BBMP
Loading ...

Screenshot-2025-02-03-105823

ಬೆಂಗಳೂರು: ನಗರದಲ್ಲಿ ಫುಟ್​​ಪಾತ್ ಮೇಲೆ ವಾಹನ ಚಲಾಯಿಸುವುದು  ಕಾಮನ್​ ಅನ್ನೋ ರೀತಿ ಆಗಿದೆ. ಜನರು ಸಿಗ್ನಲ್​ ಸಮಸ್ಯೆಯಿಂದ ಪಾರಾಗಲು ಫುಟ್​ಪಾತ್​ ಮೇಲೂ ಬೈಕ್​ ಹತ್ತಿಸಿಕೊಂಡು ಹೋಗುತ್ತಾರೆ. ಆದರೆ ಇನ್ಮುಂದೆ ಆ ರೀತಿ ಫುಟ್​​ಪಾತ್​ ಮೇಲೆ ವಾಹನ ಚಲಾಯಿಸಿದರೆ ಪೊಲೀಸರು ದಂಡದ  ಜೊತೆ ಪ್ರಕರಣವನ್ನು ದಾಖಲು ಮಾಡಿ ಕೋರ್ಟ್​ಗೆ ಎಳೆಯುತ್ತಾರೆ. ಅಲ್ಲದೇ ಪ್ರಕರಣ ದಾಖಲಿಸಿ ಗಾಡಿಯನ್ನು ಸ್ಥಳದಲ್ಲೇ ಸೀಜ್ ಮಾಡ್ತಾರೆ.

ಅದಲ್ಲದೆ ದಂಡಾಸ್ತ್ರಕ್ಕೂ ಜಗ್ಗದ ವಾಹನ ಸವಾರರ ಡ್ರೈವಿಂಗ್​ ಲೈಸೆನ್ಸ್​ ಅಮಾನತು ಮಾಡಲು ತೀರ್ಮಾನಿಸಿದ್ದಾರೆ. ಪಾದಚಾರಿಗಳ ಸುರಕ್ಷತೆ ದೃಷ್ಠಿಯಿಂದ ಸಂಚಾರಿ ಪೊಲೀಸರು ಈ ನಿಯಮ ಜಾರಿಗೆ ತಂದಿದ್ದಾರೆ. ಈ ಹಿಂದೆ ಫುಟಪಾತ್​​ ಮೇಲೆ ಗಾಡಿ ಓಡಿಸಿದರೆ ಸಂಚಾರಿ ಪೊಲೀಸರು ದಂಡ ಹಾಕುತ್ತಿದ್ದರು. ದಂಡ ವಿಧಿಸಿದರೂ ವಾಹನ ಸವಾರರು ಮಾತ್ರ, ಜಗ್ಗದೆ ಮತ್ತೆ ತಮ್ಮ ಫುಟ್​ಪಾತ್​ ಮೇಲೆ ವಾಹನ ಚಲಾಯಿಸುತ್ತಿದ್ದಾರೆ.

ಹೀಗಾಗಿ, ಬೆಂಗಳೂರು ಸಂಚಾರಿ ಪೊಲೀಸ್​ ಹಿರಿಯ ಅಧಿಕಾರಿಗಳು ಸಭೆ ನಡೆಸಿ, ಡ್ರೈವಿಂಗ್​ ಲೈಸೆನ್ಸ್​​ ಅಮಾನತು ಮಾಡುವ ನಿರ್ಧಾರ ಕೈಗೊಂಡಿದ್ದಾರೆ. ಮೊದಲ ಬಾರಿಗೆ ದಂಡ ಹಾಕಲಾಗುತ್ತದೆ. ಮತ್ತೆ ಮತ್ತೆ ಸಿಕ್ಕಿಬಿದ್ದರೇ, ಆತನ ಲೈಸೆನ್ಸ್​ ಅಮಾನತು ಮಾಡುವಂತೆ ಸಂಚಾರಿ ಪೊಲೀಸರು ಶಿಪಾರಸ್ಸು ಮಾಡುತ್ತಾರೆ. ಹೀಗಾಗಿ, ಇನ್ಮುಂದೆ ಫುಟ್​ಪಾತ್​​ ಮೇಲೆ ಗಾಡಿ ಓಡಿಸುವ ಮುನ್ನ ಯೋಚಿಸಿ ಎಂದು ಸಂಚಾರಿ ಪೊಲೀಸರಿ ಎಚ್ಚರಿಕೆ ನೀಡಿದ್ದಾರೆ.

Leave a Reply

Your email address will not be published. Required fields are marked *