BBMP
Loading ...

D Gang

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣ ತನಿಖೆ ಪೂರ್ಣಗೊಂಡಿದ್ದು ಇಂದು ಅಥವಾ ನಾಳೆ ಚಾರ್ಜ್‌ಶೀಟ್‌ ಕೋರ್ಟ್‌ಗೆ ಸಲ್ಲಿಕೆಯಾಗುವ ಸಾಧ್ಯತೆಯಿದೆ. ಎಸ್‌ಐಟಿ ಪೊಲೀಸರು ಚಾರ್ಜ್‌ಶೀಟ್‌ ಪೂರ್ಣಗೊಳಿಸುತ್ತಿದ್ದಾರೆ. ಆರೋಪ ಪಟ್ಟಿಯನ್ನು 2-3 ಬಾರಿ ಕಾನೂನು ತಜ್ಞರಿಂದ ಪರಿಶೀಲನೆ ನಡೆಸಿದ್ದಾರೆ ಎನ್ನಲಾಗಿದೆ.

ಹೆಡ್ ಆಫ್ ದಿ ಚಾರ್ಜ್‌ಶೀಟ್‌ ಹೇಗಿರಬೇಕು? ಪ್ರಕರಣದಲ್ಲಿನ ಸಾಕ್ಷಿಗಳ ಹೇಳಿಕೆ ಎಲ್ಲಿ ಹಾಕಬೇಕು? ಡಿಜಿಟಲ್‌ ಸಾಕ್ಷ್ಯಗಳನ್ನು ಹೇಗೆ ನಮೂದಿಸಬೇಕು? ಹೀಗೆ ಎಲ್ಲಾ ಅಂಶಗಳಲ್ಲೂ ಪೊಲೀಸರು ಫುಲ್‌ ಅಲರ್ಟ್‌ ಆಗಿದ್ದಾರೆ.

ಈ ರೀಪೋರ್ಟ್​ಗಳೂ ಕೈ ಸೇರಿದ ನಂತರ ನಂತರ ಪೊಲೀಸರು ಕೋರ್ಟ್ ಗೆ ಚಾರ್ಜ್ ಶೀಟ್ ಸಲ್ಲಿಸಲಿದ್ದಾರೆ. ಚಾರ್ಜ್ ಶೀಟ್ ಸಲ್ಲಿಕೆಗೆ ಇನ್ನು ಹತ್ತು ದಿನವಷ್ಟೆ ಬಾಕಿ ಇದೆ. ಸೆಪ್ಟೆಂಬರ್ 10 ರೊಳಗೆ ಪೊಲೀಸರು ಚಾರ್ಜ್ ಶೀಟ್ ಸಲ್ಲಿಸಬೇಕಾಗಿರುತ್ತದೆ. ಬಹುತೇಕ ಸೆಪ್ಟೆಂಬರ್ 5 ರೊಳಗೆ ಕೋರ್ಟ್ ಗೆ ಚಾರ್ಜ್ ಶೀಟ್ ಸಲ್ಲಿಕೆಯಾಗಲಿದೆ.

ರೇಣುಕಾಸ್ವಾಮಿ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಸ ಹೊಸ ಅಪ್ಡೇಟ್​ಗಳು ಬರುತ್ತಲೇ ಇವೆ. ಪೊಲೀಸರು ಈಗಾಗಲೇ ಚಾರ್ಜ್ ಶೀಟ್ ಸಲ್ಲಿಸಲು ಸಿದ್ಧತೆಗಳನ್ನು ಮಾಡಲಾಗುತ್ತಿದ್ದು ಅಂತಿಮ ಹಂತದ ತಯಾರಿ ನಡೆಯುತ್ತಿದೆ ಎನ್ನಲಾಗಿದೆ. 4000ಕ್ಕೂ ಹೆಚ್ಚು ಪುಟದ ಚಾರ್ಜ್ ಶೀಟ್ ಸಲ್ಲಿಸಲು ಸಿದ್ಧತೆ ಮಾಡಲಾಗಿದೆ. ಈ ಒಂದು ಕೇಸ್​​ನಲ್ಲಿ 60 ದಿನಗಳ ಕಾಲ ತನಿಖೆ ಮಾಡಿದ್ದು ಚಾರ್ಜ್ ಶೀಟ್ ಕೋರ್ಟ್​ಗೆ ಸಲ್ಲಿಸೋಕೆ ಕೌಂಟ್​ ಡೌನ್ ಶುರುವಾಗಿದೆ ಎನ್ನಲಾಗಿದೆ.

ನಗರ ಪೊಲೀಸ್‌ ಆಯುಕ್ತ ಬಿ ದಯಾನಂದ್‌ ಅವರು ಖುದ್ದು ಚಾರ್ಜ್‌ಶೀಟ್‌ ಡ್ರಾಫ್ಟ್‌ ಕಾಪಿ ಮೇಲೆ ನಿಗಾ ಇಟ್ಟಿದ್ದಾರೆ. ಬಹುತೇಕ ಪ್ರಕರಣದಲ್ಲಿ ಚಾರ್ಜ್‌ಶೀಟ್‌ನಲ್ಲಿರುವ ಲೋಪ ವಿಚಾರವನ್ನು ವಕೀಲರು ಪ್ರಸ್ತಾಪ ಮಾಡಿ ಆರೋಪಿಗಳನ್ನು ಪಾರು ಮಾಡುತ್ತಾರೆ. ಈ ಕಾರಣಕ್ಕೆ ಕಾನೂನು ತಜ್ಞರಿಂದ ಸಲಹೆ ಪಡೆದು ಆರೋಪ ಪಟ್ಟಿ ಸಿದ್ಧಪಡಿಸಲಾಗುತ್ತಿದೆ.

ಹೈಕೋರ್ಟ್‌ನಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ತೀರ್ಪು ಬಂದರೆ ಮುಂದೇನ್ಮಾಡ್ತಾರೆ? ಇಲ್ಲಿದೆ ಸಂಪೂರ್ಣ ಮಾಹಿತಿ…

Leave a Reply

Your email address will not be published. Required fields are marked *