BBMP
Loading ...

ಬೆಂಗಳೂರು: ರಿಯಲ್‌ ಎಸ್ಟೇಟ್‌ ಉದ್ಯಮಿಯೊಬ್ಬರ ವಿರುದ್ಧ ದಾಖಲಾಗಿದ್ದ ಕ್ರಿಮಿನಲ್‌ ಪ್ರಕರಣದಲ್ಲಿ ಸಹಕರಿಸಿ ಭೂ ವ್ಯಾಜ್ಯ ಇತ್ಯರ್ಥಪಡಿಸಲು 50 ಲಕ್ಷ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದ ಆರೋಪದ ಉರುಳಿನಲ್ಲಿಇಬ್ಬರು ಪೊಲೀಸ್‌ ಸಬ್‌ ಇನ್ಸ್‌ಪೆಕ್ಟರ್‌ (ಪಿಎಸ್‌ಐ)ಗಳು ಸಿಲುಕಿಕೊಂಡಿದ್ದಾರೆ.

ಈ ಕುರಿತು ರಿಯಲ್‌ ಎಸ್ಟೇಟ್‌ ಉದ್ಯಮಿ ಶಿವಕುಮಾರ್‌ ನೀಡಿದ ದೂರಿನ ಅನ್ವಯ, ಲೋಕಾಯಕ್ತ ಪೊಲೀಸರು ಸುಬ್ರಹ್ಮಣ್ಯಪುರ ಪಿಎಸ್‌ಐ ಭೈರಪ್ಪ, ಕೆಂಗೇರಿ ಠಾಣೆ ಪಿಎಸ್‌ಐ ಮುರಳಿ ಮೋಹನ್‌ ವಿರುದ್ಧ ಭ್ರಷ್ಟಾಚಾರ ನಿಯಂತ್ರಣ ಕಾಯಿದೆ ಅನ್ವಯ ಎಫ್‌ಐಆರ್‌ ದಾಖಲಿಸಿದ್ದಾರೆ. ಜತೆಗೆ, ಇಬ್ಬರು ಆರೋಪಿ ಪಿಎಸ್‌ಐಗಳಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್‌ ನೀಡಲು ಸಿದ್ಧತೆ ನಡೆಸಿದ್ದಾರೆ. ಈ ಬೆನ್ನಲ್ಲೇ ಬಂಧನ ಭೀತಿಯಿಂದ ಪಿಎಸ್‌ಐಗಳು ನಿರೀಕ್ಷಣಾ ಜಾಮೀನು ಕೋರಿ ನ್ಯಾಯಾಲಯದ ಮೊರೆ ಹೋಗಿದ್ದಾರೆ.

ಬಸವನಗುಡಿ ನಿವಾಸಿ ಎಂ.ಪುಟ್ಟಸ್ವಾಮಿ ಎಂಬುವವರಿಗೆ ನಕಲಿ ದಾಖಲೆಗಳನ್ನು ನೀಡಿ ನಿವೇಶನ ಮಾರಾಟ ಮಾಡಿಸಿ ವಂಚಿಸಿದ ಆರೋಪ ಸಂಬಂಧ ಶಿವಕುಮಾರ್‌ ಮತ್ತಿತರರ ವಿರುದ್ಧ 2024ರ ನವೆಂಬರ್‌ನಲ್ಲಿ ಸುಬ್ರಹ್ಮಣ್ಯಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.ತನ್ನ ವಿರುದ್ಧ ದಾಖಲಾಗಿರುವ ಕ್ರಿಮಿನಲ್‌ ಮೊಕದ್ದಮೆಯಿಂದ ಪಾರಾಗಲು ಶಿವಕುಮಾರ್‌, ಪುಟ್ಟಸ್ವಾಮಿಗೆ ಮಾರಾಟ ಮಾಡಿಸಿದ್ದ ನಿವೇಶನ ಕುರಿತಾದ ದಾಖಲೆಗಳನ್ನು ಮುಂದಿಟ್ಟು ತಮಗೆ ಸಹಾಯ ಮಾಡುವಂತೆ ಪ್ರಕರಣದ ತನಿಖಾಧಿಕಾರಿ ಪಿಎಸ್‌ಐ ಭೈರಪ್ಪಗೆ ಮನವಿ ಮಾಡಿದ್ದರು. ಭೈರಪ್ಪ, ತನ್ನ ಸ್ನೇಹಿತ ಕೆಂಗೇರಿ ಠಾಣೆ ಪಿಎಸ್‌ಐ ಮುರಳಿ ಮೋಹನ್‌ರನ್ನು ಭೇಟಿಯಾಗುವಂತೆ ಶಿವಕುಮಾರ್‌ಗೆ ತಿಳಿಸಿದ್ದರು.

