BBMP
Loading ...

Bidadi

Greater Bengaluru News9 : ಗ್ರೇಟರ್‌ ಬೆಂಗಳೂರು ಸಮಗ್ರ ಉಪನಗರ ನಿರ್ಮಾಣ (ಬಿಡದಿ ಟೌನ್‌ಶಿಪ್‌) ಯೋಜನೆ ಉದ್ದೇಶಿತ 9 ಗ್ರಾಮಗಳ ಪೈಕಿ ಮೂರು ಗ್ರಾಮಗಳ ಭೂಸ್ವಾಧೀನಕ್ಕೆ ಸರ್ಕಾರ ಅಂತಿಮ ಅಧಿಸೂಚನೆ ಹೊರಡಿಸಿದೆ. ಮುಂದಿನ ವಾರದಿಂದಲೇ ಪರಿಹಾರಧನ ಬಿಡುಗಡೆ ಆರಂಭವಾಗಲಿದೆ.

ಬೆಂಗಳೂರು ದಕ್ಷಿಣ (ರಾಮನಗರ) ಜಿಲ್ಲೆಯ ಬಿಡದಿ ಹೋಬಳಿಯಲ್ಲಿ ಅಂದಾಜು 20 ಸಾವಿರ ಕೋಟಿ ರೂ., ವೆಚ್ಚದಲ್ಲಿ ತಲೆ ಎತ್ತಲಿರುವ ಗ್ರೇಟರ್‌ ಬೆಂಗಳೂರು ಸಮಗ್ರ ಉಪನಗರ ನಿರ್ಮಾಣ ಯೋಜನೆಗಾಗಿ 2025ರ ಮಾರ್ಚ್‌ನಲ್ಲಿ 9 ಗ್ರಾಮಗಳ ಒಟ್ಟು 7481 ಎಕರೆ ಭೂ ಸ್ವಾಧೀನಕ್ಕೆ ಸರ್ಕಾರ ಪ್ರಾಥಮಿಕ ಅಧಿಸೂಚನೆ ಹೊರಡಿಸಿತ್ತು. ಸಾರ್ವಜನಿಕರು, ಭೂ ಮಾಲೀಕರಿಂದ ಆಕ್ಷೇಪಣೆ ಸಲ್ಲಿಸುವಂತೆ ಕೋರಿತ್ತು.

ಭೂ ಸ್ವಾಧೀನ ಕಾಯಿದೆಗಳ ಪ್ರಕಾರ ಒಂದು ವರ್ಷದಲ್ಲಿಅಂತಿಮ ಅಧಿಸೂಚನೆ ಹೊರಡಿಸಬೇಕಿತ್ತಾದರೂ ಈ ಅವಧಿಯನ್ನು ವಿಸ್ತರಿಸುವ ಅವಕಾಶ ಸರ್ಕಾರಕ್ಕಿತ್ತು. 2025 ರ ಮಾರ್ಚ್ 12 ರಂದು ಪ್ರಾಥಮಿಕ ಅಧಿಸೂಚನೆ ಹೊರಡಿಸಲಾಗಿತ್ತು. ನಂತರ 2026ರ ಮಾರ್ಚ್ನಲ್ಲಿನಗರಾಭಿವೃದ್ಧಿ ಇಲಾಖೆ, ಸರ್ಕಾರದ ಅಧೀನ ಕಾರ್ಯದರ್ಶಿ ಅಂತಿಮ ಅಧಿಸೂಚನೆ ಪ್ರಕಟಿಸುವ ಅವಧಿಯನ್ನು 2027ರ ಮಾರ್ಚ್ 11ರವರೆಗೆ ವಿಸ್ತರಿಸಿದ್ದರು. ಇದೀಗ 518 ಎಕರೆ ಸ್ವಾಧೀನಕ್ಕೆ ಅಂತಿಮ ಅಧಿಸೂಚನೆ ಹೊರಡಿಸಿದೆ.

ಇತ್ತ ರೈತರ ಹೋರಾಟ ತೀವ್ರ ಸ್ವರೂಪ ಪಡೆಯುತ್ತಿದ್ದ ಬೆನ್ನಲ್ಲೇ ಮತ್ತೊಂದೆಡೆ ಶೀಘ್ರ ಭೂಸ್ವಾಧೀನ ಮಾಡಿಕೊಳ್ಳಿ ಎಂಬ ಒತ್ತಡವೂ ಒಂದಷ್ಟು ಮಂದಿ ರೈತರಿಂದ ಕೇಳಿಬಂದಿತ್ತು. ಜಿಲ್ಲಾಧಿಕಾರಿ ಹಾಗೂ ಡಿಕೆ ಶಿವಕುಮಾರ್‌ ಅವರ ಬಳಿ ತೆರಳಿ ಶೀಘ್ರ ಭೂಸ್ವಾಧೀನ ಪ್ರಕ್ರಿಯೆ ಮುಗಿಸಿ ಪರಿಹಾರ ನೀಡಿ ಎಂದು ಕೋರಿದ್ದರು. ಈ ನಡುವೆ ಮೊದಲ ಹಂತದಲ್ಲಿ ಕೆಂಪಯ್ಯನಪಾಳ್ಯ, ಮಂಡಲಹಳ್ಳಿ, ವಡೇರಹಳ್ಳಿ ಗ್ರಾಮ ವ್ಯಾಪ್ತಿಯ ಭೂಸ್ವಾಧೀನಕ್ಕೆ ಅಂತಿಮ ಅಧಿಸೂಚನೆಯನ್ನು ಜೂನ್‌ 11ರಂದು ಹೊರಡಿಸಲಾಗಿದೆ.

