BBMP
Loading ...

Protest

ಕೊಪ್ಪಳ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕೊಪ್ಪಳದ ಕರ್ನಾಟಕ ರಾಜ್ಯ ಕಟ್ಟಡ ನಿರ್ಮಾಣ ಮತ್ತು ಅಸಂಘಟಿತ ಕಾರ್ಮಿಕರ ಒಕ್ಕೂಟ ಮಂಗಳವಾರ (ಜುಲೈ 15) ಬೃಹತ್​ ಪ್ರತಿಭಟನೆಯನ್ನು ನಡೆಸಿತು.

ಕಾರ್ಮಿಕರ ಬೇಡಿಕೆಗಳೇನು?
01. ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ಹೊಸದಾಗಿ ಜಾರಿಗೊಳಿಸಿರುವ ಕುಟುಂಬ ಐ.ಡಿ ಅಪ್ಲಿಕೇಷನ್ ಅನ್ನು ರದ್ದುಗೊಳಿಸಬೇಕು.
02. ನೈಜ ಕಾರ್ಮಿಕರ ವಿವಿಧ ಸೌಲಭ್ಯಗಳ ಅರ್ಜಿಗಳನ್ನು ಸಕಾರಣ ವಿಲ್ಲದೇ ತಿರಸ್ಕರಿಸುವುದು ನಿಲ್ಲಬೇಕು.
03. ಸೇವಾ ಸಿಂಧುವಿನಲ್ಲಿ ಸಲ್ಲಿಸಿದ ಅರ್ಜಿಗಳ ಮಂಜೂರಾತಿಯಾದ ಫಲಾನುಭವಿಗಳಿಗೆ ಹರಿಗೆ ಮತ್ತು ಮದುವೆ ಸಹಾಯಧನದ ಬಾಂಡ್‌ಗಳನ್ನು ಇಲ್ಲಿಯವರೆಗೂ ನೀಡಿರುವುದಿಲ್ಲ.
04. 2024 ರಿಂದ ಇಲ್ಲಿಯವರೆಗೆ ಮಂಜೂರಾದ ಕೆಲವು ವಿವಿಧ ರೀತಿಯ ಸೌಲಭ್ಯಗಳಿಗೆ ಸಲ್ಲಿಸಿದ ಅರ್ಜಿಗಳಿಗೆ ಇಲ್ಲಿಯವರೆಗೂ ಹಾ ಜಮಾ ಆಗಿರುವುದಿಲ್ಲ.
05. ಕಾರ್ಮಿಕರ ಕಾರ್ಡ ನವೀಕರಣವನ್ನು ಮೂರು ವರ್ಸೆಕ್ಕೆ ನವೀಕರಣ ಮಾಡಲು ಕೂಡಲೇ ಆದೇಶಿಸಬೇಕು.
06. ಕಟ್ಟಡ ಕಾರ್ಮಿಕರಿಗೆ ನೀಡುತ್ತಿರುವ ಮದುವೆ ಸಹಾಯಧನವನ್ನು ರೂ.60,000 /- ಇದ್ದು ಇದನ್ನು ರೂ.1,00,000/-ಹೆಚ್ಚಿಸಬೇಕು.
07. ಹೊರ ರಾಜ್ಯದ ವಲಸೆ ಕಾರ್ಮಿಕರಿಗೆ ನೀಡುತ್ತಿರುವ ಶ್ರಮಿಕ ತಾತ್ಕಾಲಿಕ ವಸತಿ ಸಮುಚ್ಚಯಗಳ ಬದಲಾಗಿ ರಾಜ್ಯದ ಶ್ರಮಿಕರಿಗೆ ನಿವೇಶನ ರಹಿತ ಕಟ್ಟಡ ಕಾರ್ಮಿಕರಿಗೆ ಆಶ್ರಯ ಲೇಔಟ್ ಗಳನ್ನು ನಿರ್ಮಿಸಿ ನಿವೇಶನಗಳಿಗೆ ಹಂಚಿಕೆ ಮಾಡಬೇಕು.
