BBMP
Loading ...

escoms

ಬೆಂಗಳೂರು: ರಾಜ್ಯದ 19 ಜಿಲ್ಲೆಗಳಲ್ಲಿ ವಿದ್ಯುತ್‌ ವಿತರಣೆಯ ಪರವಾನಗಿ ನೀಡುವಂತೆ ಕೋರಿ ದಿ ಟಾಟಾ ಪವರ್‌ ಕಂಪನಿ ಲಿಮಿಟೆಡ್‌, ಕರ್ನಾಟಕ ವಿದ್ಯುತ್‌ ನಿಯಂತ್ರಣ ಆಯೋಗಕ್ಕೆ (ಕೆಇಆರ್‌ಸಿ) ಸಲ್ಲಿಸಿರುವ ಅರ್ಜಿಗೆ ವಿದ್ಯುತ್‌ ಸರಬರಾಜು ಸರಬರಾಜು ಕಂಪನಿಗಳು ಆಕ್ಷೇಪ ವ್ಯಕ್ತಪಡಿಸಿವೆ.

ಪರವಾನಗಿ ನೀಡುವ ಕುರಿತ ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಕೊನೆಯ ದಿನವಾದ ಮಂಗಳವಾರ ಐದೂ ವಿದ್ಯುತ್‌ ಸರಬರಾಜು ಕಂಪನಿಗಳು ಲಿಖಿತವಾಗಿ ತಕರಾರು ಸಲ್ಲಿಸಿವೆ. ಇದರಿಂದಾಗಿ ರೈತರು, ಎಸ್ಕಾಂಗಳ ನೌಕರರು, ವಿವಿಧ ಸಂಘ ಸಂಸ್ಥೆಗಳು ಖಾಸಗಿಕರಣದ ವಿರುದ್ಧ ನಡೆಸುತ್ತಿರುವ ಹೋರಾಟಕ್ಕೆ ಮತ್ತಷ್ಟು ಬಲಬಂದಿದೆ.

ಬೆಸ್ಕಾಂ, ಮೆಸ್ಕಾಂ, ಹೆಸ್ಕಾಂ, ಜೆಸ್ಕಾಂ ಹಾಗೂ ಚೆಸ್ಕಾಂನಿಂದ ಗಂಭೀರವಾದ ಆಕ್ಷೇಪಣೆಗಳನ್ನು ಎತ್ತಿದ್ದು, ‘ವಿದ್ಯುತ್ ಕಾಯ್ದೆ-2003ರಡಿ ಅಗತ್ಯವಿರುವ ಕಾನೂನುಬದ್ಧ ಹಾಗೂ ಸಾರ್ವಜನಿಕ ಹಿತಾಸಕ್ತಿಯ ಮಾನದಂಡಗಳ ಪಾಲನೆ ಬಗ್ಗೆ ಟಾಟಾ ಕಂಪನಿಯವರು ಯಾವುದೇ ಪ್ರಸ್ತಾಪ ಮಾಡಿಲ್ಲ’ ಎಂದು ಹೇಳಿವೆ.

