆರಡು ಹೆಸರುಗಳಿವೆ. ಇವು ಕೆಲವೊಮ್ಮೆ ಗಂಭೀರ ಸಮಸ್ಯೆಯನ್ನು ಉಂಟುಮಾಡುತ್ತಿವೆ. ಈ ಹಿನ್ನೆಲೆಯಲ್ಲಿ ಸರ್ಕಾರ ಕ್ರಮ ಕೈಗೊಳ್ಳಬೇಕಿದೆ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.

ಬಿಡಿಎಯಿಂದ 6 ಹೊಸ ಲೇಔಟ್‌ಗಳ ನಿರ್ಮಾಣ: ಭೂಮಿಗೆ ಬಂಗಾರದ ಬೆಲೆ!

Leave a Reply

Your email address will not be published. Required fields are marked *