BBMP
Loading ...

th-28

 ಬೆಂಗಳೂರು:- ಬೆಂಗಳೂರಿನ ಸೋಲದೇವನಹಳ್ಳಿ ಹಾಗೂ ಗಂಗಮ್ಮನಗುಡಿ ಪೊಲೀಸ್ ಠಾಣೆಗಳಿಗೆ ಇನ್ಸ್‌ಪೆಕ್ಟರ್​ಗಳೇ ಇಲ್ಲ

ಇನ್ಸ್‌ಪೆಕ್ಟರ್ ಸಿದ್ದೇಗೌಡ ನಿವೃತ್ತಿ ಬಳಿಕ 6 ತಿಂಗಳಿಂದ ಗಂಗಮ್ಮನಗುಡಿ ಠಾಣೆಗೆ ಇನ್ಸ್‌ಪೆಕ್ಟರ್ ನೇಮಕವಾಗಿಲ್ಲ. ಇನ್ನು ಸೋಲದೇವನಹಳ್ಳಿ ಇನ್ಸ್‌ಪೆಕ್ಟರ್‌ ಹರಿಯಪ್ಪ ನಿವೃತ್ತಿಯಾಗಿದ್ದು, ಈ ಹುದ್ದೆ 3 ತಿಂಗಳಿನಿಂದ ಖಾಲಿ ಇದೆ. ಈ ಎರಡು ಠಾಣಾ ವ್ಯಾಪ್ತಿಗಳಲ್ಲಿ ಡ್ರಗ್ಸ್​ ಪ್ರಕರಣಗಳು ಹೆಚ್ಚು. ಆದರೂ ಸಹ ಗೃಹ ಇಲಾಖೆ ಇದುವರೆಗೂ ಇನ್ಸ್​ಪೆಕ್ಟರ್​ಗಳನ್ನು ನಿಯೋಜನೆ ಮಾಡಿಲ್ಲ.

ಆಸ್ತಿ ಕಲಹ ಸೇರಿದಂತೆ ಇತರೆ ಪ್ರಕರಣಗಳು ಈ ಠಾಣೆಗಳಿಗೆ ಬರುತ್ತವೆ. ಆದ್ರೆ, ಈ ಠಾಣೆಗಳ ಸಿಬ್ಬಂದಿ, ದೂರು ನೀಡಲು ಹೋದವರಿಗೆ ಇನ್ಸ್​ಪೆಕ್ಟರ್​ ಇಲ್ಲ ಎನ್ನುವ ಉಡಾಫೆ ಉತ್ತರ ನೀಡಿ ಕಳುಹಿಸುತ್ತಿದ್ದಾರೆ ಎನ್ನುವ ಆರೋಪಗಳು ಸಹ ಕೇಳಿಬರುತ್ತಿವೆ.

Leave a Reply

Your email address will not be published. Required fields are marked *