9 ಗ್ರಾಮಗಳ ಸುಮಾರು 7881 ಎಕರೆಗೆ ಪ್ರಾಥಮಿಕ ಅಧಿಸೂಚನೆ
ಕಳೆದ ವರ್ಷ ಬಿಡದಿ ಹೋಬಳಿ ವ್ಯಾಪ್ತಿಯ ಬೈರಮಂಗಲ, ಬನ್ನಿಗಿರಿ, ಹೊಸೂರು, ವಡೇರಹಳ್ಳಿ, ಕಂಚುಗಾರನಹಳ್ಳಿ, ಕೆಂಪಯ್ಯನಪಾಳ್ಯ, ಕೆ.ಜಿ.ಗೊಲ್ಲರಪಾಳ್ಯ, ಮಂಡಲಹಳ್ಳಿ, ಅರಳಾಸುಸಂದ್ರ ಒಟ್ಟು 9 ಗ್ರಾಮಗಳ ಸುಮಾರು 7881 ಎಕರೆಗೆ ಸ್ವಾಧೀನಕ್ಕೆ ಪ್ರತ್ಯೇಕವಾಗಿ 9 ಪ್ರಾಥಮಿಕ ಅಧಿಸೂಚನೆ ಹೊರಡಿಸಲಾಗಿತ್ತು.

ವರ್ಕ್-ಲಿವ್‌-ಪ್ಲೇ ಮಾದರಿಯಲ್ಲಿ ಗ್ರೇಟರ್‌ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ ಅಭಿವೃದ್ಧಿಪಡಿಸಲು ಮೇ 7ರಂದು ಸಚಿವ ಸಂಪುಟ ಅನುಮೋದನೆ ನೀಡಿತ್ತು. ಅಂತಿಮ ಅಧಿಸೂಚನೆಯಲ್ಲಿ ಆಕಾರ್‌ ಬಂದ್‌ ಹಾಗೂ ಪಹಣಿಯಲ್ಲಿ ವ್ಯತ್ಯಾಸವಿದ್ದರೆ ಆಕಾರ್‌ ಬಂದ್‌ ವಿಸ್ತೀರ್ಣವೇ ಅಂತಿಮ ಎಂದು ಪರಿಗಣಿಸಲಾಗಿದೆ. ಸರ್ಕಾರಿ ಸರ್ವೆ ನಂಬರ್‌ಗಳಲ್ಲಿಭೂಮಂಜೂರಾಗಿ ದುರಸ್ತಿಯಾಗಿರದೇ ಇರುವ ಪ್ರಕರಣಗಳಲ್ಲಿಭೂಮಾಲೀಕತ್ವದ ವಿಸ್ತೀರ್ಣದ ನಿರ್ಧರಣೆಯನ್ನು 2012ರ ಸರ್ಕಾರದ ಸುತ್ತೋಲೆಯಂತೆ ನಿರ್ಣಯಿಸಲಾಗಿದ್ದು, ಒಟ್ಟಾರೆ ಮೂರು ಗ್ರಾಮಗಳ 518 ಎಕರೆ ಭೂಸ್ವಾಧೀನಕ್ಕೆ ಅಂತಿಮ ಅಧಿಸೂಚನೆ ಹೊರಡಿಸಲಾಗಿದೆ.

ಪ್ರಮುಖ ಅಂಶಗಳು ಏನು?

  • ಎಕರೆಗೆ 2.07 ರಿಂದ 2.5 ಕೋಟಿ ವರೆಗೆ ಭೂ ಪರಿಹಾರ
  • ಭೂಸ್ವಾಧೀನಪಡಿಸದಿದ್ದಲ್ಲಿ ಶೇ.10ರಷ್ಟು ಪರಿಹಾರ ಕಡಿತ ಸಾಧ್ಯತೆ
  • 6 ಗ್ರಾಮಗಳ ಸುಮಾರು 7 ಸಾವಿರ ಎಕರೆ ಭೂಸ್ವಾಧೀನ ಅಂತಿಮ ಅಧಿಸೂಚನೆ ಬಾಕಿ

ಯಾವ ಗ್ರಾಮದಲ್ಲಿ ಭೂಸ್ವಾಧೀನ ವಿಸ್ತೀರ್ಣ ಎಷ್ಟು?

  • ಮಂಡಲಹಳ್ಳಿ 71.13 ಎಕರೆ
  • ವಡೇರಹಳ್ಳಿ 63.1 ಎಕರೆ 02
  • ಕೆಂಪಯ್ಯನಪಾಳ್ಯ 384.22 ಎಕರೆ

Leave a Reply

Your email address will not be published. Required fields are marked *