BBMP
Loading ...

BBMP

ಬೆಂಗಳೂರುಆದಾಯ ಹೆಚ್ಚಿಸಲು, ವಂಚನೆಗೆ ಕಡಿವಾಣ ಹಾಕಲು ಹಾಗೂ ನಾಗರಿಕರಿಗೆ ಕೈಗೆಟುಕುವ ಸೌಲಭ್ಯ ದೊರೆಯುವಂತೆ ಮಾಡಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಸಜ್ಜಾಗಿದೆ. ಈಗಾಗಲೇ ಇ-ಖಾತೆ ಪಡೆಯಲು ಪ್ರತ್ಯೇಕ ಪೋರ್ಟಲ್ ತೆರೆದಿದೆ. ಇನ್ನೂ ಈ ವೇಳೆ ಇ-ಖಾತಾ ಪಡೆಯಲು ಲಂಚ ಕೇಳಿದ್ರೆ ಸಹಾಯವಾಣಿಗೆ ಕರೆ ಮಾಡಲು ತಿಳಿಸಲಾಗಿದೆ.

ಹೌದು ಬಿಬಿಎಂಪಿ ವ್ಯಾಪ್ತಿಯಲ್ಲಿ ನಾಗರಿಕರಿಗೆ ಇ-ಖಾತಾ ಪಡೆಯಲು ಅನುಕೂಲವಾಗುವ ನಿಟ್ಟಿನಲ್ಲಿ ವೃತ್ತಿಪರ, ಏಕ ಇ-ಖಾತಾ ನಾಗರಿಕ ಸಹಾಯವಾಣಿಯನ್ನು ಪ್ರಾರಂಭಿಸಲಾಗಿದೆ. ಉಪ ಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ ಶಿವಕುಮಾರ್ ಅವರ ನಿರ್ದೇಶನದಂತೆ ಸಾರ್ವಜನಿಕರಿಗೆ ಇ-ಖಾತಾಗಳು ಸುಗಮವಾಗಿ ಸಿಗುವುದನ್ನು ಖಚಿತಪಡಿಸಿಕೊಳ್ಳಲು, ಬಿಬಿಎಂಪಿಯು ತಕ್ಷಣದ ಕ್ರಮಗಳನ್ನು ಕೈಗೊಂಡಿದೆ.

ಬಿಬಿಎಂಪಿಯು ಕೈಗೊಂಡಿರುವ ತಕ್ಷಣದ ಕ್ರಮಗಳ ವಿವರ:

* ವೃತ್ತಿಪರ, ಏಕ ಇ-ಖಾತಾ ನಾಗರಿಕ ಸಹಾಯವಾಣಿ ಪ್ರಾರಂಭ. eKhata Citizen Helpline – 9480683695

* ಯಾರೇ ಲಂಚ ಕೇಳಿದರೆ ಅಥವಾ ವಿಳಂಬವಾದರೆ, ದಯವಿಟ್ಟು ನಾಗರಿಕ ಸಹಾಯವಾಣಿಗೆ ಕರೆ ಮಾಡಿ.

* ನಾಗರಿಕರು ತಾವೇ ಆನ್‌ಲೈನ್‌ನಲ್ಲಿ ಇ-ಖಾತಾವನ್ನು ರಚಿಸಲು ಪ್ರೋತ್ಸಾಹಿಸಲಾಗುತ್ತದೆ.https://BBMPeAasthi.karnataka.gov.in

ನಾಗರಿಕರು YouTube ತರಬೇತಿ ವೀಡಿಯೊಗಳನ್ನು ನೋಡಬಹುದು:

ನ್ನಡ ಭಾಷೆ: https://youtu.be/JR3BxET46po

ಆಂಗ್ಲ ಭಾಷೆ: https://youtu.be/GL8CWsdn3wo

ಸಹಾಯಕ ಕಂದಾಯ ಅಧಿಕಾರಿ ಕಚೇರಿಗಳನ್ನು ನಾಗರಿಕರಿಗೆ ಸುಗಮವಾಗಿ ಇ-ಖಾತಾ ನೀಡಲು ವಿಸ್ತರಿಸಲಾಗಿದೆ:

* 1,000 ಕ್ಕೂ ಅಧಿಕ ಹೆಚ್ಚುವರಿ ಕೇಸ್ ವರ್ಕರ್ ಲಾಗಿನ್‌ಗಳನ್ನು ನೀಡಲಾಗಿದೆ.

