BBMP
Loading ...

Sonu nigam

ಬೆಂಗಳೂರು:– ಬೆಂಗಳೂರಿನಲ್ಲಿ ನಡೆದ ಸಂಗೀತ ಕಾರ್ಯಕ್ರಮವೊಂದರಲ್ಲಿ ಕನ್ನಡಿಗರನ್ನು ಭಯೋತ್ಪಾದಕರಂತೆ ಬಿಂಬಿಸಿದ್ದ ಖ್ಯಾತ ಗಾಯಕ ಸೋನು ನಿಗಮ್ ಅವರು ಕೊನೆಗೂ ಕನ್ನಡಿಗರ ಬಳಿ ಕ್ಷಮೆ ಕೋರಿದ್ದಾರೆ.

ಈಗಾಗಲೇ ಕರ್ನಾಟಕದಲ್ಲಿ ಸೋನು ನಿಗಮ್ ವಿರುದ್ಧ ಆಕ್ರೋಶ ಭುಗಿಲೆದ್ದಿದ್ದು, ಬೆಂಗಳೂರಿನಲ್ಲಿ ಈಗಾಗಲೇ FIR ಕೂಡ ದಾಖಲಾಗಿದೆ. ಅಷ್ಟೇ ಅಲ್ಲದೇ ಗಾಯಕನ ಮೇಲೆ ಕಠಿಣ ಕ್ರಮ ಕೈಗೊಂಡಿರುವ ಫಿಲ್ಮ್ ಚೇಂಬರ್ ಕನ್ನಡ ಚಿತ್ರರಂಗದಿಂದ ಬ್ಯಾನ್ ಕೂಡ ಮಾಡಿದೆ.

ʻಕನ್ನಡ ಹಾಡು ಹಾಡಿʼ ಅಂದಿದ್ದಕ್ಕೆ ಉಗ್ರರ ದಾಳಿಗೆ ಹೋಲಿಕೆ ಮಾಡಿ ವಿವಾದಕ್ಕೀಡಾಗಿದ್ದ ಖ್ಯಾತ ಹಿನ್ನೆಲೆ ಗಾಯಕ ಸೋನು ನಿಗಮ್‌ ಕೊನೆಗೂ ಕನ್ನಡಿಗರ ಆಕ್ರೋಶಕ್ಕೆ ಮಣಿದಿದ್ದಾರೆ. ಕನ್ನಡ ಸಿನಿಮಾಗಳಲ್ಲಿ ಹಾಡು ಹಾಡಿಸದಿರಲು ಫಿಲ್ಮ್ ಚೇಂಬರ್ ತೀರ್ಮಾನ ಕೈಗೊಂಡ ಬೆನ್ನಲ್ಲೇ ಕನ್ನಡಿಗರ ಮತ್ತು ಕರ್ನಾಟಕಕ್ಕೆ ಕ್ಷಮೆ ಕೋರಿದ್ದಾರೆ. ಈ ಕುರಿತು ತಮ್ಮ ಇನ್‌ಸ್ಟಾ ಖಾತೆಯಲ್ಲಿ ಪೋಸ್ಟನ್ನೂ ಹಂಚಿಕೊಂಡಿದ್ದಾರೆ.

ಕ್ಷಮಿಸಿ ಕರ್ನಾಟಕ, ನನ್ನ ಪ್ರತಿಷ್ಠೆಗಿಂತ ನಿಮ್ಮ ಪ್ರೀತಿ ದೊಡ್ಡದು.. ನಿಮ್ಮನ್ನ ಯಾವಾಗಲೂ ಪ್ರೀತಿಸುತ್ತೇನೆ ಅಂತ ಕ್ಷಮೆ ಕೋರಿದ್ದಾರೆ.

ಆರೋಪಿಗಳ ಪರ ವರದಿ ಸಲ್ಲಿಸಲು 6 ಲಕ್ಷ ಲಂಚಕ್ಕೆ ಬೇಡಿಕೆ: 1 ಲಕ್ಷ ಪಡೆಯುವಾಗ ಲೋಕಾ ಬಲೆಗೆ ಬಿದ್ದ ಕೆಂಪೇಗೌಡನಗರ ಠಾಣೆಯ ಪಿಐ, ಪಿಎಸ್‌ಐ

Leave a Reply

Your email address will not be published. Required fields are marked *