ಬೆಂಗಳೂರು: ವಶಕ್ಕೆ ಪಡೆದಿದ್ದ ವಾಹನವನ್ನು ಬಿಡುಗಡೆ ಮಾಡಲು ಲಂಚ ಪಡೆದ ಪೊಲೀಸ್ ಸಿಬ್ಬಂದಿಗೆ ವಿಶೇಷ ನ್ಯಾಯಾಲಯ 4 ವರ್ಷ ಜೈಲು ಹಾಗೂ 1 ಲಕ್ಷ ದಂಡ ವಿಧಿಸಿ ಆದೇಶಿಸಿದೆ.
2017ರಲ್ಲಿ ಪ್ರಕರಣವೊಂದರ ಸಂಬಂಧ ಬೆಂಗಳೂರಿನ ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣವೊಂದರ ಸಂಬಂಧ ವ್ಯಕ್ತಿಯೋರ್ವರನ್ನು ಬಂಧಿಸಲಾಗಿತ್ತು. ಈ ವೇಳೆ ಪೊಲೀಸರು ಅವರ ಬೈಕ್ ಕೂಡ ಜಪ್ತಿ ಮಾಡಿದ್ದರು.
ಪ್ರಕರಣದಲ್ಲಿ ಜಾಮೀನು ಪಡೆದ ನಂತರ ವ್ಯಕ್ತಿ ತಮ್ಮ ಬೈಕ್ ಬಿಡುಗಡೆ ಮಾಡುವಂತೆ ಕೋರಿದ್ದರು. ಈ ವೇಳೆ ಠಾಣೆಯಲ್ಲಿ ಹೆಡ್ ಕಾನ್ಸಟೆಬಲ್ ಆಗಿದ್ದ ಎಂ.ಕೆ ಮಂಜಣ್ಣ ವಾಹನದ ಉಸ್ತುವಾರಿ ನೋಡಿಕೊಳ್ಳುತ್ತಿದ್ದು, ವಾಹನದ ಬಿಡುಗಡೆಗೆ 20 ಸಾವಿರ ಹಣ ಕೇಳಿದ್ದರು.
ತಮ್ಮ ಬೈಕ್ ಬಿಡುಗಡೆ ಮಾಡಲು ಹಣ ಕೇಳಿದ್ದ ಪೊಲೀಸಪ್ಪನ ವಿರುದ್ಧ ಬೈಕ್ ಮಾಲಿಕ ಭ್ರಷ್ಟಾಚಾರ ನಿಗ್ರಹ ದಳಕ್ಕೆ ದೂರು ಸಲ್ಲಿಸಿದ್ದರು. ಆ ಪ್ರಕಾರ ಕಾರ್ಯಾಚರಣೆ ನಡೆಸಿದ್ದ ಭ್ರಷ್ಟಾಚಾರ ನಿಗ್ರಹ ದಳ ಅಧಿಕಾರಿಗಳು ಪೊಲೀಸ್‌ಹೆಡ್ ಕಾನ್ಸ್ಟೇಬಲ್ ಮಂಜಣ್ಣ 10 ಸಾವಿರ ರೂಪಾಯಿಯನ್ನು ಲಂಚವಾಗಿ ಪಡೆಯುವ ವೇಳೆ ದಾಳಿ ನಡೆಸಿ ಬಂಧಿಸಿದ್ದರು. 2018ರಲ್ಲಿ ಆರೋಪಿತ ಪೊಲೀಸ್ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ನಗರದ ವಿಶೇಷ ನ್ಯಾಯಾಲಯ ಹೆಡ್ ಕಾನ್ಸಟೆಬಲ್ ಮಂಜಣ್ಣ ದೋಷಿ ಎಂದು ಘೋಷಿಸಿದೆ. ಜತೆಗೆ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಅಡಿ 4 ವರ್ಷ ಜೈಲು ಶಿಕ್ಷೆ ಹಾಗೂ 1 ಲಕ್ಷ ರೂಪಾಯಿ ದಂಡ ವಿಧಿಸಿ ಆದೇಶಿಸಿದೆ. ಹೆಡ್ ಕಾನ್ಸಟೆಬಲ್ ಮಂಜಣ್ಣ ಪ್ರಸ್ತುತ ಚಿಕ್ಕಜಾಲ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಮಹಾಲಕ್ಷ್ಮಿ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಜಯರಾಮಯ್ಯ ಹುಟ್ಟುಹಬ್ಬ: ಶಾಸಕ ಗೋಪಾಲಯ್ಯ, BBMP News9 ವತಿಯಿಂದ ಶುಭಾಶಯ