‘ಮುರಳಿ ಮೋಹನ್‌ರನ್ನು ಭೇಟಿಯಾಗಿದ್ದ ವೇಳೆ 50 ಲಕ್ಷ ರೂ.ಲಂಚ ನೀಡಿದರೆ ಕೇಸ್‌ನಲ್ಲಿ ಸಹಕಾರ ನೀಡಲಾಗುವುದು’ ಎಂದು ಬೇಡಿಕೆ ಇಟ್ಟಿದ್ದರು. ಈ ವಿಚಾರಕ್ಕೆ ಸಂಬಂಧಿಸಿ ಜೂ.25ರಂದು ವಾಟ್ಸಾಪ್‌ ಕರೆಯಲ್ಲಿ ಮಾತನಾಡಿದ್ದ ಪಿಎಸ್‌ಐ ಭೈರಪ್ಪ 10 ಲಕ್ಷ ರೂ.ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎಂದು ದೂರುದಾರ ಶಿವಕುಮಾರ್‌ ಆರೋಪಿಸಿದ್ದಾರೆ ಎಂದು ಲೋಕಾಯುಕ್ತ ಪೊಲೀಸರು ತಿಳಿಸಿದ್ದಾರೆ.

ಪಿಎಸ್‌ಐಗಳಾದ ಭೈರಪ್ಪ ಹಾಗೂ ಮುರಳಿಮೋಹನ್‌, ಲಂಚಕ್ಕೆ ಬೇಡಿಕೆ ಇಟ್ಟಿರುವ ಕುರಿತಾದ ದೂರವಾಣಿ ಕರೆಗಳ ರೆಕಾರ್ಡಿಂಗ್‌ಗಳನ್ನು ದೂರುದಾರ ಶಿವಕುಮಾರ್‌ ಸಲ್ಲಿಸಿದ್ದಾರೆ. ಕೆಲವು ದಾಖಲೆಗಳನ್ನು ನೀಡಿದ್ದು, ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.

ಲಂಚ ಬೇಡಿಕೆ ಸಂಬಂಧ ಪಿಎಸ್‌ಐಗಳ ವಿರುದ್ಧ ಪ್ರಕರಣ ದಾಖಲಿಸಿ ಟ್ರ್ಯಾಪ್‌ಗೆ ಲೋಕಾಯುಕ್ತ ಪೊಲೀಸರು ಕಾರ್ಯತಂತ್ರ ರೂಪಿಸಿದ್ದರು. ಈ ಮಾಹಿತಿಯು ಪಿಎಸ್‌ಐಗಳಿಗೆ ಸೋರಿಕೆಯಾಗಿದೆ. ಹೀಗಾಗಿ, ಟ್ರ್ಯಾಪ್‌ಗೆ ತೆರಳಿದ್ದ ವೇಳೆ ಪಿಎಸ್‌ಐ ಭೈರಪ್ಪ ದೂರುದಾರನ ಜತೆ ಉಲ್ಟಾ ಮಾತನಾಡಿ ಬಚಾವಾಗಿದ್ದರು. ಟ್ರ್ಯಾಪ್‌ ಮಾಹಿತಿ ಹೇಗೆ ಸೋರಿಕೆಯಾಯಿತು ಎಂಬುದರ ಬಗ್ಗೆ ಆಂತರಿಕ ತನಿಖೆ ನಡೆಯುತ್ತಿದೆ ಎಂದು ಲೋಕಾಯುಕ್ತ ಉನ್ನತ ಮೂಲಗಳು ತಿಳಿಸಿವೆ.

