BBMP
Loading ...

Suryaghar Cheme

ಬೆಂಗಳೂರು : ಪ್ರಧಾನಮಂತ್ರಿ ಸೂರ್ಯ ಘರ್ ಮುಕ್ತ ವಿದ್ಯುತ್ ಯೋಜನೆಯಡಿಯಲ್ಲಿನ ಸಬ್ಸಿಡಿ ಮಾಹಿತಿಯನ್ನು ಬೆಸ್ಕಾಂ (BESCOM) ತನ್ನ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ. ಐದು ವರ್ಷ ಪಾವತಿಯನ್ನು ಮಾಡಿ, ಇಪ್ಪತ್ತು ವರ್ಷ ಯಾವುದೇ ಹಣ ಪಾವತಿಸದೇ, ವಿದ್ಯುತ್ ಅನ್ನು ಬಳಸಿಕೊಳ್ಳಬಹುದು ಎಂದು ಹೇಳಿದೆ.

ರೂಫ್ ಟಾಪ್ ಸೋಲಾರ್ ಪ್ಲ್ಯಾಂಟ್ ಹಾಕಿಸಿಕೊಳ್ಳಲು ತಗಲುವ ಖರ್ಚು ಮತ್ತು ಅದರಿಂದಾಗುವ ಉಳಿತಾಯದ ಬಗ್ಗೆಯೂ ಬೆಸ್ಕಾಂ ವಿವರಣೆಯನ್ನು ನೀಡಿದೆ. ಇದಕ್ಕೆ ವಾರ್ಷಿಕ 7% ನಲ್ಲಿ ಬ್ಯಾಂಕ್ ಲೋನ್ ಕೂಡಾ ಲಭ್ಯವಿದೆ. ಹತ್ತು ವರ್ಷದವರೆಗೆ ಇಎಂಐ ಕಟ್ಟುವ ಅವಕಾಶವೂ ಇದೆ ಎಂದು ತನ್ನ ಎಕ್ಸ್ ಅಕೌಂಟ್ ನಲ್ಲಿ ಬೆಸ್ಕಾಂ ಹೇಳಿದೆ.

ಒಂದು ಕಿಲೋವ್ಯಾಟ್ ಸೋಲಾರ್ ಫಲಕ ಹಾಕಲು 10 X 10 ಜಾಗ ಸಾಕು ಮತ್ತು ಪ್ಲ್ಯಾಂಟಿನ ಮೊತ್ತ ಐದು ವರ್ಷದ ನಿರ್ವಹಣಾ ವೆಚ್ಚವೂ ಒಳಗೊಂಡಂತೆ ಸೇರಿದೆ ಎಂದು ಪ್ರಕಟಣೆಯಲ್ಲಿ ಹೇಳಿದೆ. ಲೇಟೆಸ್ಟ್ ವಿದ್ಯುತ್ ಬಿಲ್ ಮತ್ತು ಆಧಾರ್ ಕಾರ್ಡಿನ ಕಾಪಿಯೊಂದಿಗೆ ಇದಕ್ಕೆ ಅರ್ಜಿ ಸಲ್ಲಿಸಬಹುದು.

ಮನೆಬಳಕೆಯ ನಂತರ ಉಳಿಯುವ ವಿದ್ಯುತ್ ಅನ್ನು ಮಾರಾಟ ಮಾಡುವ ಮೂಲಕ, ತಿಂಗಳು ತಿಂಗಳು ಹಣವನ್ನೂ ಸಂಪಾದಿಸಬಹುದು ಎಂದು ಬೆಸ್ಕಾಂ ಹೇಳಿದೆ. 1, 2 ಮತ್ತು 3 ಕಿಲೋವ್ಯಾಟ್ ಸಾಮರ್ಥ್ಯದ ಸೋಲಾರ್ ಪ್ಲ್ಯಾಂಟ್ ಅಳವಡಿಸಬಹುದಾಗಿದೆ.

