BBMP
Loading ...

bescom

Greater Bengaluru News9 : ಬಿಡಿದಿ ಪಟ್ಟಣದ ಬೆಸ್ಕಾಂ ಇಲಾಖೆಯ ಸಹಾಯಕ ಇಂಜಿನಿಯರ್ ಪ್ರಕಾಶ್​ ಮಾಡುತ್ತಿರುವ ಭ್ರಷ್ಟಾಚಾರದ ವಿರುದ್ಧ ಕರ್ನಾಟಕ ರಾಜ್ಯ ಅನುಮತಿ ಪಡೆದ ಗುತ್ತಿಗೆದಾರರ ಸಂಘ ಹಾಗೂ ಬಿಬಿಎಂಪಿ ನ್ಯೂಸ್​9 ಧ್ವನಿ ಎತ್ತಿದ ಕೂಡಲೇ ಎಚ್ಚೆತ್ತುಕೊಂಡ ಬೆಸ್ಕಾಂ ಆಡಳಿತ ಮಂಡಳಿ, ಪ್ರಕಾಶ್​ ಅವರನ್ನು ವರ್ಗಾವಣೆ ಮಾಡಿದೆ.

ಪ್ರಕಾಶ್​ ಅವರನ್ನು ಬಿಡದಿಯಿಂದ ಎಡಿಯೂರಿಗೆ ವರ್ಗಾವಣೆ ಮಾಡಲಾಗಿದೆ. ಪ್ರಕಾಶ್​ ಎಸಗುತ್ತಿದ್ದ ಅಕ್ರಮಗಳ ವಿರುದ್ಧ ಸಂಘದ ರಾಜ್ಯಾಧ್ಯಕ್ಷರಾದ ಸಿ. ರಮೇಶ್​ ಹಾಗೂ ಜಿಲ್ಲಾಧ್ಯಕ್ಷರಾದ ಕೆ. ವೆಂಕಟೇಶ್, ಬಿಡದಿ ಸಮತಿಯ ಪದಾಧಿಕಾರಿಗಳು ಮತ್ತು ಸಂಘದ ಎಲ್ಲ ಸದಸ್ಯರುಗಳು​ ಧ್ವನಿ ಎತ್ತಿದ್ದರು. ಅದರ ಪರಿಣಾಮ ಪ್ರಕಾಶ್​ ಎತ್ತಂಗಡಿಯಾಗಿದ್ದಾರೆ.

ಇತ್ತೀಚೆಗೆ ಪಟ್ಟಣದ ಖಾಸಗಿ ಹೋಟೆಲ್‌ನಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಸಂಘದ ಜಿಲ್ಲಾಧ್ಯಕ್ಷ ಕೆ.ವೆಂಕಟೇಶ್ ಮಾತನಾಡಿ, ಒಬ್ಬ ಸರ್ಕಾರಿ ಅಧಿಕಾರಿ ಎರಡು ಅಥವಾ ಎರಡೂವರೆ ವರ್ಷ ಒಂದು ಸ್ಥಳದಲ್ಲಿ ಅಧಿಕಾರ ಪೂರೈಸಿದ ಬಳಿಕ ಅವರನ್ನು ವರ್ಗಾಯಿಸಬೇಕು. ಆದರೆ ಎಇ ಪ್ರಕಾಶ್ 8 ವರ್ಷಗಳಿಂದ ಒಂದೇ ಸ್ಥಳದಲ್ಲಿದ್ದಾರೆ. ಕಚೇರಿಗೆ ಬರುವ ರೈತರ ಮೇಲೂ ದರ್ಪ ತೋರುತ್ತಾರೆ. ಅವರನ್ನು ವರ್ಗಾಯಿಸುವಂತೆ ಈಗಾಗಲೇ ಶಾಸಕ ಬಾಲಕೃಷ್ಣ, ಮಾಜಿ ಶಾಸಕ ಎ.ಮಂಜುನಾಥ್ ಅವರು ಪತ್ರ ಬರೆದಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಇಂಧನ ಇಲಾಖೆ ಸಚಿವರು ಹಾಗೂ ಮುಖ್ಯಮಂತ್ರಿಗಳು ಸಹ ವರ್ಗಾವಣೆಗೆ ಶಿಫಾರಸ್ಸು ಮಾಡಿದ್ದರೂ ಬೆಸ್ಕಾಂನ ಉನ್ನತ ಅಧಿಕಾರಿಗಳ ಕೃಪೆಯಿಂದ ಪ್ರಕಾಶ ಇಲ್ಲಿಯೇ ಮುಂದುವರೆದಿದ್ದಾರೆ. ಕೂಡಲೇ ಪ್ರಕಾಶ ಅವರನ್ನು ಬೇರೆಡೆ ವರ್ಗಾಯಿಸದಿದ್ದರೆ ರೈತರು ಹಾಗೂ ಸಂಘದ ಪದಾಧಿಕಾರಿಗಳು ಪ್ರತಿಭಟಿಸಲಿದ್ದಾರೆ ಎಂದು ಎಚ್ಚರಿಸಿದ್ದರು.

ಎಚ್ಚರಿಕೆಗೆ ಬಗ್ಗಿದ ಬೆಸ್ಕಾಂ ಆಡಳಿತ ಮಂಡಳಿ ಪ್ರಕಾಶ್​ ಅವರನ್ನು ಬಿಡದಿಯಿಂದ ಎಡಿಯೂರಿಗೆ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.

ಪರಿಹಾರವೂ, ಸಾಂತ್ವನವೂ ಇಲ್ಲ: ಚನ್ನಪಟ್ಟಣ ಮೂಲದ
ಗುತ್ತಿಗೆ ನೌಕರ ರಜೆಯಲ್ಲಿದ್ದರೂ ಕೆಲಸಕ್ಕೆ ಕರೆಸಿಸಿಕೊಂಡು ಬಲವಂತದಿಂದ ವಿದ್ಯುತ್ ಕಂಬ ಏರಿಸಿದ್ದರು. ಆತ ಆಯತಪ್ಪಿ ಬಿದ್ದು ಗಂಭೀರ ಗಾಯವಾಗಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ. ಆದರೂ ಗುತ್ತಿಗೆ ನೌಕರನ ಕುಟುಂಬಕ್ಕೆ ಪರಿಹಾರ ಕೊಡಿಸದೆ, ಮೃತರ ಕುಟುಂಬದವರಿಗೆ ಸಾಂತ್ವನವನ್ನೂ ಎಇ ಪ್ರಕಾಶ್ ಹೇಳಲಿಲ್ಲ ಎಂದು ಗುತ್ತಿಗೆದಾರರ ಸಂಘದ ಪದಾಧಿಕಾರಿಗಳು ಅಸಮಾಧಾನ ವ್ಯಕ್ತಪಡಿಸಿದರು.

Leave a Reply

Your email address will not be published. Required fields are marked *