BBMP
Loading ...

Kichcha sudeepa

ಬೆಂಗಳೂರು: ಕನ್ನಡ ಚಿತ್ರರಂಗದ ಧ್ರುವತಾರೆ, ಸ್ಟೈಲ್​ ಐಕಾನ್​, ಅಭಿನಯ ಚಕ್ರವರ್ತಿ ಹಾಗೂ ಎಲ್ಲರ ನೆಚ್ಚಿನ ಬಾದ್​ಷಾ ಕಿಚ್ಚ ಸುದೀಪ್​ ಇಂದು (ಸೆ.02) 51ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಮಾಮೂಲಿಯಂತೆಯೇ ಹುಟ್ಟುಹಬ್ಬದ ದಿನ ಅಭಿಮಾನಿಗಳಿಗೆ ಸಿನಿಮಾಗಳ ಅಪ್​ಡೇಟ್​ನೊಂದಿಗೆ ಭರ್ಜರಿ ಉಡುಗೊರೆ ನೀಡಿದ್ದಾರೆ.

ಪ್ರತಿಬಾರಿ ಮನೆಯ ಮುಂದೆ ಸುದೀಪ್​ ಸರಳವಾಗಿ ಹುಟ್ಟುಹಬ್ಬ ಆಚರಣೆ ಮಾಡಿಕೊಳ್ಳುತ್ತಿದ್ದರು. ಹಾರ-ತುರಾಯಿ, ಕೇಕ್​ ಮತ್ತು ಗಿಫ್ಟ್​ ಸೇರಿದಂತೆ ಯಾವುದನ್ನು ತೆಗೆದುಕೊಂಡು ಬರಬೇಡಿ, ಅದೇ ಹಣದಲ್ಲಿ ನಿರಾಶ್ರಿತರಿಗೆ ಏನಾದರೂ ಸಹಾಯ ಮಾಡಿ ಎಂದು ಕೋರಿದ್ದರು. ಮೊನ್ನೆಯಷ್ಟೇ ಪತ್ರಿಕಾಗೋಷ್ಠಿ ಕರೆದಿದ್ದ ಕಿಚ್ಚ ಈ ಬಾರಿಯು ಇದೇ ಮನವಿಯನ್ನು ಮಾಡಿದ್ದರು. ಆದರೂ ಅಭಿಮಾನಿಗಳು ಜೆಪಿ ನಗರದಲ್ಲಿರುವ ಕಿಚ್ಚನ ಮನೆಯ ಮುಂದೆ ರಾತ್ರಿಯೇ ಜಮಾಯಿಸಿದ್ದರು. ಅಭಿಮಾನಿಗಳಿಗೆ ನಿರಾಸೆ ಮಾಡಬಾರದು ಅಂತ ಮನೆಯಿಂದ ಹೊರಬಂದು ಅಭಿಮಾನಿಗಳನ್ನು ಸಂತೈಸಿದರು.

51ನೇ ವಸಂತಕ್ಕೆ ಕಾಲಿಟ್ಟ ಕಿಚ್ಚ ಮಧ್ಯರಾತ್ರಿ ತಮ್ಮ ಪತ್ನಿ ಪ್ರಿಯಾ ಸುದೀಪ್​, ಪುತ್ರಿ ಸಾನ್ವಿ ಹಾಗೂ ಕುಟುಂಬಸ್ಥರ ಸಮ್ಮುಖದಲ್ಲಿ ಕೇಕ್​ ಕತ್ತರಿಸಿ ಹುಟ್ಟುಹಬ್ಬ ಆಚರಿಸಿಕೊಂಡರು. ಚಿತ್ರರಂಗದ ಕೆಲ ಕಲಾವಿದರು ಕೂಡ ಈ ಸಂಭ್ರಮಕ್ಕೆ ಸಾಕ್ಷಿಯಾದರು. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದ್ದು, ಕಿಚ್ಚನಿಗೆ ಹುಟ್ಟುಹಬ್ಬದ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ.

ಇಂದು ಬೆಳಗ್ಗೆ 10 ಗಂಟೆಯಿಂದ ಸುಮಾರು ಮೂರ್ನಾಲ್ಕು ಗಂಟೆಗಳ ಕಾಲ ಕಿಚ್ಚ ಸುದೀಪ್​ ಅವರು ಅಭಿಮಾನಿಗಳನ್ನು ಭೇಟಿಯಾಗಲಿದ್ದಾರೆ. ಜಯನಗರದ ಟೆಲಿಫೋನ್​ ಎಕ್ಸ್​ಚೇಂಜ್​ ಆಫೀಸ್​ ಬಳಿ ಇರುವ ಎಂಇಎಸ್​ ಮೈದಾನದಲ್ಲಿ ಸುದೀಪ್​ ಅವರು ಅಭಿಮಾನಿಗಳನ್ನು ಭೇಟಿಯಾಗಿ ತಮ್ಮ ಹುಟ್ಟುಹಬ್ಬವನ್ನು ಆಚರಣೆ ಮಾಡಿಕೊಳ್ಳಲಿದ್ದಾರೆ. ಈ ವೇಳೆಯೂ ಯಾರೂ ಹಾರ-ತುರಾಯಿ ಹಾಗೂ ಕೇಕ್​ಗಳನ್ನು ತರದಂತೆ ಮನವಿ ಮಾಡಿಕೊಂಡಿದ್ದಾರೆ. ಸುದೀಪ್​ ಮತ್ತು ಅಭಿಮಾನಿಗಳ ಭೇಟಿಗೆ ಪೊಲೀಸರು ಕೆಲವೇ ಗಂಟೆಗಳ ಕಾಲ ಅವಕಾಶ ನೀಡಿರುವುದರಿಂದ ಸಹಕರಿಸುವಂತೆ ಸುದೀಪ್​, ಅಭಿಮಾನಿಗಳ ಬಳಿ ಕೇಳಿಕೊಂಡಿದ್ದಾರೆ.

