BBMP
Loading ...

Vidhanasoudha

Greater Bengaluru News9 : ರಾಜ್ಯದಲ್ಲಿ ಸಾರ್ವಜನಿಕರಿಗೆ ಡಿಜಿಟಲ್ ಇ-ಸ್ಟಾಂಪ್ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ. ಕರ್ನಾಟಕ ಮುದ್ರಾಂಕ (ಡಿಜಿಟಲ್ ಇ-ಸ್ಟಾಂಪ್) ನಿಯಮಗಳು–2025ರ ನಿಯಮ (3)ರ ಪ್ರಕಾರ, ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಕಾವೇರಿ-2 ತಂತ್ರಾಂಶವನ್ನು “ಡಿಜಿಟಲ್ ಇ-ಸ್ಟಾಂಪ್ ಅಪ್ಲಿಕೇಶನ್” ಎಂದು ಅಧಿಕೃತವಾಗಿ ಅಧಿಸೂಚಿಸಲಾಗಿದೆ.

ಕಾವೇರಿ-2 ಮೂಲಕ ಸಂಪೂರ್ಣ ಡಿಜಿಟಲ್ ಸೇವೆ

ಸರ್ಕಾರದ ಆದೇಶದಂತೆ, ಕಾವೇರಿ-2 ತಂತ್ರಾಂಶದ ಮೂಲಕ ನಾಗರಿಕರು ಯಾವುದೇ ಮಧ್ಯವರ್ತಿಗಳ ಅವಶ್ಯಕತೆ ಇಲ್ಲದೆ ಡಿಜಿಟಲ್ ಇ-ಸ್ಟಾಂಪ್ ಪಡೆಯಬಹುದಾಗಿದೆ. ಇದರಿಂದ ಮುದ್ರಾಂಕ ಶುಲ್ಕದಲ್ಲಿ ನಡೆಯುತ್ತಿದ್ದ ವಂಚನೆ, ಭದ್ರತಾ ಕೊರತೆ, ನಕಲಿ ಸಹಿ, ನಕಲಿ ಪ್ರತಿಗಳು ಹಾಗೂ ತಪ್ಪು ವರ್ಗೀಕರಣದಂತಹ ಅಕ್ರಮಗಳಿಗೆ ತಡೆ ಬೀಳಲಿದೆ.

ಆದಾಯ ನಷ್ಟ ತಡೆಯಲು ಸರ್ಕಾರದ ಕ್ರಮ

ಮುದ್ರಾಂಕ ಶುಲ್ಕ ವಂಚನೆಯಿಂದ ಸರ್ಕಾರಕ್ಕೆ ಉಂಟಾಗುತ್ತಿದ್ದ ಆದಾಯ ನಷ್ಟವನ್ನು ತಡೆಯುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ. ಕರ್ನಾಟಕವು ಸಂಪೂರ್ಣ ಡಿಜಿಟಲ್ ನೋಂದಣಿ ವ್ಯವಸ್ಥೆಯತ್ತ ಸಾಗುತ್ತಿರುವ ಹಿನ್ನೆಲೆಯಲ್ಲಿ, ಭದ್ರತೆ ಮತ್ತು ಪಾರದರ್ಶಕತೆಯನ್ನು ಹೆಚ್ಚಿಸುವುದು ಈ ಯೋಜನೆಯ ಮುಖ್ಯ ಗುರಿಯಾಗಿದೆ.

ಮನೆಯಿಂದಲೇ ಆನ್‌ಲೈನ್ ಮೂಲಕ ಇ-ಸ್ಟಾಂಪ್

ಸರ್ಕಾರದ ಅಧಿಸೂಚನೆ ಸಂಖ್ಯೆ: ಕಂಇ/36/ಎಂಎನ್ಎಂಯು/2025, ದಿನಾಂಕ: 07-08-2025ರ ಅಡಿಯಲ್ಲಿ ರೂಪಿಸಲಾದ ಕರ್ನಾಟಕ ಮುದ್ರಾಂಕ (ಡಿಜಿಟಲ್ ಇ-ಸ್ಟಾಂಪ್) ನಿಯಮಗಳು–2025ರಂತೆ, ನಾಗರಿಕರು ಮನೆಯಿಂದಲೇ ಆನ್‌ಲೈನ್ ಮೂಲಕ ಡಿಜಿಟಲ್ ಇ-ಸ್ಟಾಂಪ್ ಪಡೆಯುವ ಅವಕಾಶ ದೊರಕಲಿದೆ.

Leave a Reply

Your email address will not be published. Required fields are marked *