ಬೆಂಗಳೂರಿನಲ್ಲಿ ಆಸ್ತಿ ಖರೀದಿ ಮಾಡಬೇಕು ಎನ್ನುವವರಿಗೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಗುಡ್‌ನ್ಯೂಸ್‌ವೊಂದನ್ನು ಕೊಟ್ಟಿದೆ. ಬೆಂಗಳೂರಿನಲ್ಲಿ ಆಸ್ತಿಗಳಿಗೆ ತುಂಬಾನೇ ಡಿಮ್ಯಾಂಡ್ ಇದೆ. ಈ ಡಿಮ್ಯಾಂಡ್ ಅನ್ನು ಅರ್ಥ ಮಾಡಿಕೊಂಡಿರುವ ಬಿಡಿಎ ಜನರಿಗೆ ಅದಕ್ಕೆ ಅನುಗುಣವಾಗಿ ಜಾಗ ಮಾರಾಟ ಮಾಡುವುದಕ್ಕೆ ಮುಂದಾಗಿದೆ. ನಗರದಲ್ಲಿ ಅಧಿಕೃತವಾಗಿ ಆಸ್ತಿ ಮಾರಾಟ ಮಾಡುವ ಹಾಗೂ ಪ್ರತಿಷ್ಠಿತ ಸರ್ಕಾರಿ ಸಂಸ್ಥೆಯಾಗಿ ಬಿಡಿಎ ಗುರುತಿಸಿಕೊಂಡಿದೆ. ಇನ್ನೀಗ ಬಿಡಿಎ ಬೆಂಗಳೂರಿನಲ್ಲಿ ಬರೋಬ್ಬರಿ 6 ಲೇಔಟ್‌ಗಳನ್ನು ಒಳ್ಳೆಯ ಜಾಗದಲ್ಲಿ ಅಭಿವೃದ್ಧಿ ಮಾಡುವುದಕ್ಕೆ ಮುಂದಾಗಿರುವುದಾಗಿ ಹೇಳಿದೆ. ಈ ಮೂಲಕ ನಗರದಲ್ಲಿ ಆಸ್ತಿ ಖರೀದಿ ಮಾಡಬೇಕು ಎಂದುಕೊಂಡಿರುವವರಿಗೆ ಕಡಿಮೆ ಬೆಲೆಯಲ್ಲಿ ಆಸ್ತಿ ಖರೀದಿ ಮಾಡುವ ಅವಕಾಶ ಸಿಗುತ್ತಿದೆ.
ಹೌದು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಬೆಂಗಳೂರಿನಲ್ಲಿ ಆಸ್ತಿದಾರರು ಅಥವಾ ಆಸ್ತಿಗಳನ್ನು ಖರೀದಿ ಮಾಡಬೇಕು ಅಂತ ಕನಸು ಕಾಣುತ್ತಿರುವವರಿಗೆ ದೊಡ್ಡ ಗುಡ್‌ನ್ಯೂಸ್‌ವೊಂದನ್ನು ಕೊಟ್ಟಿದೆ. ಹೊಸ ಲೇಔಟ್‌ಗಳನ್ನು ನಿರ್ಮಾಣ ಮಾಡುವ ನಿಟ್ಟಿನಲ್ಲಿ ಭೂಸ್ವಾಧೀನ ಪ್ರಕ್ರಿಯೆಗೆ ಭರ್ಜರಿ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.
ಬೆಂಗಳೂರಿನಲ್ಲಿ ಹೊಸ ಆರು ಲೇಔಟ್‌ಗಳ ನಿರ್ಮಾಣಕ್ಕೆ ಭರ್ಜರಿ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಬೆಂಗಳೂರಿನ ಪೆರಿಫೆರಲ್ ರಿಂಗ್ ರೋಡ್‌ಗೆ ಹೊಂದಿಕೊಂಡಿರುವ ಜಾಗಗಳನ್ನೇ ಈ ಲೇಔಟ್‌ಗಳ ನಿರ್ಮಾಣ ಮಾಡುವುದಕ್ಕೆ ಮಾಸ್ಟರ್ ಪ್ಲ್ಯಾನ್ ಮಾಡಿಕೊಂಡಿದೆ. ಇದರಿಂದ ಈ ಭಾಗದ ಭೂಮಿಗೆ ಸಹಜವಾಗಿಯೇ ಚಿನ್ನದ ಬೆಲೆ ಬರುತ್ತಿದೆ. ಈ ಯೋಜನೆಯ ವಿವರ ಮುಂದೆ ನೋಡೋಣ.
