BBMP
Loading ...

Pay park

Greater Bengaluru news9 : ನಗರದ ಪ್ರತಿಷ್ಠಿತ ಹಾಗೂ ಜನಸಂದಣಿ ಹೆಚ್ಚಿರುವ ಮಲ್ಲೇಶ್ವರಂ ಪ್ರದೇಶದಲ್ಲಿ ಪೇ ಅಂಡ್ ಪಾರ್ಕಿಂಗ್ ವ್ಯವಸ್ಥೆ ಶೀಘ್ರವೇ ಜಾರಿಗೆ ಬರಲಿದೆ. ಈ ಸಂಬಂಧ ಪಶ್ಚಿಮ ನಗರ ಪಾಲಿಕೆ ಪೇ ಅಂಡ್ ಪಾರ್ಕಿಂಗ್ ಆರಂಭಿಸಲು ಟೆಂಡರ್ ಆಹ್ವಾನಿಸಿದೆ.

ಶಾಪಿಂಗ್ ಹಬ್ ಆಗಿರುವ ಮಲ್ಲೇಶ್ವರಂನಲ್ಲಿ ದಿನದಿಂದ ದಿನಕ್ಕೆ ವಾಹನ ಸಂಚಾರ ದಟ್ಟಣೆ ಹೆಚ್ಚಾಗುತ್ತಿದೆ. ರಸ್ತೆಬದಿ ಹಾಗೂ ‘ನೋ ಪಾರ್ಕಿಂಗ್’ ವಲಯಗಳಲ್ಲಿ ಬೇಕಾಬಿಟ್ಟಿ ವಾಹನಗಳನ್ನು ನಿಲ್ಲಿಸುವುದರಿಂದ ಸುಗಮ ಸಂಚಾರಕ್ಕೆ ತೀವ್ರ ಅಡಚಣೆ ಉಂಟಾಗುತ್ತಿದೆ. ಈ ಸಮಸ್ಯೆ ನಿವಾರಣೆಗೆ, ಮಲ್ಲೇಶ್ವರಂನ ಪ್ರಮುಖ ರಸ್ತೆಗಳಲ್ಲಿ ಪೇ ಅಂಡ್ ಪಾರ್ಕಿಂಗ್ ವ್ಯವಸ್ಥೆ ಜಾರಿಗೆ ತರುವ ನಿರ್ಧಾರ ಕೈಗೊಳ್ಳಲಾಗಿದೆ.

ಪೇ ಅಂಡ್ ಪಾರ್ಕಿಂಗ್ ವ್ಯವಸ್ಥೆಯಡಿ, ನಾಲ್ಕು ಚಕ್ರದ ವಾಹನಗಳಿಗೆ ಪ್ರತಿ ಗಂಟೆಗೆ 30 ರೂ. ಹಾಗೂ ದ್ವಿಚಕ್ರ ವಾಹನಗಳಿಗೆ 15 ರೂ. ಶುಲ್ಕವನ್ನು ನಿಗದಿಪಡಿಸಲಾಗಿದೆ. ಇದಲ್ಲದೆ, ದಿನಪೂರ್ತಿ ಪಾರ್ಕಿಂಗ್ ಬಳಸುವವರಿಗೆ ಡೇ ಪಾಸ್ ವ್ಯವಸ್ಥೆ ಜಾರಿಗೆ ತರುವ ಕುರಿತು ಸಹ ಯೋಜನೆ ರೂಪಿಸಲಾಗಿದೆ.

ಪೇ ಅಂಡ್ ಪಾರ್ಕಿಂಗ್ ಜಾರಿಗೆ ಬರುವ ರಸ್ತೆಗಳು

ಸಂಪಿಗೆ ರಸ್ತೆ
ಮಲ್ಲೇಶ್ವರಂ 18ನೇ ರಸ್ತೆ
ಮಲ್ಲೇಶ್ವರಂ 15ನೇ ರಸ್ತೆ
ಮಲ್ಲೇಶ್ವರಂ 11ನೇ ರಸ್ತೆ
ಮಲ್ಲೇಶ್ವರಂ 8ನೇ ರಸ್ತೆ
ಮಲ್ಲೇಶ್ವರಂ 4ನೇ ಮುಖ್ಯ ರಸ್ತೆ
ಮಲ್ಲೇಶ್ವರಂ 2ನೇ ಮುಖ್ಯ ರಸ್ತೆ
ಪ್ರಾರಂಭಿಕ ಹಂತದಲ್ಲಿ ಈ ಏಳು ರಸ್ತೆಗಳಲ್ಲೇ ಪೇ ಅಂಡ್ ಪಾರ್ಕಿಂಗ್ ಜಾರಿಗೆ ಬರಲಿದ್ದು, ಮುಂದಿನ ದಿನಗಳಲ್ಲಿ ಅಗತ್ಯವಿದ್ದರೆ ಇತರೆ ಪ್ರದೇಶಗಳಿಗೂ ವಿಸ್ತರಿಸುವ ಸಾಧ್ಯತೆ ಇದೆ ಎಂದು ಪಾಲಿಕೆ ಮೂಲಗಳು ತಿಳಿಸಿವೆ.

Leave a Reply

Your email address will not be published. Required fields are marked *