  • ಪ್ರಸ್ತಾವಿತ ಪ್ರದೇಶದಲ್ಲಿ ಸ್ವತಂತ್ರ ವಿದ್ಯುತ್ ವಿತರಣಾ ಜಾಲ ನಿರ್ಮಿಸುವ ಕುರಿತು ಸ್ಪಷ್ಟ ಯೋಜನೆ ಸಲ್ಲಿಸದೇ ಈಗಿನ ವ್ಯವಸ್ಥೆಯಿಂದಲೇ ವಿದ್ಯುತ್ ಸರಬರಾಜು ಮಾಡಲು ಉದ್ದೇಶಿಸಿರುವುದಾಗಿ ಕಂಪನಿ ಹೇಳಿದೆ
  • ಅಲ್ಪಾವಧಿ ವಿದ್ಯುತ್ ಖರೀದಿಯ ಹೆಚ್ಚಿನ ಅವಲಂಬನೆ ಗ್ರಾಹಕರಿಗೆ ಹೆಚ್ಚುವರಿ ವೆಚ್ಚವನ್ನು ಉಂಟುಮಾಡಲಿದೆ
  • ಕೈಗಾರಿಕಾ ಹಾಗೂ ವಾಣಿಜ್ಯ ವಲಯದ ಹೆಚ್ಚಿನ ಆದಾಯ ತರುವ ಗ್ರಾಹಕರನ್ನೇ ಗುರಿಯಾಗಿಸಿಕೊಂಡು ಟಾಟಾ ಸಂಸ್ಥೆ ಸೇವೆ ನೀಡುವ ಸಾಧ್ಯತೆ ಇರುವುದರಿಂದ, ಸಬ್ಸಿಡಿ ಪಡೆಯುವ ಸಾಮಾನ್ಯ ಗ್ರಾಹಕರಿಗೆ ತೊಂದರೆಯಾಗಬಹುದು. ಇದರಿಂದ ಕಂಪನಿಗಳ ಆರ್ಥಿಕ ಸ್ಥಿರತೆಗೆ ಧಕ್ಕೆ ಉಂಟಾಗಬಹುದು
  • ⁠ಗೃಹ, ಕೃಷಿ ಹಾಗೂ ಇತರ ಸಬ್ಸಿಡಿ ಆಧಾರಿತ ಗ್ರಾಹಕರಿಗೆ ನೀಡುತ್ತಿರುವ ಸಬ್ಸಿಡಿ ವ್ಯವಸ್ಥೆ ದುರ್ಬಲಗೊಳ್ಳಲಿದೆ
  • ದೀರ್ಘಾವಧಿಯ ವಿದ್ಯುತ್ ಖರೀದಿ ಒಪ್ಪಂದಗಳು, ಸಾರ್ವಜನಿಕ ಸೇವೆಗಳಿಗೆ ಧಕ್ಕೆಯಾಗಲಿದೆ. ಗ್ರಾಹಕರಿಗೆ ಹಣಕಾಸಿನ ಹೊರೆ ಹೆಚ್ಚಲಿದೆ
  • 2035ರ ನಂತರವೂ ಮುಂದುವರಿಯುವ ದೀರ್ಘಾವಧಿಯ ವಿದ್ಯುತ್ ಖರೀದಿ ಒಪ್ಪಂದವನ್ನು ಬೆಸ್ಕಾಂ ಮಾಡಿಕೊಂಡಿದ್ದು, ವಿದ್ಯುತ್ ಬಳಕೆ ಆಗದಿದ್ದರೂ ನಿಗದಿತ ಸ್ಥಿರ ಶುಲ್ಕಗಳನ್ನು ಪಾವತಿಸಬೇಕಾಗಿದೆ. ಟಿಪಿಸಿಎಲ್‌ಗೆ ಇಂತಹ ಯಾವುದೇ ಹೊಣೆಗಾರಿಕೆ ಇಲ್ಲ
  • ಟಾಟಾ ಕಂಪನಿಯವರು ವ್ಯವಹಾರದ ದೃಷ್ಟಿಯಿಂದ ಹೆಚ್ಚುವರಿ ದರ ಪಾವತಿಸುವ ಗ್ರಾಹಕರನ್ನು ಆಕರ್ಷಿಸುವುದಕ್ಕೆ ಕೇಂದ್ರೀಕೃತವಾಗಿದೆ. ಅದರಿಂದ ಬೆಸ್ಕಾಂನ ಶೇ 80ರಷ್ಟು ಸಬ್ಸಿಡಿ ಪಡೆಯುವ ವರ್ಗದ ಮೇಲೆ ಪರಿಣಾಮ ಬೀರಲಿದೆ

Leave a Reply

Your email address will not be published. Required fields are marked *