Greater Bengaluru News9 : ಅಕ್ರಮ ಹಾಗೂ ನಕಲಿ ಬಿಲ್ ಪ್ರಕರಣಕ್ಕೆ ಸಂಬಂಧಿಸಿದಂತೆ 310 ಎಂಜಿನಿಯರ್ಗಳಿಗೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ನೋಟಿಸ್ ಜಾರಿ ಮಾಡಿದೆ.
ಬಿಬಿಎಂಪಿಯಾಗಿದ್ದಾಗ 2008–09 ಮತ್ತು 2011–12ರ ಅವಧಿ ಯಲ್ಲಿ ಗಾಂಧಿನಗರ, ಮಲ್ಲೇಶ್ವರ, ರಾಜ ರಾಜೇಶ್ವರಿನಗರ ವಿಧಾನಸಭೆ ಕ್ಷೇತ್ರಗಳ ವ್ಯಾಪ್ತಿಯಲ್ಲಿ ನಡೆದಿದ್ದ ಸಾರ್ವಜನಿಕ ಕಾಮಗಾರಿಗಳ ಬಗ್ಗೆ ತನಿಖೆ ನಡೆಸಲು ನ್ಯಾಯಮೂರ್ತಿ ಎಚ್.ಎನ್. ನಾಗಮೋಹನ್ ದಾಸ್ ನೇತೃತ್ವದ ಸಮಿತಿಯನ್ನು ರಚಿಸಲಾಗಿತ್ತು. ಈ ಕುರಿತು ಮೇ 13ರಂದು ಹೊರಡಿಸಿರುವ ಅಧಿಸೂಚನೆಯಲ್ಲಿ, ಕಾಮಗಾರಿ ನಡೆಯದಿದ್ದರೂ ನಕಲಿ ಬಿಲ್ಗಳನ್ನು ಸಲ್ಲಿಸಲಾಗಿದೆ ಎನ್ನಲಾಗಿದೆ.
ನಗರಾಭಿವೃದ್ಧಿ ಇಲಾಖೆ ಈ ಹಿಂದೆ ನೀಡಿದ್ದ ನೋಟಿಸ್ಗಳಿಗೆ ಎಂಜಿನಿಯರ್ ಗಳು ಪ್ರತಿಕ್ರಿಯಿಸಿಲ್ಲ. ಹೀಗಾಗಿ, ಅಧಿಸೂಚನೆ ಹೊರಡಿಸಿರುವ 15 ದಿನಗಳಲ್ಲಿ ಎಂಜಿನಿಯರ್ಗಳು ಪ್ರಾಧಿಕಾರದ ಮುಂದೆ ಹಾಜರಾಗಿ, ಲಿಖಿತ ಪ್ರತಿಕ್ರಿಯೆ ಸಲ್ಲಿಸಬೇಕೆಂದು ಸೂಚಿಸಲಾಗಿದೆ.
2008–09 ಮತ್ತು 2011–12ರ ಅವಧಿಯಲ್ಲಿ ಸಂಬಂಧಿಸಿದ ವಲಯ ಗಳಲ್ಲಿದ್ದ ಸಹಾಯಕ ಎಂಜಿನಿಯರ್, ಸಹಾಯಕ ಕಾರ್ಯಪಾಲಕ ಎಂಜಿನಿಯರ್, ಕಾರ್ಯಪಾಲಕ ಎಂಜಿನಿಯರ್ಗಳಿಗೆ ನೋಟಿಸ್ ಜಾರಿ ಮಾಡಲಾಗಿದೆ.


