BBMP
Loading ...

Namma Metro

Greater Bengaluru News9 : ನಾಳೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ ಪಂದ್ಯಾವಳಿ ನಡೆಯಲಿದೆ. ಮಾರ್ಚ್.28ರ ಈ ಪಂದ್ಯಾವಳಿಗೆ ಆಗಮಿಸುವಂತ ಕ್ರಿಕೆಟ್ ಪ್ರಿಯರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ನಮ್ಮ ಮೆಟ್ರೋ ಅವಧಿಯನ್ನು ಮಧ್ಯರಾತ್ರಿ 1.30ರವರೆಗೆ ವಿಸ್ತರಿಸಲಾಗಿದೆ.

ಹೌದು.. ಮಾರ್ಚ್.28ರ ನಾಳೆ ವಿವಿಧ ಟರ್ಮಿನಲ್ ನಿಲ್ದಾಣಗಳಿಂದ ಕೊನೆಯ ಮೆಟ್ರೋ ಸಂಚಾರದ ಅವಧಿಯನ್ನು ವಿಸ್ತರಣೆ ಮಾಡಿ ಬಿಎಂಆರ್ ಸಿಎಲ್ ಆದೇಶಿಸಿದೆ.

ವೈಟ್‌ಫೀಲ್ಡ್‌ನಿಂದ ರಾತ್ರಿ 12.30ಕ್ಕೆ, ಚಲ್ಲಘಟ್ಟ, ರೇಷ್ಮೆಸಂಸ್ಥೆ ಹಾಗೂ ಮಾದಾವರ ಟರ್ಮಿನಲ್‌ಗಳಿಂದ ರಾತ್ರಿ 12.45ಕ್ಕೆ, ಬೊಮ್ಮಸಂದ್ರದಿಂದ ರಾತ್ರಿ 1ಕ್ಕೆ, ಆರ್‌.ವಿ.ರಸ್ತೆಯಿಂದ ರಾತ್ರಿ 2ಕ್ಕೆ ಕೊನೆ ರೈಲು ಸಂಚರಿಸಲಿದೆ. ಮೆಜೆಸ್ಟಿಕ್‌ನಿಂದ ನಾಲ್ಕು ದಿಕ್ಕುಗಳಿಗೆ ಮಧ್ಯರಾತ್ರಿ 1.30ಕ್ಕೆ ಕೊನೆಯ ರೈಲು ಹೊರಡಲಿದೆ.

Leave a Reply

Your email address will not be published. Required fields are marked *