ಆರು ಲೇಔಟ್‌ಗಳ ನಿರ್ಮಾಣ: ಇನ್ನು ನಗರದಲ್ಲಿ ಸೈಟು ಹಾಗೂ ಲೇಔಟ್‌ಗಳನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಅಭಿವೃದ್ಧಿಪಡಿಸುತ್ತದೆ. ಈಗ ಹೊಸದಾಗಿ ಆರು ಲೇಔಟ್‌ಗಳನ್ನು ಅಭಿವೃದ್ಧಿ ಮಾಡುವುದಕ್ಕೆ ಪ್ಲ್ಯಾನ್ ಹಾಕಿಕೊಳ್ಳಲಾಗಿದೆ. ಇನ್ನು ನಗರದಲ್ಲಿ ಪೆರಿಫೆರಲ್ ರಿಂಗ್ ರೋಡ್ ಎರಡು ಹಂತದಲ್ಲಿ ಅಭಿವೃದ್ಧಿಯಾಗಲಿದೆ. ಮೊದಲ ಹಂತದಲ್ಲಿ ತುಮಕೂರು ಹಾಗೂ ಹೊಸೂರು ರಸ್ತೆ ಸಂಪರ್ಕಿಸುವ ಮಾರ್ಗದಲ್ಲಿ ನಿರ್ಮಾಣವಾಗಲಿದ್ದರೆ. ಎರಡನೇ ಹಂತದಲ್ಲಿ ಬನ್ನೇರುಘಟ್ಟ ಹಾಗೂ ಕನಕಪುರ ಮಾರ್ಗದಲ್ಲಿ ಸಾಗಲಿದೆ. ಪೆರಿಫೆರಲ್ ರಿಂಗ್ ರೋಡ್‌ನ ಮಾರ್ಗದಲ್ಲಿ ವಾಣಿಜ್ಯ ಹಾಗೂ ಸ್ವಂತ ಬಳಕೆಗೆ ಲೇಔಟ್‌ಗಳನ್ನು ಅಭಿವೃದ್ಧಿ ಮಾಡಲಾಗುತ್ತಿದೆ.
ಬಿಡಿಎ ಲೇಔಟ್‌ಗಳ ವಿಶೇಷವೇನು: ಬೆಂಗಳೂರಿನಲ್ಲಿ ಬಿಡಿಎಯಿಂದ ಆಸ್ತಿ ಖರೀದಿ ಮಾಡುವುದರಿಂದ ಆಗುವ ಲಾಭವೆಂದರೆ. ಆಸ್ತಿಗಳಲ್ಲಿ ಯಾವುದೇ ಗೊಂದಲ ಇರುವುದಿಲ್ಲ. ಅಲ್ಲದೆ ಈ ಆಸ್ತಿಗಳು ಎ -ಖಾತಾದ ಆಸ್ತಿಗಳಾಗಿರಲಿವೆ. ಹೀಗಾಗಿ, ಆಸ್ತಿಗಳಲ್ಲಿ ಬಿ – ಖಾತಾದ ಗೊಂದಲ ಇಲ್ಲದೆ ಜನ ಜಾಗ ಖರೀದಿ ಮಾಡಬಹುದಾಗಿದೆ.
ಆಸ್ತಿಗಳ ಬೆಲೆ ಹಲವು ಕಾರಣಕ್ಕೆ ಹೆಚ್ಚಳ: ಇನ್ನು ವಿವಿಧ ಕಾರಣಕ್ಕೆ ಈ ಭಾಗದಲ್ಲಿ ಆಸ್ತಿಗಳ ಬೆಲೆ ಹೆಚ್ಚಳವಾಗುತ್ತಿದೆ. ಇದೀಗ ಈ ಭಾಗದಲ್ಲಿ ಬಿಡಿಎ ಸಹ ಲೇಔಟ್‌ಗಳ ನಿರ್ಮಾಣಕ್ಕೆ ಮುಂದಾಗಿರುವುದು ಹಾಗೂ ಪೆರಿಫೆರಲ್ ರಿಂಗ್ ರೋಡ್ ಅಭಿವೃದ್ಧಿ ಆಗುತ್ತಿರುವುದರಿಂದ ಸಹಜವಾಗಿಯೇ ಈ ಭಾಗದಲ್ಲಿ ಭೂಮಿಯ ಬೆಲೆ ಹೆಚ್ಚಳವಾಗುತ್ತಿದೆ. ಮುಂದಿನ ದಿನಗಳಲ್ಲಿ ಇಲ್ಲಿ ಭೂಮಿಯ ಬೆಲೆ ಇನ್ನಷ್ಟು ಹೆಚ್ಚಳವಾಗು ನಿರೀಕ್ಷೆ ಇದೆ.
