ಬೆಂಗಳೂರು: ಬೆಸ್ಕಾಂ ನಿರ್ಲಕ್ಷದಿಂದಾಗಿ ಪವರ್ ಮ್ಯಾನ್ ಒಬ್ಬರು ಸುಟ್ಟ ಗಾಯಗಳಿಂದ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾರೆ.
45 ವರ್ಷದ ಪವರ್ಮ್ಯಾನ್ ಪ್ರಕಾಶ್ ಎಂಬುವರು ಬೆಸ್ಕಾಂನ ಸುಂಕದಕಟ್ಟೆಯ ವಿಭಾಗದಲ್ಲಿ ಜಿಒಎಸ್ ತೆರೆಯಲು ಪ್ರಯತ್ನಿಸುವಾಗ ಆರ್ಕಿಂಗ್ ಸಂಭವಿಸಿದ ಪರಿಣಾಮ ವಿದ್ಯುತ್ ಶಾಕ್ನಿಂದ ಮೈ ತುಂಬಾ ಗಂಭೀರ ಸುಟ್ಟ ಗಾಯಗಳಾಗಿವೆ. ಪರಿಸ್ಥಿತಿ ಗಂಭೀರವಾಗಿದ್ದು, ಪ್ರಕಾಶ್ ಅವರನ್ನು ತಕ್ಷಣ ಕೆಂಗೇರಿಯ ಬಿಜಿಎಸ್ ಆಸ್ಪತ್ರೆಗೆ ದಾಖಲಿಸಲಾಗಿಯಿತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಎಸ್ಟಿ ಜಾನ್ಸ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.
ಈ ಘಟನೆ ಸುಂಕದಕಟ್ಟೆ ವಿಭಾಗದ ನಾಡಕೇರಪ್ಪ ಇಂಡ್ಸ್ ಎಸ್ಟೇಟ್, ಬ್ಯಾಡರಹಳ್ಳಿ MUSSನ ಡ್ರಮ್ ಕಾರ್ಖಾನೆಯ ಹತ್ತಿರ ಇರುವ ಬೈರವೇಶ್ವರ ಕೈಗಾರಿಕಾ ಎಸ್ಟೇಟ್ನಲ್ಲಿ ನಡೆದಿದೆ. ದೂರಿನ ಹಿನ್ನೆಲೆಯಲ್ಲಿ ಟಿಸಿ ನಂಬರ್ 848 ಅನ್ನು ದುರಸ್ತಿ ಮಾಡಲು ಬಂದಿದ್ದರು. ಈ ವೇಳೆ ವಿದ್ಯುತ್ ಶಾಕ್ನಿಂದ ಅವಘಡ ಸಂಭವಿಸಿದೆ.
ಬೆಸ್ಕಾಂ ಅಧಿಕಾರಿಗಳ ನಿರ್ಲಕ್ಷದಿಂದ ಈ ಒಂದು ದುರ್ಘಟನೆ ಸಂಭವಿಸಿದೆ. ದುರಸ್ಥಿ ಮಾಡುವಾಗ ಅನುಸರಿಸಬೇಕಾದ ಮುನ್ನೆಚ್ಛರಿಕಾ ಕ್ರಮಗಳನ್ನು ಅನುಸರಿಸದೇ ಇದ್ದುದ್ದರಿಂದ 11 ಕೆವಿ ಸಾಮರ್ಥ್ಯದ ಟಾನ್ಸ್ಫಾರ್ಮರ್ನಲ್ಲಿ ಸಂಭವಿಸಿದ ವಿದ್ಯುತ್ ಶಾಕ್ನಿಂದ ಮೈತುಂಬಾ ಸುಟ್ಟು ಹೋಗಿದ್ದು, ನೋವಿನಿಂದ ಪ್ರಕಾಶ್ ನರಳಾಡುತ್ತಿದ್ದಾರೆ. ಈ ಸುದ್ದಿ ಕೇಳಿ ಪ್ರಕಾಶ್ ಕುಟುಂಬಸ್ಥರು ಕಣ್ಣೀರಿಡುತ್ತಿದ್ದಾರೆ.
ಬೆಸ್ಕಾಂ ನಿರ್ಲಕ್ಷ್ಯಕ್ಕೆ ಬಸವ ಬಲಿ : ಗ್ರೌಂಡಿಂಗ್ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ನಾಗರೀಕರು


