BBMP
Loading ...

BBMP

ಬೆಂಗಳೂರು:- ಕೋಟಿ-ಕೋಟಿ ಬಿಲ್ ಬಾಕಿಯನ್ನು ಕೂಡಲೇ ಕ್ಲಿಯರ್ ಮಾಡುವಂತೆ ಒತ್ತಾಯಿಸಿ ಗುತ್ತಿಗೆದಾರರು ಇಂದು ಬೃಹತ್ ಪ್ರತಿಭಟನೆಗೆ ಸಜ್ಜಾಗಿದ್ದಾರೆ.

ಕಳೆದ 2 ವರ್ಷದಿಂದ ಬರೋಬ್ಬರಿ 1,600 ಕೋಟಿ ರೂ. ಹಣವನ್ನ ಪಾಲಿಕೆ ಬಾಕಿ ಉಳಿಸಿಕೊಂಡಿದೆ ಎಂದು ಆರೋಪಿಸಿರೋ ಗುತ್ತಿಗೆದಾರರು, ಶೇ.75ರಷ್ಟು ಕಾಮಗಾರಿ ಬಿಲ್ ಮಾತ್ರ ಪಾಲಿಕೆ ಪಾವತಿಸಿದ್ದು, ಉಳಿದ ಶೇಕಡಾ 25ರಷ್ಟು ಬಿಲ್​ ಪಾವತಿಗೆ ಗುತ್ತಿಗೆದಾರರು ಪಟ್ಟುಹಿಡಿದಿದ್ದಾರೆ.

ಸದ್ಯ ಬಾಕಿ ಬಿಲ್​ ಬಿಡುಗಡೆಗೆ ಡಿಸಿಎಂ ಡಿಕೆ ಶಿವಕುಮಾರ್​ಗೂ ಪತ್ರ ಬರೆದು ಸುಸ್ತಾದ ಬಿಬಿಎಂಪಿಯ ಗುತ್ತಿಗೆದಾರರು, ಇದೀಗ ಇಂದಿನಿಂದ ಪಾಲಿಕೆ ವ್ಯಾಪ್ತಿಯ ಎಲ್ಲಾ ಕಾಮಗಾರಿಗಳನ್ನ ಬಂದ್ ಮಾಡಿ ಪ್ರತಿಭಟಿಸೋಕೆ ಸಜ್ಜಾಗಿದ್ದಾರೆ. ಪಾಲಿಕೆಯಿಂದ ಕೈಗೊಂಡಿರುವ ಎಲ್ಲಾ ಕಾಮಗಾರಿಗೆ ಬ್ರೇಕ್ ಹಾಕಲು ಸಜ್ಜಾಗಿರೋ ಗುತ್ತಿಗೆದಾರರು, ಬಾಕಿ ಬಿಲ್ ಕ್ಲಿಯರ್ ಆಗೋ ತನಕ ಅನಿರ್ಧಿಷ್ಟಾವಧಿ ಪ್ರತಿಭಟನೆ ನಡೆಸೋಕೆ ಸಿದ್ಧತೆ ನಡೆಸಿದ್ದಾರೆ

ಇನ್ನು ಪಾಲಿಕೆ ಗುತ್ತಿಗೆದಾರರ ಈ ನಿರ್ಧಾರದಿಂದ ಇಂದಿನಿಂದ ಬೆಂಗಳೂರಿನಲ್ಲಿ ಪಾಲಿಕೆ ನಡೆಸ್ತಿರೋ ಎಲ್ಲಾ ಕಾಮಗಾರಿಗಳು ಸ್ಥಗಿತವಾಗಲಿದ್ದು, ಇದರಿಂದ ಸಾರ್ವಜನಿಕರಿಗೆ ಅಡಚಣೆ ಎದುರಾಗೋ ಸಾಧ್ಯತೆ ದಟ್ಟವಾಗಿದೆ.

ಯಾವ್ಯಾವ ಕಾಮಗಾರಿ ಬಂದ್?
* ರಸ್ತೆ ಕಾಮಗಾರಿ
* ಮೂಲಭೂತ ಸೌಕರ್ಯ ವಿಭಾಗದ ಕಾಮಗಾರಿಗಳು
* ವಾರ್ಡ್ ಮಟ್ಟದ ನಿರ್ವಹಣಾ ಕಾಮಗಾರಿಗಳು
* ಬೃಹತ್ ನೀರುಗಾಲುವೆ
* ವೈಟ್ ಟಾಪಿಂಗ್ ಕಾಮಗಾರಿ
* ಬಿಬಿಎಂಪಿ ಎಲೆಕ್ಟ್ರಿಕ್ ವಿಭಾಗದ ಕಾಮಗಾರಿಗಳು

51ನೇ ವಸಂತಕ್ಕೆ ಕಾಲಿಟ್ಟ ಕಿಚ್ಚ ಸುದೀಪ್​: ಅಭಿಮಾನಿಗಳ ಸಂಭ್ರಮ, ಸಿನಿಮಾ ಅಪ್​ಡೇಟ್​ಗಳ ಭರ್ಜರಿ ಉಡುಗೊರೆ

Leave a Reply

Your email address will not be published. Required fields are marked *