Greater Bengaluru news9 : ಸಿಎಂ ಸಿದ್ದರಾಮಯ್ಯ ಅಹಿಂದ ಸಮುದಾಯಗಳ ಪ್ರಶ್ನಾತೀತ ನಾಯಕರು. ಹಿಂದುಳಿದ ವರ್ಗಗಳಲ್ಲಿ ಒಕ್ಕಲಿಗರೂ ಬರುತ್ತಾರೆ. ಹೀಗಾಗಿ ನಾನು ಒಕ್ಕಲಿಗ ಸಮುದಾಯಕ್ಕೆ ಮಾತ್ರ ಸೀಮಿತವಾಗಿಲ್ಲ.
ಅಹಿಂದ ವರ್ಗವೂ ನನ್ನ ಜತೆಗಿದೆ ಎಂದು ಹೇಳುವ ಮೂಲಕ ಡಿಸಿಎಂ ಡಿಕೆ ಶಿವಕುಮಾರ್, ಸಿದ್ದರಾಮಯ್ಯ ಅಹಿಂದ ಅಸ್ತ್ರಕ್ಕೆ ಟಕ್ಕರ್ ಕೊಟ್ಟಿದ್ದಾರೆ.
ಕಾಂಗ್ರೆಸ್ ಪಕ್ಷಕ್ಕೆ ದೆಹಲಿ ಅನ್ನೋದು ಟೆಂಪಲ್ ಇದ್ದ ಹಾಗೆ. ದೇವಸ್ಥಾನ ಇದ್ದಲ್ಲಿ ಭಕ್ತರು ಹೋಗಬೇಕಲ್ಲ. ಹಾಗೆ ವರಿಷ್ಠರು ಕರೆದರೆ ಹೋಗೇ ಹೋಗುತ್ತೇನೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ.