08. ಖಾಸಗಿ ಏಜೆನ್ಸಿಗಳಿಗೆ ಆರೋಗ್ಯ ತಪಾಸಣಾ ಶಿಬಿರಕ್ಕೆ ವೆಚ್ಚ ಮಾಡುವ ಬದಲು ಕಟ್ಟಡ ಕಾರ್ಮಿಕರಿಗೆ ಸೌಲಭ್ಯವನ್ನು ಕಲ್ಪಸಬೇಕು.
09. ನೋಂದಾಯಿತ ಕಟ್ಟಡ ಇತರೆ ಕಾರ್ಮಿಕರಿಗೆ ನೀಡಲಾಗುವ ಎಲ್ಲಾ ರೀತಿಯ ಟೂಲ್ ಕಿಟಗಳನ್ನು ನೀಡುತ್ತಿರುವುದನ್ನು ಕೂಡಲೇ ರದ್ದುಗೊಳಿಸಬೇಕು.
10. ಕಳೆದ 4 ವರ್ಷಗಳಿಂದ ಶೈಕ್ಷಣಿಕ ಸಹಾಯಧನವನ್ನು ಮಂಡಳಿಯು ಸರಿಯಾಗಿ ನೀಡುತ್ತಿಲ್ಲ. ಮತ್ತು ಕಡಿತ ಮಾಡಿರುವ ಶೈಕ್ಷಣಿಕ ಸಹಾಯಧನದ ಆದೇಶ ವಾಪಸ್ ಪಡೆಯಬೇಕು. ಹಾಗೂ 2021 ಹೈಕೋರ್ಟ್ ಆದೇಶ ಅಧಿಸೂಚನೆ ಅನ್ವಯ ಮೇರೆಗೆ ಶೈಕ್ಷಣಿಕ ಧನಸಹಾಯ ಬಿಡುಗಡೆ ಮಾಡಬೇಕು.
11. ಪಿಂಚಣಿದಾರರಿಗೆ ಶೀಘ್ರವೆ ಅವರ ಪಿಂಚಣಿ ಹಣವನ್ನು ಬಿಡುಗಡೆ ಮಾಡಬೇಕು ಮತ್ತು ಪ್ರತಿ ತಿಂಗಳು 10 ನೇ ತಾರೀಖಿನ ಒಳಗಾಗಿ ಕಟ್ಟಡ ಕಾರ್ಮಿಕರಿಗೆ ಪಿಂಚಣಿ ಹಣವನ್ನು ಬಿಡುಗಡೆ ಮಾಡಬೇಕು, ಪಿಂಚಣೆಯನ್ನು 40 ರ್ವಕ್ಕೆ ಇರುವ ನಿಯಮವನ್ನು ಕಡಿತಗೊಳಿಸಿ ಕಾರ್ಮಿಕರಿಗೆ 50 ವರ್ಭಕ್ಕೆ ಪಿಂಚಣೆ ನೀಡಬೇಕು.
12. ಹೆರಿಗೆ ಧನ ಸಹಾಯವನ್ನು ಬಾಂಡ್ ರೂಪದಲ್ಲಿ ನೀಡುತ್ತಿದ್ದು ಅದನ್ನು ಹಣದ ರೂಪದಲ್ಲಿ ನೀಡಬೇಕು, ಹೆರಿಗೆ ನಂತರ ಕಾರ್ಮಿಕರಿಗೆ ಕೆಲಸಕ್ಕೆ ಹೋಗಲು ಸುಮಾರು 4 ರಿಂದ 5 ತಿಂಗಳು ಆ ಸಮಯದಲ್ಲಿ ಕೆಲಸಕ್ಕೆ ಹೋಗುವುದಿಲ್ಲ ಅವರಿಗೆ ಹಣದ ಅವಶ್ಯಕತೆ ತುಂಬಾ ಇರುತ್ತದೆ ಅವರಿಗೆ ಹಣದ ರೂಪದಲ್ಲಿ ನೀಡಬೇಕು.