ಈ ಭಾಗದಲ್ಲಿ ಭೂಸ್ವಾಧೀನ ಪ್ರಕ್ರಿಯೆ: ಈ ಯೋಜನೆಗೆ ಬಿಡಿಎ ವಿವಿಧ ಭಾಗದಲ್ಲಿ ಭೂಸ್ವಾಧೀನ ಪ್ರಕ್ರಿಯೆಯನ್ನು ಶುರು ಮಾಡಿದೆ. ಈ ಭಾಗದಲ್ಲಿ ಹೊಸ ಲೇಔಟ್‌ಗಳ ನಿರ್ಮಾಣ ಆಗಲಿದೆ. ಹೊಸ ಲೇಔಟ್‌ಗಳ ಅಭಿವೃದ್ಧಿಗೆ ಈ ಗ್ರಾಮಗಳಲ್ಲಿ ಭೂಸ್ವಾಧೀನ ಪ್ರಕ್ರಿಯೆ ನಡೆಯುತ್ತಿದೆ. ಇದಕ್ಕಾಗಿ ಕಗ್ಗಲಿಪುರ, ಓ.ಬಿ ಚೂಡನಹಳ್ಳಿ, ಅಗರ, ಉತ್ತರಿ, ದೇವಗೆರೆ, ಗುಡಿಮಾವು, ಬಿ.ಎಂ ಕಾವಲ್ ಗ್ರಾಮ, ಗುಳಕಮಲೆ ಗ್ರಾಮ, ಕಂಬೀಪುರ ಹಾಗೂ ಗಂಗಸಂದ್ರ ಸೇರಿದಂತೆ ವಿವಿಧ ಭಾಗದಲ್ಲಿ ಭೂಸ್ವಾಧೀನಕ್ಕೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಮುಂದಾಗಿದೆ.
ಭರ್ಜರಿ ಬೆಲೆ: ಇನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಈ ಭಾಗದಲ್ಲಿ ಏಕಕಾಲಕ್ಕೆ ಎರಡು ಬೃಹತ್ ಯೋಜನೆಗಳನ್ನು ಕೈಗೆತ್ತಿಕೊಂಡಿದೆ. ಹೀಗಾಗಿ, ಸಹಜವಾಗಿಯೇ ಈ ಭಾಗದಲ್ಲಿ ಭೂಮಿಗಳಿಗೆ ಒಳ್ಳೆಯ ಬೆಲೆ ಬಂದಿದೆ. 6 ಲೇಔಟ್‌ಗಳ ನಿರ್ಮಾಣದಿಂದ ಈ ಭಾಗದಲ್ಲಿ ಭೂಮಿಗೆ ಒಳ್ಳೆಯ ಬೆಲೆ ಬಂದಿದೆ. ಅಲ್ಲದೆ ಭೂಸ್ವಾಧೀನ ಪ್ರಕ್ರಿಯೆಯನ್ನು ಬಿಡಿಎ ಸಹ ವೇಗವಾಗಿ ಮಾಡುತ್ತಿದೆ. ಇದಕ್ಕಾಗಿ ಕೆಎಎಸ್ ಅಧಿಕಾರಿಗಳ ತಂಡವನ್ನು ಸಹರಚಿಸಲಾಗಿದೆ.
ತಮಿಳುನಾಡು ಮಾಜಿ ಸಿಎಂ ದಿವಂಗತ ಜಯಲಲಿತಾ ಆಸ್ತಿ ಹಸ್ತಾಂತರ: ಒಟ್ಟು ಎಷ್ಟು ಕೆಜಿ ಚಿನ್ನ ಇದೆ ಗೊತ್ತಾ?