ಸಬ್ಸಿಡಿ ಮೊತ್ತದ ವಿವರ ಹೀಗಿದೆ :

1ಕಿಲೋವ್ಯಾಟ್ : 30 ಸಾವಿರ ರೂಪಾಯಿ

2ಕಿಲೋವ್ಯಾಟ್ : 60 ಸಾವಿರ ರೂಪಾಯಿ

3 ಕಿಲೋವ್ಯಾಟ್ : 78 ಸಾವಿರ ರೂಪಾಯಿ

ವಸತಿ ಸಮುಚ್ಚಯಗಳಿಗಾದರೆ, 500 ಕಿಲೋವ್ಯಾಟ್ ವರೆಗಿನ ಸಾಮರ್ಥ್ಯದ ಪ್ಲ್ಯಾಂಟಿಗೆ 18 ಸಾವಿರ ರೂಪಾಯಿ ಸಬ್ಸಿಡಿ

101 – 200 ಯುನಿಟ್ ಬಳಕೆಯಾಗುತ್ತಿದ್ದರೆ, 1 ಕಿಲೋವ್ಯಾಟ್ ಸೋಲಾರ್ ಪ್ಲ್ಯಾಂಟ್ ಹಾಕಿಕೊಂಡರೆ, ಅದರ ವೆಚ್ಚ 60 ರಿಂದ 80 ಸಾವಿರ ರೂಪಾಯಿ, ಇದರಿಂದ ವಾರ್ಷಿಕ ಉಳಿತಾಯದ ಮೊತ್ತ 9,600 ರೂಪಾಯಿ.

101 – 200 ಯುನಿಟ್ ಬಳಕೆಯಾಗುತ್ತಿದ್ದರೆ, 2 ಕಿಲೋವ್ಯಾಟ್ ಸೋಲಾರ್ ಪ್ಲ್ಯಾಂಟ್ ಹಾಕಿಕೊಂಡರೆ, ಅದರ ವೆಚ್ಚ 1.2 ಲಕ್ಷದಿಂದ 1.6ಲಕ್ಷದವರೆಗೆ, ಇದರಿಂದ ವಾರ್ಷಿಕ ಉಳಿತಾಯದ ಮೊತ್ತ 21,600 ರೂಪಾಯಿ.

201 – 300 ಯುನಿಟ್ ಬಳಕೆಯಾಗುತ್ತಿದ್ದರೆ, 3 ಕಿಲೋವ್ಯಾಟ್ ಸೋಲಾರ್ ಪ್ಲ್ಯಾಂಟ್ ಹಾಕಿಕೊಂಡರೆ, ಅದರ ವೆಚ್ಚ 1.8 ಲಕ್ಷದಿಂದ 2.4 ಲಕ್ಷದವರೆಗೆ, ಇದರಿಂದ ವಾರ್ಷಿಕ ಉಳಿತಾಯದ ಮೊತ್ತ 36,000 ರೂಪಾಯಿ.

ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆ ಇದಾಗಿದ್ದು, ಮೊದಲ ಐದು ವರ್ಷದಲ್ಲೇ ಹಾಕಿದ ಬಂಡವಾಳ ವಾಪಸ್ ಬರುತ್ತದೆ. ಬಳಕೆಯ ನಂತರ ಉಳಿದ ವಿದ್ಯುತ್ ಅನ್ನು ಆಯಾಯ ವಿದ್ಯುತ್ ಪೂರೈಕೆ ಕಂಪೆನಿಗಳಿಗೆ ಮಾರಾಟ ಮಾಡುವ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ. ಸೂರ್ಯಘರ್ ಯೋಜನೆಗೆ ಈ ಲಿಂಕ್ ಮೂಲಕ https://pmsuryaghar.gov.in ನೋಂದಾಯಿಸಿಕೊಳ್ಳಬಹುದು ಹಾಗೂ ಬೆಸ್ಕಾಂನ ಸೋಲಾರ್ ಸಹಾಯವಾಣಿ ಸಂಖ್ಯೆ 080-22340816 ಕ್ಕೆ ಕರೆ ಮಾಡಬಹುದು.

Leave a Reply

Your email address will not be published. Required fields are marked *