ಗಣೇಶ ಹಬ್ಬಕ್ಕೆ ಮ್ಯಾಕ್ಸ್ ರಿಲೀಸ್​ ಡೇಟ್​ ಅನೌನ್ಸ್​
ತಮಿಳಿನ ಖ್ಯಾತ ನಿರ್ಮಾಪಕ ಕಲೈಪುಲಿ ಎಸ್​ ತನು ಅವರೊಂದಿಗೆ ಕಿಚ್ಚ ಸುದೀಪ್​ ಮ್ಯಾಕ್ಸ್​ ಸಿನಿಮಾ ಮಾಡುತ್ತಿರುವುದು ಎಲ್ಲರಿಗೂ ತಿಳಿದಿದೆ. ಈ ಸಿನಿಮಾ ಕನ್ನಡ, ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿಯಲ್ಲಿ ರಿಲೀಸ್​ ಆಗಲಿದೆ. ಇದು ನಿರ್ದೇಶಕ ವಿಜಯ್​ ಕಾರ್ತಿಕೇಯ ಅವರ ಚೊಚ್ಚಲ ನಿರ್ದೇಶನದ ಸಿನಿಮಾ ಆಗಿದೆ. ಕಿಚ್ಚನ ಹುಟ್ಟುಹಬ್ಬ ಹಿನ್ನೆಲೆಯಲ್ಲಿ ಈ ಚಿತ್ರದ ಮೊದಲ ಲಿರಿಕಲ್​ ಹಾಡು ಇಂದು ಬೆಳಗ್ಗೆ 6.54ಕ್ಕೆ ಬಿಡುಗಡೆಯಾಯಿತು. ಸುದೀಪ್​ ಸಿಕ್ಕಾಪಟ್ಟೆ ಮಾಸ್​ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಹಾಡಿನ ಕೊನೆಯಲ್ಲಿ ಮ್ಯಾಕ್ಸ್​ ಚಿತ್ರದ ಬಿಡುಗಡೆ ದಿನಾಂಕವನ್ನು ಆಗಸ್ಟ್​ 7ರ ಗಣೇಶ ಚತುರ್ಥಿಯಂದು ಘೋಷಣೆ ಮಾಡುವುದಾಗಿ ಚಿತ್ರತಂಡ ಮತ್ತೊಂದು ಅಪ್​ಡೇಟ್​ ನೀಡಿದ್ದು, ಅಭಿಮಾನಿಗಳ ಖುಷಿಗೆ ಪಾರವೇ ಇಲ್ಲದಂತಾಗಿದೆ.

ಬಿಆರ್​ಬಿ ಅಪ್​ಡೇಟ್​
ವಿಕ್ರಾಂತ್​ ರೋಣ ಬಳಿಕ ನಿರ್ದೇಶಕ ಅನೂಪ್​ ಭಂಡಾರಿ ಮತ್ತು ಕಿಚ್ಚ ಸುದೀಪ್​ ಮತ್ತೊಮ್ಮೆ ಜತೆಯಾಗುತ್ತಿದ್ದಾರೆ. ಬಿಲ್ಲಾ ರಂಗ ಭಾಷಾ ಸಿನಿಮಾ ಮೂಲಕ ಇಬ್ಬರು ಒಟ್ಟುಗೂಡಲಿದ್ದು, ಇಂದು ಬೆಳಗ್ಗೆ 10 ಗಂಟೆಗೆ ಈ ಚಿತ್ರದ ಅಪ್​ಡೇಟ್​ ಸಿಗಲಿದೆ. ಈ ಸಿನಿಮಾ ಎರಡು ಭಾಗಗಳಲ್ಲಿ ಬರಲಿದ್ದು, ತನ್ನ ವೃತ್ತಿ ಜೀವನದಲ್ಲಿ ಈ ಸಿನಿಮಾ ಅತಿದೊಡ್ಡ ಸಿನಿಮಾ ಎಂದು ಸ್ವತಃ ಕಿಚ್ಚ ಸುದೀಪ್​ ಅವರೇ ಹೇಳಿರುವುದು ಅಭಿಮಾನಿಗಳಲ್ಲಿ ನಿರೀಕ್ಷೆಯನ್ನು ದುಪ್ಪಟಾಗಿಸಿದೆ.

ಬಾಕಿ ಬಿಲ್ ಪಾವತಿಸದಿದ್ದರೆ ಸೆಪ್ಟೆಂಬರ್ 2 ರಿಂದ ಕಾಮಗಾರಿ ಬಂದ್; ಬಿಬಿಎಂಪಿ ಗುತ್ತಿಗೆದಾರರ ಸಂಘದ ಮುಷ್ಕರ ಘೋಷಣೆ

Leave a Reply

Your email address will not be published. Required fields are marked *