ಮಂಗಳೂರು: ನಾಪತ್ತೆಯಾಗಿದ್ದ ಮಾಜಿ ಶಾಸಕ ಮೊಯ್ದೀನ್ ಬಾವಾ ಸಹೋದರ, ಉದ್ಯಮಿ ಮುಮ್ತಾಝ್ ಅಲಿ ಅವರ ಮೃತದೇಹ ಇಂದು (ಅ.07) ಬೆಳಗ್ಗೆ ಕೂಳೂರು ಸೇತುವೆ ಬಳಿ ನದಿಯಲ್ಲಿ ಪತ್ತೆಯಾಗಿದೆ.
ಬಿ.ಎಂ.ಮುಮ್ತಾಝ್ ಅಲಿ ಅವರು ಭಾನುವಾರ ಬೆಳಗಿನ ಜಾವ ಕೂಳೂರು ಸೇತುವೆ ಬಳಿಯಿಂದ ನಾಪತ್ತೆಯಾಗಿದ್ದರು. ಮುಮಾಝ್ ಅವರ ಬಿಎಂಡಬ್ಲ್ಯು, ಕಾರು ಕೂಳೂರು ಸೇತುವೆ ಮೇಲೆ ಅಪಘಾತ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಸೇತುವೆಯಿಂದ ನದಿಗೆ ಹಾರಿರುವ ಶಂಕೆಯಿಂದ ಎನ್‌ಡಿಆರ್‌ಎಫ್, ಎಸ್‌ಡಿಆರ್ ಎಫ್, ಅಗ್ನಿಶಾಮಕದಳ ಹಾಗೂ ಕೋಸ್ಟ್ ಗಾರ್ಡ್ ತಂಡದ ಸಹಾಯದಿಂದ ಶೋಧ ಕಾರ್ಯ ನಡೆದಿತ್ತು. ಇಂದು ಬೆಳಗ್ಗೆ ಮೃತದೇಹ ಪತ್ತೆಯಾಗಿದೆ.
ಮುಮ್ತಾಝ್ ಅವರು ಭಾನುವಾರ ಬೆಳಗಿನ ಜಾವ 3.30ಕ್ಕೆ ಕುಟುಂಬದ ಸದಸ್ಯರಿರುವ ವಾಟ್ಸ್ಆ್ಯಪ್ ಗ್ರೂಪ್‌ನಲ್ಲಿ ‘ನಾನು ಬದುಕಿ ಉಳಿಯುವುದಿಲ್ಲ, ದೇವರ ಬಳಿಗೆ ಹೋಗುತ್ತೇನೆ’ ಎಂದು ವಾಯ್ಸ್ ಮೆಸೇಜ್ ಹಾಕಿದ್ದರು. 4.40ಕ್ಕೆ ಅವರ ಪುತ್ರಿ ಮೆಸೇಜ್ ಗಮನಿಸಿ ತಂದೆಯನ್ನು ಹುಡುಕಿಕೊಂಡು ಮನೆಯವರೊಂದಿಗೆ ಕಾರಿನಲ್ಲಿ ಹೊರಟು ಕೂಳೂರು ಸೇತುವೆ ಬಳಿ ತಲುಪಿದಾಗ ಮುಮಾಝ್ ಅವರ ಕಾರು ಪತ್ತೆಯಾಯಿತು.
ಮುತ್ತಾಝ್ ಬಳಿ ಎರಡು ಮೊಬೈಲ್‌ಗಳಿತ್ತು. ಒಂದು ಮೊಬೈಲ್ ಕಾರಿನಲ್ಲಿ ಪತ್ತೆಯಾದರೆ ಇನ್ನೊಂದು ಮೊಬೈಲ್ ಸಿಕ್ಕಿಲಿಲ್ಲ. ಅವರು ಧರಿಸಿದ್ದ ಚಪ್ಪಲಿ ಕೂಡ ಕಾರಿನಲ್ಲಾಗಲಿ, ನದಿಯ ನೀರಿನಲ್ಲಾಗಲಿ ಪತ್ತೆಯಾಗಿರಲಿಲ್ಲ. ಸಂಜೆಯ ತನಕ ಹುಡುಕಾಟ ನಡೆಸಿದರೂ ಯಾವುದೇ ಕುರುಹು ಪತ್ತೆಯಾಗಿರಲಿಲ್ಲ. ಇದೀಗ ಮುಳುಗು ತಜ್ಞರು ಮೃತದೇಹವನ್ನು ನದಿಯಲ್ಲಿ ಹುಡುಕಿ ಹೊರತೆಗೆದ್ದು, ಮುಮ್ತಾಝ್ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಯುವತಿ ಕಿರುಕುಳ ಕಾರಣ?: ಮುಮ್ತಾಝ್ ಕಾಟಿಪಳ್ಳ ಕೃಷ್ಣಾಪುರದ ಯುವತಿಯೋರ್ವಳೊಂದಿಗೆ ಆತ್ಮೀಯತೆಯಿಂದಿದ್ದು, ಮದುವೆಯಾಗಬೇಕೆಂದು ಆಕೆ ಹಾಗೂ ಆಕೆಯೊಂದಿಗೆ ಸೇರಿ ಇನ್ನೂ ಕೆಲವರು ಬಲವಂತಪಡಿಸಿ, ಕಿರುಕುಳ ನೀಡುತ್ತಿದ್ದುದರಿಂದ ಬೇಸತ್ತಿದ್ದರು ಎನ್ನಲಾಗಿದೆ. ಈ ಸಂಬಂಧ ಕೆಲವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದು, ಯುವತಿ ಮೊಬೈಲ್ ಸ್ವಿಚ್ ಆಫ್ ಆಗಿದ್ದು, ಆಕೆ ಕೇರಳದಲ್ಲಿ ತಲೆಮರೆಸಿಕೊಂಡಿದ್ದಾಳೆ ಎನ್ನಲಾಗಿದೆ. ಪೊಲೀಸರ ತಂಡ ಆಕೆಯ ಪತ್ತೆಗೆ ಕಾರ್ಯಾಚರಣೆ ನಡೆಸಿದೆ ಎಂದು ಮೂಲಗಳು ತಿಳಿಸಿವೆ.
ರಾಜ್ಯ ಸರ್ಕಾರಿ ನೌಕರರಿಗೆ ಬಿಗ್ ಶಾಕ್: ದೂರುಗಳ ಮೇಲೆ ಕ್ರಮಕ್ಕೆ ಕಾಲಮಿತಿ ನಿಗದಿಗೊಳಿಸಿ ರಾಜ್ಯ ಸರ್ಕಾರ ಆದೇಶ


