BBMP
Loading ...

Bribe

Greater Bengaluru News9 : ಪೋಡಿ ಮಾಡಿ ಖಾತೆ ಮಾಡಿಸಿಕೊಡುವುದಾಗಿ ಹೇಳಿ ವ್ಯಕ್ತಿಯೊಬ್ಬನಿಂದ 10 ಸಾವಿರ ರೂ. ಲಂಚ ಪಡೆಯುತ್ತಿದ್ದ ವೇಳೆ ರೆವಿನ್ಯೂ ಇನ್ಸ್​ಪೆಕ್ಟರ್​ ಲೋಕಾಯುಕ್ತ ಬಲೆಗೆ ಸಿಕ್ಕಿಬಿದ್ದ ಘಟನೆ ಮಳವಳ್ಳಿ ಪಟ್ಟಣದ ತಾಲೂಕು ಕಚೇರಿಯಲ್ಲಿ ಇಂದು ನಡೆದಿದೆ.

ಹಲಗೂರು ಹೋಬಳಿ ರೆವಿನ್ಯೂ ಇನ್ಸ್​ಪೆಕ್ಟ‌ರ್ ಮಧುಸೂದನ್ ಲೋಕಾಯುಕ್ತ ಬಲೆಗೆ ಸಿಕ್ಕಿಬಿದ್ದವರು. ದಳವಾಯಿಕೊಡಹಳ್ಳಿ ಗ್ರಾಮದ ನಂಜುಂಡಸ್ವಾಮಿ ಅವರಿಗೆ ದಳವಾಯಿಕೋಡಹಳ್ಳಿ ಗ್ರಾಮದ ಸರ್ವೇ ನಂಬರ್ 72ರಲ್ಲಿ ಇರುವ 5 ಎಕರೆ 28 ಗುಂಟೆ ಇನಾಮಿ ಜಮೀನನ್ನು ಪೋಡಿ ಮಾಡಿ ಖಾತೆ ಮಾಡಿಕೊಡಲು ಮಧುಸೂದನ್ ಎಕರೆಗೆ 2 ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದರು ಎಂದು ದೂರಲಾಗಿತ್ತು.

ನಂಜುಂಡಸ್ವಾಮಿ ಅವರ ತಾಯಿ ಕೆಂಪಮ್ಮ ಹೆಸರಿನಲ್ಲಿರುವ 12 ಗುಂಟೆ ಜಮೀನನ್ನು ಪೋಡಿ ಮಾಡಿ ಖಾತೆ ಮಾಡಲು ಮಧುಸೂದನ್ ಅವರು ಲಂಚ ಕೇಳಿದ್ದಾರೆ. ಲೋಕಾಯುಕ್ತರಿಗೆ ದೂರು ನೀಡಿದ ಹಿನ್ನಲೆ ಲೋಕಾಯುಕ್ತ ಎಸ್​ಪಿ ಸುರೇಶ್ ಬಾಬು, ಡಿವೈಎಸ್​ಪಿ ಸುನೀಲ್ ಕುಮಾರ್, ಮಾರ್ಗದರ್ಶನದಲ್ಲಿ ಇನ್ಸ್​ಪೆಕ್ಟ‌ರ್ ರವಿಕುಮಾರ್​ ನೇತೃತ್ವದಲ್ಲಿ ಇನ್ಸ್​ಪೆಕ್ಟರ್ ಬ್ಯಾಡರ ಗೌಡ ತಂಡ ಮಧುಸೂದನ್ ಅವರು 10 ಸಾವಿರ ರೂ. ಮುಂಗಡವನ್ನು ಪಡೆಯುವಾಗ ದಾಳಿ ಮಾಡಿ ವಶಕ್ಕೆ ಪಡೆದಿದ್ದಾರೆ.

ಈ ವೇಳೆ ಸಿದ್ದಲಿಂಗಸ್ವಾಮಿ ಶರತ್, ಮಹದೇವ, ಮಾನಸ, ಶ್ರೀದೇವಿ ತಂಡದಲ್ಲಿದ್ದರು.

Leave a Reply

Your email address will not be published. Required fields are marked *