* 200 ಕ್ಕೂ ಅಧಿಕ ಹೆಚ್ಚುವರಿ ಸಹಾಯಕ ಕಂದಾಯ ಅಧಿಕಾರಿಗಳನ್ನು ನಿಯೋಜಿಸಲಾಗಿದೆ.

* ಯಾರಿಂದಾದರೂ ಯಾವುದಾದರೂ ಅನಗತ್ಯ ವಿಳಂಬವಾದಲ್ಲಿ, ಪಾಲಿಕೆಯು ಕ್ರಮ ಕೈಗೊಳ್ಳುತ್ತದೆ ಮತ್ತು ನಾಗರಿಕರು ಬದಲಿ ಸಹಾಯಕ ಕಂದಾಯ ಅಧಿಕಾರಿ/ಕೇಸ್ ವರ್ಕರ್‌ಗಳನ್ನು ಸಹ ಭೇಟಿ ನೀಡಬಹುದಾಗಿರುತ್ತದೆ.

ಆಧಾರ್ ಇಲ್ಲದವರಿಗೆ ಇ-ಖಾತಾ ಪಡೆಯಲು ಅಗತ್ಯವಿರುವ ದಾಖಲೆಗಳು: 

* ಪಾಸ್‌ ಪೋರ್ಟ್

* ಚಾಲನಾ ಪರವಾನಗಿ

* ಮತದಾರರ ಗುರುತಿನ ಚೀಟಿ

ಆಧಾರ್ ಕಾರ್ಡ್ ಇಲ್ಲದವರು ಈ ಮೂರು ದಾಖಲೆಗಳಲ್ಲಿ ಯಾವುದಾದರೂ ಒಂದಿ ದಾಖಲೆಯನ್ನು ಸಲ್ಲಿಸಿ ನಿಮ್ಮ ಇ-ಖಾತಾವನ್ನು ಪಡೆದುಕೊಳ್ಳಬಹುದು. ಇನ್ನು ತುರ್ತಾಗಿ ಮಾರಾಟ/ವ್ಯವಹಾರ ಮಾಡಬೇಕಾದವರು, ತ್ವರಿತ ಅಂತಿಮ ಇಖಾತಾಗಾಗಿ ಪಾಲಿಕೆಯ ಸಹಾಯವಾಣಿ ಲಭ್ಯವಿರುತ್ತದೆ. ಇನ್ನು ಈ ಆಧಾರ್ ಕಾರ್ಡ್ ಇಲ್ಲದವರಿಗೆ ಪ್ರಸ್ತುತ ಸಹಾಯಕ‌ ಕಂದಾಯ ಅಧಿಕಾರಿ ಕಚೇರಿಗೆ ಭೇಟಿ ನೀಡಿ ಇ-ಖಾತಾವನ್ನು ಪಡೆಯಲು‌ ಮಾತ್ರ ಅವಕಾಶ ಕಲ್ಪಿಸಲಾಗಿದೆ. 1. ನೋಂದಾಯಿತ ಪ್ರಮಾಣ ಪತ್ರ ಸಂಖ್ಯೆ, 2. ಆಸ್ತಿ ತೆರಿಗೆ SAS ಸಂಖ್ಯೆ ಹಾಗೂ 3. ಬೆಸ್ಕಾಂ 10 ಅಂಕಿಯ ಖಾತೆ ಸಂಖ್ಯೆ (ಖಾಲಿ ಪ್ಲಾಟ್‌ಗಳಿಗೆ ಐಚ್ಛಿಕ) ಬೇಕಿರುತ್ತದೆ. ಉಳಿದೆಲ್ಲದರಲ್ಲಿ ಯಾವುದೇ ಬದಲಾವಣೆಯಿರುವುದಿಲ್ಲ.

Leave a Reply

Your email address will not be published. Required fields are marked *