BBMP
Loading ...

Siddaramaiah

ಮುಡಾ ಹಗರಣದ ಪ್ರಾಸಿಕ್ಯೂಷನ್ ಅರ್ಜಿ ವಿಚಾರಣೆ ಕರ್ನಾಟಕ ಹೈಕೋರ್ಟ್​​ನಲ್ಲಿ ಕ್ಲೈಮ್ಯಾಕ್ಸ್ ಹಂತಕ್ಕೆ ಬಂದಿದೆ. ಆಗಸ್ಟ್ 19, ಆಗಸ್ಟ್ 29 ಮತ್ತು ಆಗಸ್ಟ್ 31ರಂದು ಸುದೀರ್ಘ ವಾದ ಪ್ರತಿವಾದ ನಡೆದಿತ್ತು. ಇವತ್ತು ಕೂಡಾ ಅರ್ಜಿ ವಿಚಾರಣೆ ನಡೆಯಲಿದ್ದು, ಕೆಲವೇ ಕ್ಷಣದಲ್ಲಿ ವಾದ-ಪ್ರತಿವಾದ ಆರಂಭವಾಗಲಿದೆ. ಒಂದು ವೇಳೆ ಸಿಎಂ ವಿರುದ್ಧ ತೀರ್ಪು ಬಂದರೆ ಅವರ ಮುಂದಿರುವ ಆಯ್ಕೆಗಳೇನು? ಇಲ್ಲಿದೆ ನೋಡಿ!

ಸಿಎಂ ಪರ ತೀರ್ಪು ಬಂದರೆ, ಬೀಸುವ ದೊಣ್ಣೆಯಿಂದ ಅವರು ಮತ್ತಷ್ಟು ದಿನ ಪಾರಾಗಬಹುದು. ಪ್ರಾಸಿಕ್ಯೂಷನ್‌ನಿಂದ ಕುಗ್ಗಿರುವ ಸಿದ್ದರಾಮಯ್ಯಗೆ ಆನೆ ಬಲ ಬಂದಂತಾಗಲಿದೆ. ಕಾಂಗ್ರೆಸ್ ಮತ್ತು ರಾಜ್ಯ ಸರ್ಕಾರಕ್ಕೂ ನೈತಿಕ ಶಕ್ತಿ ಸಿಗಲಿದೆ. ಶಾಸಕರು, ಸಚಿವರು ಮತ್ತು ಕಾರ್ಯಕರ್ತರಲ್ಲಿ ಆತ್ಮವಿಶ್ವಾಸ ಹೆಚ್ಚಾಗಲಿದೆ. ಅಲ್ಲದೇ ರಾಜಕೀಯವಾಗಿ ಸಿಎಂ ಮತ್ತಷ್ಟು ಬಲಿಷ್ಠವಾಗಬಹುದು. ಸಿಎಂ ಮತ್ತು ಸರ್ಕಾರದ ವಿರುದ್ದ ಹೋರಾಟ ನಡೆಸ್ತಿರೋ ಬಿಜೆಪಿಗೆ ಕಾನೂನು ಮೂಲಕವೇ ತಿರುಗೇಟು ಕೊಟ್ಟಂತಾಗುತ್ತದೆ

ಹೈಕೋರ್ಟ್ ಆದೇಶ ಪ್ರಶ್ನಿಸಿ ಸುಪ್ರೀಂಕೋರ್ಟ್ ಮೊರೆ ಹೋಗಲು ಅವಕಾಶ ಸಿದ್ದರಾಮಯ್ಯಗೆ ಇರುತ್ತದೆ. ಈ ಮೂಲಕ ರಾಜ್ಯಪಾಲರ ವಿರುದ್ಧ ಕಾನೂನು ಸಂಘರ್ಷ ಮುಂದುವರಿಯಲಿದೆ. ಜೊತೆಗೆ ರಾಜ್ಯಾದ್ಯಂತ ಮತ್ತೊಂದು ಸುತ್ತಿನ ಹೋರಾಟಕ್ಕೆ ಕರೆ ನೀಡಬಹುದು. ರಾಷ್ಟ್ರ ಮಟ್ಟದಲ್ಲೂ ಕಾಂಗ್ರೆಸ್ ಈ ವಿಚಾರ ಪ್ರಸ್ತಾಪಿಸಿ ಕೇಂದ್ರ ಸರ್ಕಾರದ, ರಾಜ್ಯಪಾಲರ ವಿರುದ್ಧ ರಾಜಕೀಯ ಹೋರಾಟ ಆರಂಭಿಸಬಹುದು.

ರಾಜ್ಯಪಾಲರ ಪ್ರಾಸಿಕ್ಯೂಷನ್ ಪರ ಹೈಕೋರ್ಟ್ ಆದೇಶ ನೀಡಿದರೆ ತನಿಖೆಗೆ ಅವಕಾಶ ಸಿಕ್ಕಂತಾಗುತ್ತದೆ. ಆಗ ತಕ್ಷಣವೇ ಸಿಎಂ ವಿರುದ್ಧ ಎಫ್​ಐಆರ್ ದಾಖಲಾಗುವ ಸಾಧ್ಯತೆ ಇದೆ. ಈ ವೇಳೆ ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡಬಹುದು ಅಥವಾ ರಾಜೀನಾಮೆ ನೀಡದೇ ಕಾನೂನು ಹೋರಾಟ ಮುಂದುವರಿಸಬಹುದು.

ಗೃಹಲಕ್ಷ್ಮಿಯರೇ ನಿಮಗೊಂದು ಬಂಪರ್‌ ಆಫರ್: ರೀಲ್ಸ್ ಮಾಡಿ ಬಹುಮಾನ ಗೆಲ್ಲಿ

Leave a Reply

Your email address will not be published. Required fields are marked *