BBMP
Loading ...

maxresdefault

Greater Bengaluru news9 : ಡಿಸಿಎಂ ಡಿಕೆ ಶಿವಕುಮಾರ್ ಅವರನ್ನು ಮುಖ್ಯಮಂತ್ರಿ ಮಾಡಿ ನೀಡಬೇಕೆಂದು ನಂಜಾವಧೂತ ಶ್ರೀಗಳು ಆಗ್ರಹ ವ್ಯಕ್ತಪಡಿಸಿದ್ದಾರೆ. ಮಾಧ್ಯಮದೊಂದಿಗೆ ಮಾತನಾಡಿದ ಅವರು, ಡಿಕೆ ಶಿವಕುಮಾರ್ ರಾಜ್ಯದ ಪ್ರಮುಖ ನಾಯಕರು ಮತ್ತು ಕಾಂಗ್ರೆಸ್‌ಗೆ ನೀಡಿದ ಕೊಡುಗೆ ಮರೆಯಲಾಗದದ್ದು ಎಂದರು.

ಡಿಕೆ ಶಿವಕುಮಾರ್‌ ಸಮುದಾಯದ ಅಗ್ರಗಣ್ಯ ನಾಯಕರಾಗಿದ್ದು, ಪಕ್ಷಕ್ಕೆ ಅತ್ಯಂತ ಕಠಿಣ ಪರಿಸ್ಥಿತಿಯಲ್ಲಿ ಸಹ ಬಲ ನೀಡಿದ್ರು ಎಂದು ಶ್ರೀಗಳು ಪ್ರಶಂಸಿಸಿದರು.

“ಬಹಳ ಇಕ್ಕಟ್ಟಿನ ವೇಳೆಯಲ್ಲಿ ಕಾಂಗ್ರೆಸ್ ಅಧ್ಯಕ್ಷ ಸ್ಥಾನವನ್ನು ಸ್ವೀಕರಿಸಿ, ಸಂಕಷ್ಟದಲ್ಲಿದ್ದ ಪಕ್ಷವನ್ನು ಗಟ್ಟಿಗೊಳಿಸಿದರು. ಸೋನಿಯಾ – ರಾಹುಲ್ ಕುಟುಂಬಕ್ಕೆ ಎಂದಿಗೂ ಲಾಯಲ್ ಆಗಿದ್ದರು. ಸಿದ್ದರಾಮಯ್ಯರ ಸಹಯೋಗದ ಮೂಲಕ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತಂದರು” ಎಂದು ನಂಜಾವಧೂತ ಶ್ರೀಗಳು ಹೇಳಿದರು.

“ಅಹಿಂದ ಇರಬಹುದು, ಒಕ್ಕಲಿಗರು ಏನು ಮಾಡಬೇಕು ಎನ್ನುವುದು ಪ್ರಶ್ನೆಯಲ್ಲ. ಎಲ್ಲಾ ವರ್ಗಕ್ಕೂ ಸಲ್ಲುವ ನಾಯಕ ಶಿವಕುಮಾರ್. ಅವರಿಗೆ ಒಂದು ಅವಕಾಶ ಕೊಡಲೇಬೇಕು” ಎಂದು ಒತ್ತಾಯಿಸಿದರು.

“ದೇವರಾಜ ಅರಸು ಎಲ್ಲ ಸಮುದಾಯಗಳನ್ನು ಗುರುತಿಸಿ ಅವಕಾಶ ನೀಡಿದ್ರು. ಆದರೆ ಇಂದಿನ ದಿನಮಾನದಲ್ಲಿ ಯಾರೂ ಸಹಾಯಕ್ಕೆ ಬರುವುದಿಲ್ಲ. ಮೊದಲ ಅವಧಿಯಲ್ಲೇ ಡಿಕೆ ಶಿವಕುಮಾರ್ ಸಿಎಂ ಆಗುತ್ತಾರೆ ಎಂದು ನಾವು ನಂಬಿದ್ದೆವು” ಎಂದು ಹೇಳಿದರು.

Leave a Reply

Your email address will not be published. Required fields are marked *