BBMP
Loading ...

C Ramesh

ಧಾರವಾಡ: ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದ ಗೌರವ ರಾಜ್ಯಾಧ್ಯಕ್ಷರಾದ ಶ್ರೀ ಸಿ ರಮೇಶ್ ಅವರು ಧಾರವಾಡದ ಎಸ್ ಡಿ ಎಮ್ ಆಸ್ಪತ್ರೆಗೆ ಭೇಟಿ ನೀಡಿ ಕೊಪ್ಪಳ ಜಿಲ್ಲಾ ಸಮಿತಿಯ ಗಿಣಿಗೇರಿ ಗ್ರಾಮದ ಗುತ್ತಿಗೆದಾರರಾದ ಶ್ರೀ ಜಯರಾಮ ಪತ್ತಾರ ಅವರನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿದರು.

ಜಯರಾಮ ಪತ್ತಾರ ಅವರು ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದು ಬೇಗ ಗುಣಮುಖರಾಗಿ ಧೈರ್ಯ ತುಂಬಿ ಆತ್ಮಹತ್ಯೆ ಅಂತಹ ಕೆಟ್ಟ ನಿರ್ಧಾರ ಯಾವತ್ತೂ ತೆಗೆದು ಕೊಳ್ಳಬೇಡಿ ಸಂಘ ಯಾವತ್ತೂ ನಿಮ್ಮ ಜೊತೆ ಇರುತ್ತೆ ಅಂತ ಹೇಳಿ ಆರ್ಥಿಕವಾಗಿ ಹಣದ ರೂಪದಲ್ಲಿ ಸಹಾಯ ಮಾಡಿದರು ಮತ್ತು ಈ ವಿಚಾರವಾಗಿ ಕೊಪ್ಪಳ ಜಿಲ್ಲಾ ಸಮಿತಿ ಪದಾಧಿಕಾರಿಗಳು ಸದಸ್ಯರು ಹಾಗೂ ಪ್ರಕರಣಕ್ಕೆ ಸಂಬಂಧಿಸಿದ (gescom) ಕಂಪನಿಯ ಅಧಿಕಾರಿಗಳನ್ನು ಸಂಪರ್ಕಿಸಿ ಸೂಕ್ತ ವಿಚಾರಣೆ ನಡೆಸಿ ನ್ಯಾಯ ಒದಿಗಿಸುವುದಾಗಿ ಇದೇ ಸಂದರ್ಭದಲ್ಲಿ ಶ್ರೀ ಜಯರಾಮ್ ಕುಟುಂಬದ ಸದಸ್ಯರಿಗೆ ತಿಳಿಸಿದರು. ಅಲ್ಲದೆ, ವೈದ್ಯರನ್ನು ವಿಚಾರಿಸಿ ಸೂಕ್ತ ಚಿಕಿತ್ಸೆನೀಡಿ ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಕೇಂದ್ರ ಸಮಿತಿಯ ಗೌರವ ಸಂಘಟನಾ ಕಾರ್ಯದರ್ಶಿ ಶ್ರೀ ಶಿವಾನಂದ ಬಾಳಪ್ಪನವರ, ಕೇಂದ್ರ ಸಮಿತಿಯ ಚುನಾಯಿತ ಡೈರೆಕ್ಟರ್ ಶ್ರೀ ಮಹಾಬಲೇಶ್ವರ, ಶ್ರೀ ಪ್ರಸ್ಸನ್ನ ತಳವಾರ ಹಾಗೂ ಜೊತೆಗುಡಿಸಿಕೊಂಡ ಕೇಂದ್ರ ಸಮಿತಿ ಡೈರೆಕ್ಟರ ಶ್ರೀ ಮಂಜುನಾಥ ಜಟ್ಟಪ್ಪನವರ, ಧಾರವಾಡ ಜಿಲ್ಲಾ ಅಧ್ಯಕ್ಷ ಶ್ರೀ ಗೋಪಾಲ ಬಲ್ಲರವಾಡ, ಧಾರವಾಡ ತಾಲೂಕು ಸಮಿತಿ ಅಧ್ಯಕ್ಷ ಶ್ರೀ ಮೆಹಬೂಬ್ ಮುಲ್ಲಾನವರ, ಹುಬ್ಬಳ್ಳಿ ತಾಲೂಕು ಸಮಿತಿ ಉಪಾಧ್ಯಕ್ಷ ಶ್ರೀ ಏನ್ ಎಚ್ ಬರದೂರ್ ಶ್ರೀ ನಜಿರ ಅಹಮದ, ರೆಹಮಾನ್ ಮುಂಡಾಸ್ಗರ, ಶ್ರೀ ಅಬ್ದುಲ ಮುನಾಫ್, ದೇವಗಿರಿ ಶ್ರೀ ಶಂಕರ್ ಪೂಜಾರ್, ಶ್ರೀ ಜಗದೀಶ್ ಭೋವಿ ಇನ್ನು ಅನೇಕ ಧಾರವಾಡ ಜಿಲ್ಲಾ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.

ಬೆಂಗಳೂರಿನ ಈ ಏರಿಯಾದ ಠಾಣೆಗಳಿಗೆ ಇನ್ಸ್‌ಪೆಕ್ಟರ್​ಗಳೇ ಇಲ್ಲ! ಗೃಹ ಸಚಿವರೇ ಕ್ರಮ ಯಾವಾಗ!?

Leave a Reply

Your email address will not be published. Required fields are marked *