ಬೆಂಗಳೂರು: ಬೆಂಗಳೂರು ಉತ್ತರ ಜಿಲ್ಲಾ ಬಿಜೆಪಿ ಘಟಕದ ಉಪಾಧ್ಯಕ್ಷ ಹಾಗೂ ಮಹಾಲಕ್ಷ್ಮಿ ಎಜುಕೇಶನ್ ಟ್ರಸ್ಟ್ ಅಧ್ಯಕ್ಷರಾದ ಜಯರಾಮಯ್ಯ ಅವರ ಹುಟ್ಟುಹಬ್ಬಕ್ಕೆ ಶಾಸಕ ಕೆ.ಗೋಪಾಲಯ್ಯ ಅವರು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಪಾಲಿಕೆ ಮಾಜಿ ಉಪಮೇಯರ್ ಗಳಾದ ಹೇಮಲತಾ ಗೋಪಾಲಯ್ಯ, ಎಸ್.ಹರೀಶ್ ಪಾಲಿಕೆ, ಮಾಜಿ ಸದಸ್ಯ ರಾಜೇಂದ್ರ ಕುಮಾರ್, ಡಾ.ಮಂಜುನಾಥ್ ಗೌಡ ಮುಖಂಡರಾದ ರೈಲ್ವೆ ನಾರಾಯಣ, ಶಿವಾನಂದ ಮೂರ್ತಿ, ರಾಘವೇಂದ್ರ, ಮಂಜುನಾಥ್, ಕಾರ್ತಿಕ್ ಸೇರಿದಂತೆ ನೂರಾರು ಕಾರ್ಯಕರ್ತರು, ಅಭಿಮಾನಿಗಳು ಪಾಲ್ಗೊಂಡಿದ್ದರು.
ಇದೇ ಸಂದರ್ಭದಲ್ಲಿ ಟ್ರಸ್ಟ್ ವತಿಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ, ವಿಕಲಚೇತನರಿಗೆ ರಗ್ ವಿತರಣೆ ಸೇರಿದಂತೆ ಹಲವು ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.
40 ಅಡಿಗಿಂತ ಕಿರಿದಾದ ರಸ್ತೆಗಳಲ್ಲಿ ಅಂಗಡಿಗಳಿದ್ರೆ ನಿಮ್ಮ ವ್ಯಾಪಾರ ಲೈಸೆನ್ಸ್ ಕ್ಯಾನ್ಸಲ್: ಬಿಬಿಎಂಪಿ ಖಡಕ್ ಸೂಚನೆ