13. ಕಟ್ಟಡ ಕಾರ್ಮಿಕರ ಮೆಡಿಕಲ್ ಸಹಾಯಧನವು ಕಾರ್ಮಿಕರ ಕಾರ್ಡ್ ಇದ್ದವರಿಗೆ ಕಟ್ಟಡ ಕಾರ್ಮಿಕರ ಮೆಡಿಕಲ್ ಸಹಾಯಧನದ ಬದಲಾಗಿ ಸರ್ಕಾರಿ ಹಾಗೂ ಮಲ್ಟಿ ಸ್ಪೆಷಾಲಿಟಿ ಮತ್ತು ಎಲ್ಲ ರೀತಿಯ ಆಸ್ಪತ್ರೆಗಳಲ್ಲಿ ನಗದು ರಹಿತ ಚಿಕಿತ್ಸೆ ಮಾಡಲು ಕ್ರಮಕೈಕೊಳ್ಳಲು ವಿನಂತಿ.

14. ಕಟ್ಟಡ ಕಾರ್ಮಿಕರಿಗೆ ಅಪಘಾತ ಪರಿಹಾರ ಧನ ಸೌಲಭ್ಯವನ್ನು ಪಡೆಯಲು ಒಂದು ವರ್ಷ ಕಳೆದರೂ ಇಲ್ಲಿಯವರೆಗೆ ಪರಿಹಾರ ಧನ ಸಿಕ್ಕಿರುವುದಿಲ್ಲ. ಮತ್ತು ಉನ್ನತ ಮಟ್ಟದ ಅಧಿಕಾರಿಗಳು ದಿನಕ್ಕೊಂದು ನಿಯಮವನ್ನು ಕರುವುದರಿಂದ ಕಟ್ಟಡ ಕಾರ್ಮಿಕರಿಗೆ ತೊಂದರೆ ಉಂಟು ಮಾಡುತ್ತಿದ್ದಾರೆ.
15. 2024-25ನೇ ಸಾಲಿನಲ್ಲಿ ರಾಜ್ಯಾದ್ಯಂತ ನೋಂದಾಯಿತ ಕಟ್ಟಡ ಕಾರ್ಮಿಕರಿಗೆ ಸಂಚಾರಿ ಆರೋಗ್ಯ ತಪಾಸಣೆಗೆ ರಾಜ್ಯಾದ್ಯಂತ 100 ಬಸ್​​ಗಳು ಕಾರ್ಯನಿರ್ವಹಿಸುತ್ತಿದ್ದು, ಇದರಿಂದ ನೋಂದಾಯಿತ ಕಟ್ಟಡ ಕಾರ್ಮಿಕರಿಗೆ ಯಾವುದೇ ರೀತಿಯ ಉಪಯೋಗವಾಗಿರುವುದಿಲ್ಲ. ಆದ್ದರಿಂದ ಈ ಕಾರ್ಯಕ್ರಮವನ್ನು ರದ್ದುಪಡಿಸಿ ಅನುದಾನವನ್ನು ಕಾರ್ಮಿಕರ ಕಲ್ಯಾಣಕ್ಕಾಗಿ ಬಳಕೆಯಾಗುವಂತೆ ಕ್ರಮಕೈಗೊಳ್ಳಬೇಕು.

16. ಕಟ್ಟಡ ಕಾರ್ಮಿಕರ ಮಕ್ಕಳ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ನೀಡಲು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾನಾ ಮಂಡಳಿಯ ವತಿಯಿಂದ ರಾಜ್ಯದ 31 ಜಿಲ್ಲೆಗಳಲ್ಲಿ 6 ನೇ ತರಗತಿಯಿಂದ 12ನೇ ತರಗತಿಯಲ್ಲಿ ಓದುತ್ತಿರುವ ಮಂಡಲಿಯ ಫಲಾನುಭವಿಗಳ ಮಕ್ಕಳಿಗಾಗಿ ಒಟ್ಟು 31 ವಸತಿ ಶಾಲಾ ಕಟ್ಟಡ ಸಮುಚ್ಚಯಗಳನ್ನು ನಿರ್ಮಿಸಲು ಹಾಗೂ ಸದರಿ ವಸಸಿ ಶಾಲೆಗಳ ನಿರ್ಮಾಣಕ್ಕಾಗಿ ಒಟ್ಟು ರೂ. 1125.25 ಕೋಟಿಗಳ ವೆಚ್ಚವನ್ನು ಸುಂಕ ನಿಧಿಯಿಂದ ಭರಿಸಲು ಸಚಿವ ಸಂಪುಟ ನಿರ್ಣಾಯಿಸಿದ ಆದೇಶವನ್ನು ರದ್ದುಪಡಿಸಿ. ಈಗಾಗಲೇ ಹಲವಾರು ವಸತಿ ಶಾಲೆಗಳು ಕಾರ್ಯನಿರ್ವಹಿಸುತ್ತಿದ್ದು ಆ ವಸತಿ ಶಾಲೆಗಳಲ್ಲಿ ಕಟ್ಟಡ ಕಾರ್ಮಿಕರ ಮಕ್ಕಳಿಗೆ ಇಂತಿಷ್ಟು ಮೀಸಲಾತಿ ನೀಡಬೇಕು.

ಈ ಕ್ರಮಗಳನ್ನು ಆದಷ್ಟು ಬೇಗ ಕೈಗೊಳ್ಳಬೇಕೆಂದು ಕೊಪ್ಪಳದ ಕಾರ್ಮಿಕರ ಒಕ್ಕೂಟವೂ ನಿನ್ನೆ ಬೃಹತ್​ ಪ್ರತಿಭಟನೆಯಲ್ಲಿ ಒತ್ತಾಯಿಸಿವೆ. ಸಿಎಂ ಸಿದ್ದರಾಮಯ್ಯ, ಕಾರ್ಮಿಕ ಸಚಿವ ಸಂತೋಷ್​ ಲಾಡ್​ ಅವರಿಗೆ ಬೇಡಿಕೆಗಳ ಈಡೇರಿಕೆಗೆ ಮನವಿ ಮಾಡಿದ್ದಾರೆ.

ಡಿಜಿಟಲ್ ಅರೆಸ್ಟ್ ಎಂದು ಬೆದರಿಸಿ ಲಕ್ಷ ಲಕ್ಷ ಹಣ ವಸೂಲಿ: ಡೆತ್‌ನೋಟ್ ಬರೆದಿಟ್ಟು ಬೆಸ್ಕಾಂ ಸಿಬ್ಬಂದಿ ಸಾವಿಗೆ ಶರಣು

Leave a Reply

Your email address will not be published. Required fields are marked *