BBMP
Loading ...

IPL BMTC

ಬೆಂಗಳೂರು: ಐಪಿಎಲ್‌ 2025ರ ಟೂರ್ನಿಯಲ್ಲಿ ತವರಿನಾಚೆ ಆಡಿತ ಎರಡೂ ಪಂದ್ಯಗಳಲ್ಲಿ ಅಮೋಘ ಪ್ರದರ್ಶನ ನೀಡಿರುವ ಆರ್‌ಸಿಬಿ ಇಂದು ತವರು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮೊದಲ ಪಂದ್ಯವನ್ನಾಡಲಿದೆ. ಬುಧವಾರ ಗುಜರಾತ್‌ ಟೈಟಾನ್ಸ್‌ ವಿರುದ್ಧ ಸೆಣಸಲು ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಸಜ್ಜಾಗಿದೆ. ಹ್ಯಾಟ್ರಿಕ್‌ ಗೆಲುವಿನ ಮೂಲಕ ಪಾಯಿಂಟ್‌ ಪಟ್ಟಿಯಲ್ಲಿ ಮೊದಲ ಸ್ಥಾನವನ್ನು ಭದ್ರಪಡಿಸಿಕೊಳ್ಳುವ ತವಕದಲ್ಲಿ ಆರ್‌ಸಿಬಿ ಇದೆ.

ಇನ್ನೂ ಪಂದ್ಯ ನೋಡಲು ತೆರಳುವವರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ವಿಶೇಷ ಬಸ್ ಸೇವೆ ಒದಗಿಸುವುದಾಗಿ ಘೋಷಣೆ ಬೇಡಿದೆ. ಈಗಾಗಲೇ ನಮ್ಮ ಮೆಟ್ರೋ ಕಾರ್ಯಾಚರಣೆ ಸಮಯವನ್ನು ರಾತ್ರಿ 12:30 ರವರೆಗೆ ವಿಸ್ತರಣೆ ಮಾಡಿದೆ. ಇದೀಗ ಬಿಎಂಟಿಸಿ ಕೂಡ ಟಿಕೆಟ್ ಪ್ರಿಯರಿಗೆ ಶುಭ ಸುದ್ದಿ ನೀಡಿದೆ.

ಐಪಿಎಲ್​ಗೆ ಬಿಎಂಟಿಸಿ ವಿಶೇಷ ಬಸ್: ಎಲ್ಲಿಂದ ಎಲ್ಲಿಗೆ ಸ್ಪೆಷಲ್ ಬಸ್?
* ಎಂ ಚಿನ್ನಸ್ವಾಮಿ ಕ್ರೀಡಾಂಗಣ – ಕಾಡುಗೋಡಿಬಸ್‌ ನಿಲ್ದಾಣ (ಹೆಚ್.ಎ.ಎಲ್‌ರಸ್ತೆ)
* ಚಿನ್ನಸ್ವಾಮಿ ಕ್ರೀಡಾಂಗಣ (ಜಿ-2) – ಸರ್ಜಾಪುರ
* ಚಿನ್ನಸ್ವಾಮಿ ಕ್ರೀಡಾಂಗಣ (ಜಿ-3) – ಎಲೆಕ್ಟ್ರಾನಿಕ್‌ ಸಿಟಿ (ಹೊಸೂರುರಸ್ತೆ)
* ಚಿನ್ನಸ್ವಾಮಿ ಕ್ರೀಡಾಂಗಣ (ಜಿ-4) – ಬನ್ನೇರುಘಟ್ಟ ಮೃಗಾಲಯ.
* ಚಿನ್ನಸ್ವಾಮಿ ಕ್ರೀಡಾಂಗಣ (ಜಿ-7) – ಜನಪ್ರಿಯ ಟೌನ್‌ಷಿಪ್ (ಮಾಗಡಿ ರಸ್ತೆ)
* ಚಿನ್ನಸ್ವಾಮಿ ಕ್ರೀಡಾಂಗಣ (ಜಿ-10) – ಆರ್.ಕೆ. ಹೆಗಡೆ ನಗರ ಯಲಹಂಕ (ನಾಗವಾರ, ಟ್ಯಾನರಿ ರಸ್ತೆ)
* ಚಿನ್ನಸ್ವಾಮಿ ಕ್ರೀಡಾಂಗಣ (317 ಜಿ) – ಹೊಸಕೋಟೆ.
* ಚಿನ್ನಸ್ವಾಮಿ ಕ್ರೀಡಾಂಗಣ (13) – ಬನಶಂಕರಿ.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಯಾವಗೆಲ್ಲ ಇದೆ ಐಪಿಎಲ್ ಮ್ಯಾಚ್?
ಏಪ್ರಿಲ್ 10, 18, 24 ಮತ್ತು ಮೇ 3, 13 ಹಾಗೂ 17 ರಂದು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಐಪಿಎಲ್ ಪಂದ್ಯಗಳು ಆಯೋಜನೆಯಾಗಿವೆ. ಈ ಎಲ್ಲ ದಿನಗಳಲ್ಲಿಯೂ ಬಿಎಂಟಿಸಿ ವಿಶೇಷ ಬಸ್ ಸೇವೆ ಇರಲಿದೆ.

ಅಕ್ಕನ ಮಗಳ ಮದುವೆಗೆ ರಜೆ ಕೊಡ್ಲಿಲ್ಲ ಅಂತ ಮನನೊಂದು ಬಸ್‌ನಲ್ಲೇ ಚಾಲಕ ಆತ್ಮಹತ್ಯೆ

Leave a Reply

Your email address will not be published. Required fields are marked *