BBMP
Loading ...

Actress

Greater Bengaluru News9 : ಖ್ಯಾತ ನಟಿ ನೀಡಿರುವ ಲೈಂಗಿಕ ಕಿರುಕುಳ ದೂರಿನ ಹಿನ್ನೆಲೆ, ಆರೋಪಿ ಅರವಿಂದ್ ವೆಂಕಟೇಶ್ ರೆಡ್ಡಿಗೆ ವಿಚಾರಣೆಗೆ ಹಾಜರಾಗುವಂತೆ ಗೋವಿಂದರಾಜನಗರ ಪೊಲೀಸರು ನೋಟಿಸ್ ನೀಡಿದ್ದಾರೆ.

ನಟಿಯು ಅರವಿಂದ್ ವಿರುದ್ಧ ಮಾಡಿದ ಆರೋಪಕ್ಕೆ ಸಂಬಂಧಿಸಿ ಹೇಳಿಕೆ ಪಡೆಯಲು ನೋಟಿಸ್ ನೀಡಲಾಗಿದೆ. ದೂರು ಸಲ್ಲಿಸಿದ ಬಳಿಕ ನಟಿ ಪೊಲೀಸರ ಸಂಪರ್ಕಕ್ಕೆ ಬಂದಿಲ್ಲವೆಂದು ತಿಳಿದುಬಂದಿದೆ. ಆದ್ದರಿಂದ ಆಕೆಯು ಮಾಡಿದ ಆರೋಪಗಳ ಬಗ್ಗೆ ವಿವರ ಪಡೆಯಲು ಪೊಲೀಸರ ತಂಡ ನೋಟಿಸ್ ಜಾರಿ ಮಾಡಿದೆ.

ಅರವಿಂದ್ ವೆಂಕಟೇಶ್ ರೆಡ್ಡಿ ನಾಳೆ ವಿಚಾರಣೆಗೆ ಹಾಜರಾಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಪೋಲೀಸರು ಪ್ರಕರಣದ ತನಿಖೆಯನ್ನು ಮುಂದುವರಿಸಿದ್ದಾರೆ.

Leave a Reply

Your email address will not be published. Required fields are marked *