ಕರ್ನಾಟಕ ಲೋಕಾಯುಕ್ತ ಅಧಿಕಾರಿಗಳು ಜು.21ರಂದು ಬೆಳಗ್ಗೆ 11ರಿಂದ ಮಧ್ಯಾಹ್ನ 1.30ಗಂಟೆವರೆಗೆ ಸೇಡಂ ತಹಸಿಲ್‌ ಕಚೇರಿಯಲ್ಲಿಸಾರ್ವಜನಿಕರಿಂದ ಅಹವಾಲು ಸ್ವೀಕರಿಸಲಿದ್ದಾರೆ ಎಂದು ಕಲಬುರಗಿಯ ಕರ್ನಾಟಕ ಲೋಕಾಯುಕ್ತ ಪೊಲೀಸ್‌ ಅಧೀಕ್ಷಕ ಸಿದ್ಧರಾಜು ಸಿ.ಅವರು ತಿಳಿಸಿದ್ದಾರೆ. ಕಲಬುರಗಿ ಕರ್ನಾಟಕ ಲೋಕಾಯುಕ್ತ ಡಿಎಸ್‌ಪಿ ಗೀತಾ ಟಿ.ಬೇನಹಾಳ (ಮೊ.ಸಂಖ್ಯೆ 9364062569) ಹಾಗೂ ಕರ್ನಾಟಕ ಲೋಕಾಯುಕ್ತ ಪೊಲೀಸ್‌ ನಿರೀಕ್ಷಕ ರಾಜಶೇಖರ ಹಳಗೋಧಿ (ಮೊ.ಸಂಖ್ಯೆ 9364062671) ಅವರು ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಲಿದ್ದಾರೆ. ಸರಕಾರಿ ಕಚೇರಿಗಳಲ್ಲಿಸಾರ್ವಜನಿಕರ ಕೆಲಸ ವಿಳಂಬ ಮಾಡುತ್ತಿದ್ದರೆ ಕಾರಣ ಇಲ್ಲದೆ ಅರ್ಜಿ ತಿರಸ್ಕರಿಸುತ್ತಿದ್ದರೆ ಅಥವಾ ಕಚೇರಿಗೆ ಅಲೆದಾಡಿಸುತ್ತಿದ್ದಲ್ಲಿಹಾಗೂ ಸರಕಾರಿ ಕಚೇರಿಗಳಲ್ಲಿಕೆಲಸ ಮಾಡಿಕೊಡಲು ಯಾರಾದರೂ ಲಂಚ ಕೇಳಿದಲ್ಲಿಕಲಬುರಗಿ ಕರ್ನಾಟಕ ಲೋಕಾಯುಕ್ತರ ಗಮನಕ್ಕೆ ತರಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಪೊಲೀಸ್‌ ಅಧೀಕ್ಷಕರು, ಕರ್ನಾಟಕ ಲೋಕಾಯುಕ್ತ ಕಚೇರಿ, ಐವಾನ್‌ ಶಾಹಿ, ಕಾಂಪೌಂಡ್‌, ಕಲಬುರಗಿ-585102 ಕಚೇರಿ ಹಾಗೂ ದೂ.ಸಂಖ್ಯೆ 08472-295364ಗೆ ಸಂಪರ್ಕಿಸಲು ಕೋರಲಾಗಿದೆ.

ಬಿ ಖಾತಾ ಹೊಂದಿರುವ ಹಾಗೂ ಯಾವುದೇ ಖಾತಾ ಹೊಂದಿರದ ಎಲ್ಲರಿಗೂ ಎ ಖಾತಾ ನೀಡಲು ಸರ್ಕಾರ ನಿರ್ಧಾರ

Leave a Reply

Your email address will not be published. Required fields are marked *